ಬಿಗ್ ಬಾಸ್ ಉಗ್ರಂ ಮಂಜು ಮದುವೆ ಆಗುವ ಹುಡುಗಿ ಬೆಣ್ಣೆತರ ಇದ್ದಾಳೆ

 | 
Ns
ಬಿಗ್ ಬಾಸ್‌ ಕನ್ನಡ ಸೀಸನ್ 11 ಶೋ ದಿನಕಳೆದಂತೆ ರಂಗೇರುತ್ತಿದೆ. ಹೌದು, ಇದೀಗ ಮನೆಯೊಳಗೆ ಜಗಳು ಆರಂಭವಾಗಿವೆ. ಜೊತೆಗೆ ಎಂಟರ್‌ಟೇನ್‌ಮೆಂಟ್ ಕೂಡ ದಂಡಿ ದಂಡಿಯಾಗಿ ಸಿಗುತ್ತಿದೆ. ಅಷ್ಟಕ್ಕೂ ನಾವಿವತ್ತು ಹೇಳೋಕೆ ಹೊರಟಿರೋದು ಖಡಕ್ ವಿಲನ್ ಲುಕ್ ಅಲ್ಲಿ ಇರೋ ಹೀರೋ ಉಗ್ರಂ ಮಂಜು ಅವ್ರ ಬಗ್ಗೆ. ನೋಡೋಕೆ ಸ್ಮಾರ್ಟ್ ಆಗಿರೋ ಇವ್ರಿಗಿನ್ನು ಮದುವೆಯಾಗಿಲ್ಲ. ಹೌದು ಇನ್ನು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂತಾನೇ ಕರೆಸಿಕೊಂಡಿರೋ ಇವ್ರ ಲೈಫ್ ಹಿಸ್ಟರಿ ನೋಡಿ ಬರೋಣ ಬನ್ನಿ 
ಸ್ನೇಹಿತರೇ..ಉಗ್ರಂ ಸಿನಿಮಾದಲ್ಲಿ ನಟಿಸಿದ ಮೇಲೆ ಇವರು ಉಗ್ರಂ ಮಂಜು ಅಂತಾನೇ ಫೇಮಸ್. ಅಷ್ಟಕ್ಕೂ ಇವರ ಮೊದಲ ಹೆಸರು ಮಂಜುನಾಥ್ ಗೌಡ. 2014ರಲ್ಲಿ ತೆರೆಕಂಡ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಶ್ರೀಮುರಳಿ ನಟಿಸಿದ್ದ 'ಉಗ್ರಂ' ಸಿನಿಮಾದಲ್ಲಿ ನೆಗೆಟಿವ್ ್ರೋಲ್‌ನಲ್ಲಿ ಕಾಣಿಸಿಕೊಂಡರು. ಆ ಬಳಿಕ ಚಿತ್ರರಂಗದಲ್ಲಿ  'ಉಗ್ರಂ ಮಂಜು' ಅಂತಲೇ ಜನಪ್ರಿಯತೆ ಗಳಿಸಿದರು. ಅಂದ್ಹಾಗೆ ಇವರು ಮೂಲತಃ ಕೋಲಾರದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರಿಗೆ 35 ವರ್ಷ ಎನ್ನಲಾಗಿದೆ.
ಸ್ನೇಹಿತರೇ.. ಉಗ್ರಂ ಮಂಜು ಅವರಿಗೆ ಇನ್ನೂ ಮದುವೆಯಾಗಿಲ್ಲ. ಈ ಬಗ್ಗೆ ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಕೇಳಿದ್ದು, ಅವರ ತಾಯಿ ಇದಕ್ಕೆ ಉತ್ತರ ನೀಡಿದ್ದರು. ಕಳೆದ ಎಂಟು ವರ್ಷಗಳಿಂದ ನಾವು ಅವನಿಗೆ ಮದುವೆಯಾಗು ಅಂತ ಹೇಳುತ್ತಲೇ ಇದ್ದೇವೆ. ಅವನಿಗೆ ಮೂವರು ತಂಗಿಯರಿದ್ದಾರೆ. ಅವರ ಮದುವೆಯಾದ ಮೇಲೆ ಆಗ್ತೀನಿ ಅಂತ ಹೇಳಿದ್ದಾನೆ ಎಂದಿದ್ದರು. ಅಷ್ಟಕ್ಕೂ ಉಗ್ರಂ ಮಂಜು ಅವರಿಗೆ ಮದ್ಯಪಾನ ಮಾಡುವ ರೂಢಿ ಇದೆಯಂತೆ.ಈ ಬಗ್ಗೆ ಸುದೀಪ್ ಅವರೇ ವೇದಿಕೆ ಮೇಲೆ ಹೇಳಿದ್ದರು. ಮಗನಿಗೆ ಅದೊಂದು ಅಭ್ಯಾಸವಿರುವುದಕ್ಕೆ ಮಂಜು ತಂದೆ ಬೇಸರ ತೋಡಿಕೊಂಡಿದ್ದಾರೆ.
ಸ್ನೇಹಿತರೇ...ರುಸ್ತುಂ, ಎಲ್ಲೋ ಬೋರ್ಡ್‌, ತೂತು ಮಡಿಕೆ, ಸಂತು ಸ್ಟ್ರೇಟ್ ಫಾರ್ವರ್ಡ್, ಕಿರಿಕ್ ಪಾರ್ಟಿ, ಮಾಸ್ ಲೀಡರ್, ಅಂಬಿ ನಿಂಗ್ ವಯಸ್ಸಾಯ್ತೋ!, ಭರಾಟೆ, ಬುದ್ಧಿವಂತ 2, ರಾನಿ, ಮ್ಯಾಕ್ಸ್ ಸೇರಿದಂತೆ ಸಾಕಷ್ಟು  ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳನ್ನು ತಮ್ಮದೇಯಾದ ಮ್ಯಾನರಿಸಂನಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಸ್ನೇಹಿತರೇ..ಉಗ್ರಂ ಮಂಜು ಅವರು ಸಿನಿಮಾದಲ್ಲಿ ಹೇಗೆ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ರಿಯಲ್ ಲೈಫ್​ನಲ್ಲಿ ಅವರು ಯಾವ ರೀತಿ ಇದ್ದಾರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅವರ ನಿಜವಾದ ವ್ಯಕ್ತಿತ್ವ ‘ಬಿಗ್​ ಬಾಸ್​ ಕನ್ನಡ ಸೀಸನ್​ 11 ಕಾರ್ಯಕ್ರಮದಿಂದ ಗೊತ್ತಾಗಲಿದೆ. ಸಿನಿಮಾಗಳ ಕೆಲಸಗಳನ್ನು ಸದ್ಯಕ್ಕೆ ಬದಿಗಿಟ್ಟು ಮಂಜು ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ನಮ್ಮೆಲ್ಲರನ್ನ ರಂಜಿಸುತ್ತಿದ್ದಾರೆ. ಸದ್ಯಕ್ಕೆ ಮಿಮಿಕ್ರಿ ಮಾಡಿ ಎಲ್ಲರನ್ನು ನಗಿಸುತ್ತಿರುವ ಇವರು ಇನ್ಯಾವಾಗ ವಿಲನ್ ಆಗಿ ಬದಲಾಗ್ತಾರೆ ಕಾದು ನೋಡಬೇಕಿದೆ.
ವೀಕ್ಷಕರೇ ಬಿಗ್ಬಾಸ್ ಸೀಸನ್ 11 ಎಲ್ಲ ಅಪ್ಡೇಟ್ಸ್ ಗಳಿಗಾಗಿ ನಮ್ಮ ಚಾನಲ್ ಅನ್ನು ತಪ್ಪದೇ ವೀಕ್ಷಿಸಿ...