ದ ರ್ಶನ್ ಆಟ ಇನ್ನುಮುಂದೆ ನಡೆಯಲ್ಲ; ಸಿಡಿದೆ ದ್ದ ಜಗಣ್ಣ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ನಟ ದರ್ಶನ್ ಬಂಧನವಾಗಿದ್ದು, ಕನ್ನಡ ಚಿತ್ರರಂಗ ಮೌನ ವಹಿಸಿದೆ. ಮತ್ತೊಂದೆಡೆ, ಕೊಲೆಯಾದ ರೇಣುಕಾಸ್ವಾಮಿ ತಾಯಿ ದರ್ಶನ್ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಈ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮಧ್ಯೆ ನಟ ಜಗ್ಗೇಶ್ ಮಾಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ಹೆಚ್ಚಿನವರ ಗಮನ ಸೆಳೆದಿದೆ.
ರಾಜಕಾರಣಿ, ನಟ - ನವರಸನಾಯಕ ಜಗ್ಗೇಶ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಸಖತ್ ಸದ್ದು ಮಾಡುತ್ತಿದೆ. ಈ ಟ್ವೀಟ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಬಹಳ ಚರ್ಚೆಗೆ ಗ್ರಾಸವಾಗಿದೆ. ನಟ ದರ್ಶನ್ ಹೆಸರನ್ನು ಜಗ್ಗೇಶ್ ಎಲ್ಲೂ ಪ್ರಸ್ತಾಪಿಸದಿದ್ದರೂ, ಬಹುತೇಕ ನೆಟ್ಟಿಗರು ಇದು ದರ್ಶನ್ ಅವರಿಗೇನೇ ಹಾಕಿರೋ ಪೋಸ್ಟ್ ಎಂದು ಭಾವಿಸಿದಂತಿದೆ.
ಸರ್ವ ಆತ್ಮಾನೇನಬ್ರಹ್ಮ, ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನೂ ಕೊಲ್ಲುವ ಹಕ್ಕು ಜೀವನಿಗಿಲ್ಲ. ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ. ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕೂ ತಕ್ಷಣ ಫಲಿತಾಂಶ ಉಂಟು. ರಾಮನಾಗು, ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ. ಮದಕ್ಕೆ ಕಾರುಣ್ಯದ ಅರಿವಿಲ್ಲ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಜಗ್ಗೇಶ್ ಅವರ ಒಂದು ಹೇಳಿಕೆ ವಿಚಾರವಾಗಿ ದರ್ಶನ್ ಅಭಿಮಾನಿಗಳು ಮೈಸೂರಿನಲ್ಲಿ ಜಗ್ಗೇಶ್ಗೆ ಮುತ್ತಿಗೆ ಹಾಕಿದ್ದರು. ಹಿರಿಯ ನಟ ಎಂಬುದನ್ನೂ ನೋಡದೇ ಮಾತಿನ ಚಕಮಕಿ ನಡೆದಿತ್ತು. ಕಳೆದ ವರ್ಷ ತೋತಾಪುರಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರಿಗೆ ಅವಮಾನ ಮಾಡಿದ್ದರೆಂಬ ಆರೋಪವಿದೆ.
ಅಭಿಮಾನಿಗಳು ಜಗ್ಗೇಶ್ ಮೇಲೆ ಮುತ್ತಿಗೆ ಹಾಕಿದ್ದರೂ, ದರ್ಶನ್ ಒಂದೇ ಒಂದು ಮಾತು ಕೂಡ ಆಡರಲಿಲ್ಲ. ಅಭಿಮಾನಿಗಳು ಮಾಡಿದ್ದು ತಪ್ಪೆಂದು ಹೇಳಲಿಲ್ಲ. ಇದು ಜಗ್ಗೇಶ್ ಅವರಿಗೆ ನೋವುಂಟು ಮಾಡಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.