ದೊಡ್ಮಗ ಒಳಗಿದ್ದರು ನೊಡೋಕೆ ಹೋಗದ ಸುಮಕ್ಕ; ಕಾರಣ ಹೇಳಿದ ಮಹಾತಾಯಿ

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ನೋಡಲು ಸುಮಲತಾ ಅಂಬರೀಷ್ ಈವರೆಗೂ ಹೋಗೇ ಇಲ್ಲ. ರಾಕ್‌ಲೈನ್ ವೆಂಕಟೇಶ್ ಕೂಡ ದರ್ಶನ್ ನೋಡಲು ಜೈಲಿಗೆ ಹೋಗಿರುವ ಸುದ್ದಿಗಳಿಲ್ಲ.ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸುಮಲತಾ ಅಂಬರೀಷ್ ಪರ ಪ್ರಚಾರ ಮಾಡಿದ್ದ ದರ್ಶನ್ ಈಗ ಒಂಟಿಯಾಗಿಬಿಟ್ಟಿದ್ದಾರೆ.
ದರ್ಶನ್ ಅವರು ಈ ಹಿಂದೆ ಸುಮಲತಾ ಅಂಬರೀಷ್ ಅವರನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಲು ಭಾರೀ ಶ್ರಮಿಸಿದ್ದರು.ಆದರೆ ದರ್ಶನ್ ತೂಗುದೀಪ್ ಅವರು ಸದ್ಯ ಏಕಾಂಗಿಯಾಗಿಬಿಟ್ಟಿದ್ದಾರೆ. ಇತ್ತ ಅವರನ್ನು ನೋಡಲು ಪತ್ನಿ ಹಾಗೂ ಮಗ ಬಿಟ್ಟರೆ ಅವರ ಪೋಷಕರು ಜೈಲು ಬಳಿ ಸುಳಿದಿಲ್ಲ.
ಮತ್ತೊಂದೆಡೆ ಮಂಡ್ಯದ ಮಾಜಿ ಸಂಸದೆ ಸುಮಲತಾ ಕೂಡ ದರ್ಶನ್ ಅವರನ್ನು ನೋಡಲು ಜೈಲು ಬಳಿ ಕಾಣಿಸಿಕೊಂಡಿಲ್ಲ. ದರ್ಶನ್ ಅವರು ಸುಮಲತಾ ಅವರನ್ನು ಅಮ್ಮಾ... ಅಂತಲೇ ಕರೆಯುತ್ತಿದ್ದರು. ಅಂಬರೀಷ್ ಅವರು ಅಗಲಿದ ನಂತರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಅವರನ್ನು ಗೆಲ್ಲಿಸಲು ದರ್ಶನ್ ಸಾಕಷ್ಟು ಶ್ರಮಿಸಿದ್ದರು.
ಸುಮಲತಾ ಅವರನ್ನು ಗೆಲ್ಲಿಸಲೇಬೇಕು ಎನ್ನುವ ಛಲದಿಂದ ನಿಂತಿದ್ದ ದಾಸ ಕೊನೆಗೂ ಗೆಲುವು ಸಾಧಿಸಿಯೇ ಬಿಟ್ಟರು. ಆದೀಗ ಅವರು ಜೈಲಿನಲ್ಲಿ ಒಂಟಿಯಾಗಿ ಮುದ್ದೆ ಊಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ಸಂದರ್ಭದಲ್ಲಿ ಜೊತೆಯಾಗಿದ್ದ ರಾಕ್‌ಲೈನ್ ವೆಂಕಟೇಶ್ ಕೂಡ ದರ್ಶನ್ ಬಗ್ಗೆ ಮಾತನಾಡುತ್ತಿಲ್ಲ.
ಇದರಿಂದಾಗಿ ಸುಮಲತಾ ಹಾಗೂ ರಾಕ್‌ಲೈನ್ ವೆಂಕಟೇಶ್ ಅವರು ತೆರೆಮರೆಯಲ್ಲಿ ದರ್ಶನ್ ಬಿಡುಗಡೆಗೆ ಪ್ರಯತ್ನ ನಡೆಸಿರಬಹುದು ಎನ್ನುವ ಅನುಮಾನ ಶುರುವಾಗಿದೆ. ಆದರೆ ಕೆಲ ಮೂಲಗಳ ಪ್ರಕಾರ ಸುಮಲತಾ ಅಂಬರೀಶ್ ದರ್ಶನ್ ನೋಡೋಕೆ ಬಂದಿದ್ದರು. ಆದರೆ ದರ್ಶನ್ ಅವರನ್ನು ನೋಡದೆ ಮಾತನಾಡದೆ ವಾಪಸ್ಸು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.