ವಯಸ್ಸಿನಲ್ಲಿ ಮಾಡಿದ ಪಾಪದ ಕೆಲಸಕ್ಕೆ ಇದೀಗ ನರಕ ಅನುಭವಿಸುತ್ತಿರುವ ದೊಡ್ಡಣ್ಣ

 | 
Doddanna

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ದೊಡ್ಡಣ್ಣ, ತಮ್ಮ ಅಭಿನಯದಿಂದ ಮಾತ್ರವಲ್ಲದೆ ಹಾಸ್ಯಭರಿತ ಪಾತ್ರಗಳಿಂದಲೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದರೆ ಇತ್ತೀಚೆಗೆ ಅವರು ತಮ್ಮ ಆರೋಗ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಅಭಿಮಾನಿಗಳಲ್ಲಿ ಕಳವಳ ತಂದಿದೆ.

ಒಂದು ಸಮಾರಂಭದಲ್ಲಿ ದೊಡ್ಡಣ್ಣ ತಮ್ಮನ್ನು ಕಾಡಿದ ಅಪಾಯಕಾರಿ ಕಾಯಿಲೆ ಸ್ಲೀಪ್ ಅಪ್ನಿಯಾ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಯಾವ ಗಾಡಿಯಲ್ಲಿ ಕೂತರೂ, ಸಭೆಗಳಲ್ಲಿ ಕುಳಿತರೂ, ಅರಿವಿಲ್ಲದೇ ನಿದ್ದೆ ಬರುತ್ತಿತ್ತು. ಜನರು ಅದನ್ನು ಸುಖನಿದ್ದೆ ಎಂದುಕೊಳ್ಳುತ್ತಿದ್ದರು. ಆದರೆ ಅದು ಸ್ಲೀಪ್ ಅಪ್ನಿಯಾ ಎನ್ನುವ ಗಂಭೀರ ಕಾಯಿಲೆ ಎಂದು ವೈದ್ಯರು ತಿಳಿಸಿದರು. ಮಲಗಿದ್ದಲ್ಲೇ ಸಾವನ್ನೇ ತರಬಲ್ಲ ಕಾಯಿಲೆ ಇದು ಎಂದು ದೊಡ್ಡಣ್ಣ ಹಂಚಿಕೊಂಡರು.

ದೊಡ್ಡಣ್ಣರ ಮಾತುಗಳಿಂದ ಸ್ಲೀಪ್ ಅಪ್ನಿಯಾ ಎಂಬ ಕಾಯಿಲೆಯ ಗಂಭೀರತೆ ಸ್ಪಷ್ಟವಾಗುತ್ತದೆ. ಸರಿಯಾದ ಚಿಕಿತ್ಸೆಯಿಲ್ಲದೆ ಇದರಿಂದ ಜೀವಕ್ಕೆ ಅಪಾಯವಿರುವುದನ್ನು ಅವರು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಎಲ್ಲರನ್ನು ನಗಿಸಿದ ಹಾಸ್ಯ ನಟನ ಬದುಕಲ್ಲಿ ಇಂತಹ ಒಂದು ಕಾಯಿಲೆ ಇರುವುದು ಅಭಿಮಾನಿಗಳಿಗೆ ನೋವನ್ನು ತಂದಿದೆ.

ಇಂದು ಕೂಡಾ ತಮ್ಮ ಅಭಿನಯದಲ್ಲಿ ಸಕ್ರಿಯರಾಗಿರುವ ದೊಡ್ಡಣ್ಣ, ಆರೋಗ್ಯದ ಸವಾಲುಗಳನ್ನು ಎದುರಿಸುತ್ತಾ ಬದುಕಿನಲ್ಲಿ ಧೈರ್ಯವಾಗಿ ನಿಂತಿದ್ದಾರೆ. ಅವರ ಕಥೆ ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವ ಎಲ್ಲರಿಗೂ ಒಂದು ಪಾಠ ಆಗೋದಂತೂ ಗ್ಯಾರಂಟಿ