ಅರಮನೆಯನ್ನು ವಶಕ್ಕೆ ಪಡೆದ ಸರ್ಕಾರ; ಒಡೆಯರಿಗೆ ಡಿಚ್ಚಿ ಕೊಟ್ಟ ಸಿದ್ದರಾಮಯ್ಯ

 | 
ಗಗಗ

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ್ತು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿಯು ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಘೋಷಿಸಿದ ಒಂದು ದಿನದ ತರುವಾಯ, ಸಿದ್ದರಾಮಯ್ಯ ಸರ್ಕಾರ ಮಹತ್ವದ ಸಚಿವ ಸಂಪುಟ ನಿರ್ಧಾರವನ್ನು ತೆಗೆದುಕೊಂಡಿದೆ. ಮೇಖ್ರಿ ವೃತ್ತದ ಆಸುಪಾಸಿನಲ್ಲಿ 15.5 ಎಕರೆ ಸ್ವಾಧೀನ ಪಡಿಸಿಕೊಳ್ಳಲು 2006ರಲ್ಲೇ ನಿರ್ಧರಿಸಲಾಗಿತ್ತು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಅರಮನೆ ಮೈದಾನದಲ್ಲಿ ಮೈಸೂರಿನ ಹಿಂದಿನ ಮಹಾರಾಜರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ನಾಲ್ಕು ಪಾಲಿದೆ. ಇವರ ಓರ್ವ ಸಹೋದರಿಯ ಪುತ್ರ ಯದುವೀರ್. ಈಗಿನ ಮೈಸೂರು ಮಹಾರಾಜರಿಗೆ ನೇರವಾಗಿ ಆಸ್ತಿಯ ಹಕ್ಕು ಇನ್ನೂ ವರ್ಗವಾಗಿಲ್ಲ. ಶ್ರೀಕಂಠದತ್ತ ಅವರ ಸಹೋದರಿಯರಿಗೆ ತಲಾ 28 ಎಕರೆ ಪಾಲಿದೆ.

ಈಗ ಸಂಪುಟ ಸಭೆಯಲ್ಲಿ ಅರಮನೆ ರಸ್ತೆ ಅಗಲೀಕರಣ ಮಾಡಲು ಟಿಡಿಆರ್ ಕೊಡಲು ತೀರ್ಮಾನಿಸಲಾಗಿದೆ. ಅರಮನೆಯ ಒಳಗೆ ಕಾಂಪೌಂಡ್ ಹಾಕಲಾಗಿದ್ದು, ಅರಮನೆ ಹೊರಗಿನ ಜಾಗವನ್ನು ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ನಡೆಯುತ್ತಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸಭೆಯಲ್ಲಿ ಸೂಚಿಸಲಾಗಿದೆ.

ಮುಂದಿನ ವಾರ ಪ್ರಕರಣ ಸರ್ವೋಚ್ಛ ನ್ಯಾಯಾಲದಲ್ಲಿ ವಿಚಾರಣೆಗೆ ಬರಲಿದೆ. ರಸ್ತೆ ಅಗಲೀಕರಣ ಮಾಡುವುದಾದರೆ ಟಿಡಿಆರ್ ಕೊಟ್ಟು ಸ್ವಾಧೀನ ಮಾದಿಕೊಳ್ಳಬೇಕೆಂದು ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ. ಹಿಂದಿನ ಸರ್ಕಾರ ರಸ್ತೆ ಅಗಲೀಕರಣ ಮಾಡುವ ಅವಶ್ಯಕತೆ ಇಲ್ಲ ಎಂದು ತೀರ್ಮಾನಿಸಿತ್ತು. ಜಾಗ ಪಡೆದು ಬೇಡ ಎಂದು ಮತ್ತೆ ನ್ಯಾಯಾಲಯದ ಮೊರೆ ಹೋಗಲಾಗಿತ್ತು.

ಅವನು ರಾಜ, ಜನರ ಹಣದಿಂದ ಮಾರ್ಕೆಟ್ ಕಟ್ಟಿದ, ತನ್ನ ಸ್ವಂತ ದುಡ್ಡಿನಿಂದ ಅವನು ಖರ್ಚು ಮಾಡಿಲ್ಲ, ಅದು ಸರ್ಕಾರ, ಜನರದೇ ಆಸ್ತಿ. ಮಹಾರಾಜ ಎಂದರೆ ದೇವರಲ್ಲ. ಮಹಾರಾಜ ಕೊಡಲೇಬೇಕಿತ್ತು ಎಂದು ಮೈಸೂರು ಮಹಾರಾಜರನ್ನು ಕುರಿತು, ಸಿದ್ದರಾಮಯ್ಯನವರು ಮಾತನಾಡಿದ್ದಾರೆಂದು ಹೇಳಲಾಗುವ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.