ದೇವಲೋಕದ ಅಪ್ಸರೆ ಮೊನಾಲಿಸ ಮೇಲೆ ಕಾ ಮುಕರ ಕಣ್ಣು, ರಾತ್ರಿ ಮೈಮೇಲೆ ಬಿದ್ದ ಯುವಕರು
Jan 21, 2025, 07:42 IST
|

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ 144 ವರ್ಷಗಳ ಬಳಿಕ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭವು ಹಲವು ವಿಚಾರಕ್ಕಾಗಿ ವಿಶ್ವದ ಗಮನಸೆಳೆದಿದ್ದು, ಅದರಲ್ಲಿ ಲಕ್ಷಾಂತರ ಮಂದಿ ಸಾಧು, ಸಂತರು ಭಿನ್ನ ,ವಿಭಿನ್ನ ವೇಷಭೂಷಣಗಳೊಂದಿಗೆ ಭಾಗಿಯಾಗುತ್ತಿದ್ದಾರೆ.
ಎಲ್ಲರ ಪೈಕಿ ಐಐಟಿ ಬಾಂಬೆಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದ ಸಾಧಕರೊಬ್ಬರು ಈಗ ಬಾಬಾ ಆಗಿ ಬದಲಾಗಿ ಒಂದೆಡೆ ವೈರಲ್ ಆದ್ರೆ ಮತ್ತೊಬ್ಬ ನಟಿ ಕಮ್ ಮಾಡೆಲ್ ನಾಗ ಸನ್ಯಾಸಿಯಾಗಿ ಕಾಣಿಸಿಕೊಂಡಳು. ಇವೆಲ್ಲದರ ಹೊರತಾಗಿ ಡಿಸಿ ಒಬ್ಬರು ಸನ್ಯಾಸಿಯಾಗಿದ್ದು ಹಾಗೂ ಯಕ್ಷ ಕಿನ್ನರಿಯಂತೆ ಸುಂದರ ಮೊನಾಲಿಸಾ ಕಾಣಿಸಿದ್ದು ಕೂಡ ವಿಶೇಷವಾಗಿತ್ತು. ಬನ್ನಿ ಹಾಗಿದ್ರೆ ಒಬ್ಬೊಬ್ಬರ ಕುರಿತಾಗಿ ಒಂದಿಷ್ಟು ಮಾಹಿತಿ ತಿಳ್ಕೊಂಡ್ ಬರೋಣ.
ಸ್ನೇಹಿತರೇ...ಮಹಾ ಕುಂಭಮೇಳದ ಹೊತ್ತಲ್ಲಿ ಐಐಟಿ ಬಾಬಾ ಭಾರೀ ವೈರಲ್ ಆಗಿದ್ದಾರೆ. ವರ್ಷಕ್ಕೆ 36 ಲಕ್ಷ ರೂಪಾಯಿ ಪ್ಯಾಕೇಜ್ ಇರುವ ಉದ್ಯೋಗ, 4 ವರ್ಷಗಳ ಕಾಲ ಪ್ರೀತಿಸಿದ ಹುಡುಗಿ.ಬದುಕಿನ ಭರವಸೆಯ ವೃತ್ತಿ ಜೀವನವನ್ನು ತೊರೆದು ಆಧ್ಯಾತ್ಮಿಕತೆ ಕಡೆ ಮುಖ ಮಾಡಿದ ಐಐಟಿ ಬಾಬಾ ಮೂಲತಃ ಹರಿಯಾಣದವರು. ಇವರ ಹೆಸರು ಅಭಯ್ ಸಿಂಗ್ ಅಂತಾ, 36 ವರ್ಷದ ಅಭಯ್ ಸಿಂಗ್ ತಮ್ಮ ಯುನಿಕ್ ಜರ್ನಿಯಿಂದ ಎಲ್ಲರಿಗಿಂತ ಭಿನ್ನವಾಗಿ ಕುಂಭಮೇಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕ್ಕಂದಿನಿಂದಲೂ ಆಧ್ಯಾತ್ಮಿಕತೆ ಕಡೆ ಒಲವು ಹೊಂದಿದ್ದ ಅಭಯ್ ಸಿಂಗ್ ಮೂರು ವರ್ಷಗಳ ಹಿಂದೆ ಸನ್ಯಾಸಿಯಾಗಿದ್ದಾರೆ. ಬಾಲ್ಯದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಭಯ್ ಸಿಂಗ್ ಲೌಖಿಕ ಜೀವನವನ್ನೆಲ್ಲಾ ಬಿಟ್ಟು ದೈವದ ಹಾದಿಯನ್ನು ತುಳಿದಿದ್ದಾರೆ.
ಸ್ನೇಹಿತರೇ... ಅಭಯ್ ಸಿಂಗ್ ಅವರದ್ದು ಒಂದು ತರಹದ ಕತೆಯಾದರೆ ಕುಂಭಮೇಳದಲ್ಲಿ ಕಾಣಿಸಿಕೊಂಡು ಫೇಮಸ್ ಆಗಿರುವ ಸುಂದರ ಸಾಧ್ವಿಯ ಹೆಸರು ಹರ್ಷ ರಿಚಾರಿಯಾ ಎಂದು ಹೇಳಲಾಗುತ್ತದೆ. ಹರ್ಷ ರಿಚಾರ್ಯ ಭೋಪಾಲ್ ನಿವಾಸಿ. ಹರ್ಷ ರಿಚಾರಿಯಾ ಈ ಮೊದಲು ನಟಿ ಆಗಿಯೂ ಮಾಡೆಲ್ ಆಗಿಯೂ ಕಾಣಿಸಿಕೊಂಡಿದ್ದರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದರು.ಹರ್ಷ ರಿಚಾರಿಯಾ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಇವರು ಆಧ್ಯಾತ್ಮಿಕ ಬದುಕಿಗೆ ಮಾರುಹೋಗಿ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದಗಿರಿ ಜಿ ಮಹಾರಾಜ್ ಅವರ ಶಿಷ್ಯೆಯಾಗಿ ಸನ್ಯಾಸ ದೀಕ್ಷೆ ಪಡೆದಿದ್ದಾರೆ.
ಸ್ನೇಹಿತರೇ... ಇನ್ನು ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಐ.ಆರ್.ಪೆರುಮಾಳ ಅವರು ಮಹಾಕುಂಭ ಮೇಳದಲ್ಲಿ ಸನ್ಯಾಸಿಯಾಗಿ ಪ್ರತ್ಯಕ್ಷರಾಗಿದ್ದಾರೆ.ಗಂಟು ಕಟ್ಟಿದ ಕೂದಲು ಇರುವ ಫೋಟೋ ಈಗ ಫುಲ್ ವೈರಲ್ ಆಗಿದ್ದು, ಅವರ ವೈರಾಗ್ಯ ಜೀವನ ರಾಜ್ಯದ ಜನತೆಗೆ ಅಚ್ಚರಿ ಮೂಡಿಸಿದೆ.1993- 94 ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಅಧಿಕಾರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ 2012ರಲ್ಲಿ ಅವರು ನಿವೃತ್ತರಾಗಿದ್ದರು. ನಂತರದಲ್ಲಿ ಸನ್ಯಾಸತ್ವ ಸ್ವೀಕರಿಸಿ ಶಿವಯೋಗಿ ಪೆರುಮಾಳ್ ಸ್ವಾಮೀಜಿಯಾಗಿದ್ದ ನಿವೃತ್ತ ಅಧಿಕಾರಿ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುವ ಫೋಟೋ ಈಗ ವೈರಲ್ ಆಗಿ ರಾಜ್ಯದ ಜನರ ಗಮನ ಸೆಳೆದಿದೆ.
ಸ್ನೇಹಿತರೇ ... ನೋಡಲು ಅಪ್ಸರೆಯರ ರೂಪ ಹೊಂದಿದ್ದು ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ವಿಶಿಷ್ಟ ಕಣ್ಣಿನ ಸುಂದರಿ ಮೊನಾಲಿಸಾ ಭೋಸ್ಲೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸ್ನಿಗ್ಧ ಸೌಂದರ್ಯದಿಂದ ವೈರಲ್ ಆಗಿದ್ದಾರೆ.ಮೊನಾಲಿಸಾ ಹಾಗೂ ಆಕೆಯ ತಂಗಿ ಮಹಾ ಕುಂಭಮೇಳ ಮಾತ್ರವಲ್ಲ ಎಲ್ಲಿ ಜನ ದಟ್ಟಣೆ ಇರುತ್ತದೆಯೋ ಅಲ್ಲಿ ಮಣಿ ಸರಗಳನ್ನು, ಹೂವುಗಳನ್ನು ಮಾರಿ ತಮ್ಮ ಜೀವನ ನಡೆಸುತ್ತಿದ್ದಾರಂತೆ. ನೋಡಲು ಬಹು ಆಕರ್ಷಕವಾಗಿರುವ ಮೊನಾಲಿಸಾ ತಮ್ಮ ನಗು ಮುಖದಿಂದಲೇ ಎಲ್ಲರನ್ನೂ ಮಾತನಾಡಿಸಿ ಮಣಿಗಳ ಸರಗಳು ಹಾಗೂ ರುದ್ರಾಕ್ಷಿ ಸರಗಳ ಮಾರಾಟ ಮಾಡುತ್ತಿದ್ದಾರೆ.ಸದ್ಯ ಈಕೆಯ ಹಲವು ವಿಡಿಯೋಗಳು ವೈರಲ್ ಆಗುತ್ತಿದ್ದು ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಎಲ್ಲೆಡೆ ಹರ..ಹರ ಮಹಾದೇವ ಝೇಂಕಾರ, ಕಣ್ಣು ಹಾಯಿಸಿದಷ್ಟು ಭಕ್ತ ಸಾಗರ, ಸಾಧು ಸಂತರು, ನಾಗ ಸಾಧುಗಳು, ಜಪ-ತಪ, ಮಹಾದೇವನ ವರ್ಣನೆ, ತಾಂಡವ ನೃತ್ಯ, ಜೊತೆಗೆ ಕೋಟ್ಯಂತರ ಭಕ್ತರಿಂದ ಪವಿತ್ರಾ ಸ್ನಾನ ಈ ಎಲ್ಲಾ ದೃಶ್ಯಗಳಿಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಹೀಗೆ ಹಲವಾರು ವಿಶೇಷತೆಗೆ ಸಾಕ್ಷಿಯಾಗುತ್ತಿದೆ.