ಮೊದಲ ಗಂಡ ಅಮೆರಿಕಾಗೆ ಕರೆದುಕೊಂಡು ಹೋಗಿ ಮಾಡಿ ದ್ದೇ ಬೇರೆ; ಆಮೇಲೆ ಡಿವೋರ್ಸ್

 | 
H
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ್ದ ಖ್ಯಾತ ನಟಿ ಸುಧಾರಾಣಿ ಇದೀಗ ಕಿರುತೆರೆ ಮೂಲಕ ಮತ್ತೆ ಜನರಿಗೆ ಹತ್ತಿರವಾಗಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸುಧಾರಾಣಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹೀಗಿರುವಾಗ ಅವರ ವೈಯಕ್ತಿಕ ಜೀವನದ ಬಗ್ಗೆ ಜನರಿಗೆ ಒಂದಿಷ್ಟು ಕುತೂಹಲವಿದೆ.
 ಮುಖ್ಯವಾಗಿ ಅವರು ಮೊದಲ ಪತಿಯಿಂದ ಯಾಕೆ ವಿಚ್ಛೇದನ ಪಡೆದರು ಎನ್ನುವ ಪ್ರಶ್ನೆ ಎಲ್ಲರಲ್ಲಿದೆ.ಈ ಪ್ರಶ್ನೆಗೆ ಸ್ವತಃ ಸುಧಾರಾಣಿ ಅವರೇ ಉತ್ತರಿಸಿದ್ದಾರೆ. ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾನು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬಂದ ಕಾರಣ ಅಮ್ಮ ಮೊದಲೇ ಹೇಳಿದ್ದರು, 20-22 ವರ್ಷ ಅಷ್ಟೇ ಸಿನಿಮಾ. ಆಮೇಲೆ ಸಿನಿಮಾ ಬೇಡ ಅಂತಾ. 
ಬಳಿಕ ಲೈಫ್ ಅಲ್ಲಿ ಸೆಟ್ಲ್ ಆಗಬೇಕು ಎನ್ನುತ್ತಿದ್ದರು. ಅವರ ಆಗಿನ ಆಲೋಚನೆಯಂತೆ ನೋಡಿ ಮದುವೆ ಮಾಡಿದರು.ಆರಂಭದಲ್ಲಿ ಬೇರೆ ದೇಶಕ್ಕೆ ಹೋಗಿ ಬದುಕುವುದು ಕಷ್ಟ ಆಯ್ತು. ಯಾಕೆಂದರೆ ಇಲ್ಲಿದ್ದಾಗ ತುಂಬಾ ಪ್ರೊಟೆಕ್ಟಿವ್‌ ಆಗಿದ್ದೆ. ಚಿಕ್ಕವಳು ಅಂತಾ ಎಲ್ಲಿಗೂ ಕಳುಹಿಸುತ್ತರಲಿಲ್ಲ. ಏನು ವ್ಯವಹಾರ, ಬ್ಯಾಂಕ್‌ ಏನೂ ಅಂದರೆ ಏನೂ ಗೊತ್ತಿರಲಿಲ್ಲ. ಶೂಟಿಂಗ್, ಮನೆ ಇಷ್ಟೇ ನನ್ನ ಪ್ರಪಂಚ ಆಗಿತ್ತು. ಅಲ್ಲಿ ಎಲ್ಲಾ ಕೆಲಸ ನಾವೇ ಮಾಡಿಕೊಳ್ಳಬೇಕು. ಆರಂಭದಲ್ಲಿ ಕಷ್ಟ ಆಯ್ತು. 
ಬೇಗ ಕಲಿತುಕೊಂಡೆ. ನಾನೊಬ್ಬಳೇ ಎಲ್ಲಾ ಕಡೆ ಓಡಾಡಿ ನನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಿದೆ. ಅದು ನನ್ನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ. ಬದುಕಿನಲ್ಲಿ ಮತ್ತೊಂದು ಮುಖ ತೆರೆದುಕೊಂಡಿತು ಎಂದು ಹೇಳಿದರು.ನನ್ನ ಕೌಟುಂಬಿಕ ಜೀವನದಲ್ಲಿ ಕಷ್ಟ ಬಂದಾಗ ನನಗೆ ಧೈರ್ಯ ತುಂಬಲು ನಾನು ಮಾಡಿದ ಪಾತ್ರಗಳೇ ಸಹಕಾರಿ ಆಯಿತು ಅನಿಸುತ್ತದೆ. ನನಗೆ ಅವುಗಳೇ ಧೈರ್ಯ ತುಂಬಿದ್ದವು ಅನಿಸುತ್ತದೆ. ನಾನು ಏಕ್‌ಧಮ್‌ ಏನನ್ನೂ ಬಿಡೋಕೆ ಹೋಗಲಿಲ್ಲ.
 ಸರಿಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟೆ. ಫ್ಯಾಮಿಲಿ ಕೂಡ ಮಧ್ಯ ಬಂದರೂ ಆದರೂ ಆಗಲಿಲ್ಲ. ಸಾಧ್ಯವಾಗುವುದೇ ಇಲ್ಲ ಎಂದಾಗ ಸುಮ್ಮನೆ ಅದನ್ನು ಹಿಡಿದು ಜಗ್ಗಾಡುವುದರಲ್ಲಿ ಅರ್ಥ ಇಲ್ಲ ಎಂದಾಗ ಹೊರ ಬರಬೇಕು ಎಂದುಕೊಂಡೆ. ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳಬೇಕು ಎಂದು ನಿರ್ಧರಿಸಿದೆ. 
ಆರಂಭದಲ್ಲಿ ನಾನು ಸಾಧ್ಯವಾದಷ್ಟು ಸಹಿಸಿಕೊಂಡೆ. ಇವತ್ತು ಸರಿ ಹೋಗಬಹುದು, ನಾಳೆ ಸರಿ ಹೋಗಬಹುದು. ಆದರೆ ಒಂದು ಪಾಯಿಂಟ್‌ ದಾಟಿದ ಮೇಲೆ ನನ್ನ ಜೀವನಕ್ಕೂ ತೊಂದರೆ ಆಗುತ್ತದೆ ಅಂತಾ ಗೊತ್ತಾದಾಗ ನಾನು ಹೊರಗಡೆ ಬಂದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.