ಮೊದಲ ರಾತ್ರಿಯಲ್ಲಿ ತಪ್ಪಿ ವಧುವಿನ ಮುಖ ನೋಡಿದ ವರ; ತಕ್ಷಣ ಡಿವೋರ್ಸ್ ಕೊಟ್ಟ ಪತಿರಾಯ
ಮೊದಲೆಲ್ಲಾ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಿದ್ದರು. ಆದರೆ ಇತ್ತೀಚೆಗೆ ಮದುವೆಗಳು ಸಣ್ಣ-ಪುಟ್ಟ ವಿಷಯಗಳಿಗೆ ಮುರಿದು ಬೀಳುತ್ತಿದೆ. ಅದರಲ್ಲೂ ಮದುವೆಯಾದ ಒಂದು ವರ್ಷದಲ್ಲೇ, ಒಂದು ತಿಂಗಳಲ್ಲೇ ದಂಪತಿ ಬೇರೆಯಾಗುವ ಸುದ್ದಿ ಕೇಳಿ ಬರುತ್ತದೆ. ಆದರೆ ಇಲ್ಲೊಂದು ಮದುವೆ ಒಂದೇ ದಿನದಲ್ಲಿ ಮುರಿದು ಬಿದ್ದಿದೆ. ಮದುವೆಯಾದ ಬಳಿಕ ಫಸ್ಟ್ನೈಟ್ ಬೆಳಗ್ಗೆಯೇ ವರ ಡಿವೋರ್ಸ್ ಬೇಕು ಎಂದಿದ್ದಾರೆ.
ಫಸ್ಟ್ನೈಟ್ನಲ್ಲಿ ವಧುವಿನ ಮುಖ ನೋಡಿ ವರನಿಗೆ ಶಾಕ್ ಆಗಿದ್ದು, ಆಕೆಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ.ಹುಡುಗಿಯನ್ನು ನೋಡಿ ಮೆಚ್ಚಿದ ನಂತರ ಕುಟುಂಬ ಸಮೇತರಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಾಗಿತ್ತು. ಮದುವೆ ಕೂಡ ಅದ್ಧೂರಿಯಾಗೇ ಮಾಡಿಕೊಡಲಾಗಿತ್ತು. ಯುವತಿ ಜೊತೆ ಖುಷಿಖುಷಿಯಾಗಿಯೇ ಇದ್ದ ವರ ಫಸ್ಟ್ನೈಟ್ನಲ್ಲಿ ಮಾತ್ರ ತಕರಾರು ತೆಗೆದಿದ್ದಾನೆ. ಹೆಂಡತಿಯ ಮುಖ ನೋಡಿ ಹೌಹಾರಿದ್ದಾನೆ. ಅದಕ್ಕೆ ಕಾರಣವಾಗಿದ್ದು ಆಕೆಯ ಕಣ್ಣಿನ ಬಣ್ಣ.
ಹೌದು ಯುವತಿಯ ಕಣ್ಣು ಹಸಿರು ಬಣ್ಣದಲ್ಲಿತ್ತು. ಈ ಮೊದಲು ನೋಡಿದಾಗ ಕಣ್ಣು ಕಪ್ಪು ಬಣ್ಣದಲ್ಲಿ ಇತ್ತಂತೆ.ಯುವತಿ ದೃಷ್ಟಿ ಸಮಸ್ಯೆಯಿಂದ ಕಾಂಟ್ಯಾಕ್ಟ್ ಲೆನ್ಸ್ ಬಳಸಿದ್ದಾಳೆ. ಅದರಲ್ಲಿ ಕಣ್ಣಿನ ಬಣ್ಣ ಕಪ್ಪು ಕಂಡಿದೆ. ಆದರೆ ಆಕೆ ಕಣ್ಣಿನ ನೈಜ ಬಣ್ಣ ಹಸಿರು. ಈ ಸತ್ಯ ವರನಿಗೆ ಫಸ್ಟ್ ಲೈಟ್ನಲ್ಲಿ ಗೊತ್ತಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಕುವೈತ್ನಲ್ಲಿ. ಇಂಜಿನಿಯರ್ ಆಗಿರುವ ವರ ಈಗ ಡಿವೋರ್ಸ್ ಕೇಳುತ್ತಿದ್ದಾನೆ.
ವಿಚ್ಛೇದನಕ್ಕೆ ಬೇಡಿಕೆ ಇಟ್ಟಿದ್ದು, ಮೊದಲೊಂದು ಈಗೊಂದು ತೋರಿಸಿ ತನ್ನನ್ನು ದಾರಿ ತಪ್ಪಿಸಲಾಗಿದೆ ಎಂದು ಆರೋಪಿಸಿದ್ದಾನೆ. ವಧುವಿನ ಕಣ್ಣುಗಳ ಬಣ್ಣವು ಭವಿಷ್ಯದಲ್ಲಿ ಅವರಿಗೆ ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಆತ ಆರೋಪಿಸಿದ್ದಾನೆ. ವಧುವಿನ ಮನೆಯವರು ವರನೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕೋಪಗೊಂಡ ವರ ಎಲ್ಲರ ಮೇಲೂ ಮುನಿಸಿಕೊಂಡು ಕೂತಿದ್ದಾನೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.