ಶಂಕಿತನ ಹೆಸರು ಬಿಡುಗಡೆ ಮಾಡುತ್ತ ಸರ್ಕಾರ; ಆತ ಯಾವ ಧರ್ಮೀಯ ಗೊ.ತ್ತಾ

 | 
Hh

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಯ ಕುರುಹು ಘಟನೆ ನಡೆದು 48 ಗಂಟೆಗಳ ಬಳಿಕ ಪತ್ತೆಯಾಗಿದೆ. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ದುಷ್ಕರ್ಮಿಗಾಗಿ ಶೋಧ ನಡೆಸಿದ್ದು, ಮುಖಚಹರೆ ಪತ್ತೆಗೆ ಎಐ ಬಳಕೆ ಮಾಡಲಾಗುತ್ತಿದೆ. ತನಿಖೆಗೆ ಎನ್‌ಐಎ, ಎನ್‌ಎಸ್‌ಜಿ ಅಧಿಕಾರಿಗಳು ಕೂಡ ಸಾಥ್‌ ನೀಡುತ್ತಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸುವ ಸಾಧ್ಯತೆ ಇದೆ. ಅದಲ್ಲದೇ ಬೆಂಗಳೂರು ಬಾಂಬ್‌ ಸ್ಫೋಟ ಪ್ರಕರಣವೂ ಮಂಗಳೂರು ಸ್ಫೋಟಕ್ಕೆ ಸಾಮ್ಯತೆ ಇರುವುದು ಕಂಡುಬಂದಿದೆ.

ಸಿಸಿಬಿ, ಸ್ಥಳೀಯ ಪೊಲೀಸರ ಜತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ರಾಷ್ಟ್ರೀಯ ಭದ್ರತಾ ಪಡೆ ಅಧಿಕಾರಿಗಳು ಸಹ ತನಿಖೆಗೆ ಕೈ ಜೋಡಿಸಿದ್ದಾರೆ. ಸ್ಫೋಟ ಸಂಭವಿಸಿದ್ದ ಹೋಟೆಲ್‌ ಮತ್ತು ಸುತ್ತಮುತ್ತಲಿನ ರಸ್ತೆಗಳ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಆರೋಪಿಯ ಮುಖ ಚಹರೆ ಆಧರಿಸಿ ಪೊಲೀಸರು ಆತನ ಬೆನ್ನು ಬಿದ್ದಿದ್ದಾರೆ. ತಾಂತ್ರಿಕ ಮಾಹಿತಿ ಹಂಚಿಕೆ ಮೂಲಕ ಪರಸ್ಪರ ಸಮನ್ವಯದಿಂದ ಕೆಲಸ ಮಾಡುತ್ತಿರುವ ಪೊಲೀಸರು ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸದಲ್ಲಿದ್ದಾರೆ.

ರಾಮೇಶ್ವರಂ ಕೆಫೆ ಹಾಗೂ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಯನ್ನು ಸಮಗ್ರವಾಗಿ ಪರಿಶೀಲನೆ ಮಾಡಿದ್ದಾರೆ. ಆರೋಪಿಯು ಬಿಎಂಟಿಸಿ ಬಸ್‌ನಲ್ಲಿ ರಾಮೇಶ್ವರಂ ಕೆಫೆಗೆ ಬಂದಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಸ್ಫೋಟದ ಸಂದರ್ಭದಲ್ಲಿ ಕುಂದಲಹಳ್ಳಿ ಮುಖ್ಯರಸ್ತೆ ಮಾರ್ಗವಾಗಿ 26 ಬಿಎಂಟಿಸಿ ಬಸ್‌ಗಳು ಸಂಚರಿಸಿದ್ದು, ಆ ಎಲ್ಲಾ ಬಸ್‌ಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ.

ಸ್ಫೋಟದ ಆರೋಪಿಯು ಟೋಪಿ ಮತ್ತು ಕನ್ನಡಕ ಧರಿಸುವುದೂ ಸೇರಿದಂತೆ ಆತನ ಎಲ್ಲಾ ಚಲನವಲನವು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಪೊಲೀಸರು ಕೃತಕ ಬುದ್ಧಿಮತ್ತೆ  ಅಂದರೆ ಎಐ ಬಳಸಿಕೊಂಡು ತಾಂತ್ರಿಕವಾಗಿ ಆತನ ಗುರುತು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆ ವ್ಯಕ್ತಿ ಯಾರು? ಯಾವ ಸಂಘಟನೆಗೆ ಸೇರಿದವನು ಎಂಬುದೂ ಸೇರಿದಂತೆ ಆರೋಪಿಯ ಕೆಲ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿನ ಸ್ಪೋಟದ ತೀವ್ರತೆ ಬಹಳ ಕಡಿಮೆ ಇರುವುದು ಪರಿಶೀಲನೆಯಲ್ಲಿ ಗೊತ್ತಾಗಿದೆ. ಹೀಗಾಗಿ, ದೊಡ್ಡ ಅನಾಹುತ ಸಂಭವಿಸಿಲ್ಲ. ಸ್ಫೋಟಕ್ಕೆ ಬಳಸಿರುವ ಸ್ಫೋಟಕಗಳ ಪ್ರಮಾಣ ಕಡಿಮೆ ಇರಬಹುದು. ಹೆಚ್ಚು ಬಳಕೆ ಮಾಡಿದ್ದರೆ ಸ್ಫೋಟದ ತೀವ್ರತೆ ಜಾಸ್ತಿ ಆಗುತ್ತಿತ್ತು. ಬಾಂಬ್‌ ಸಿಡಿದಾಗ ಮೊಳೆಗಳು, ನಟ್‌ಗಳು ಎಲ್ಲವೂ ಮೇಲೆ ಹೋಗಿವೆ. ಅದರ ಬದಲು ಪಕ್ಕಕ್ಕೆ ಸಿಡಿದಿದ್ದರೆ ಬಹಳ ಜನರಿಗೆ ಪ್ರಾಣಾಪಾಯ ಆಗುತ್ತಿತ್ತು ಎಂದು ಎಫ್‌ಎಸ್‌ಎಲ್‌ ತಜ್ಞರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.