ಮನೆ ಸಾಲ ಜಾಸ್ತಿ ಆಗಿದೆ, ಫಿನಾಲೆ ಗೆದ್ದ ಹನುನಂತ ಮನೆಗೆ ಬರ್ಲಿ ಸಾಲ ತೀರಿಸಲಿ;

 | 
Hi
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಮೂರನೇ ವಾರ ಲಾಯರ್ ಜಗದೀಶ್ ಹಾಗೂ ರಂಜಿತ್ ಕುಮಾರ್ ಎಲಿಮಿನೇಟ್ ಆಗುತ್ತಿದ್ದಂತೆ ಗಾಯಕ ಹನುಮಂತ ಲಮಾಣಿ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದರು. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಹನುಮಂತ, ಬಿಗ್‌ಬಾಸ್ ಮನೆಯಲ್ಲಿ ತಮ್ಮದೇ ರೀತಿಯಲ್ಲಿ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿದ್ದಾರೆ. ಫೈನಲ್ ಗೆ ಕೂಡಾ ಲಗ್ಗೆಯಿಟ್ಟು ಅಭಿಮಾನಿಗಳ ಮನ ಗೆದ್ದಿದ್ದಾರೆ.
ಹನುಮಂತ ಲಮಾಣಿ ಮೂಲತಃ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ. ಕುರಿಗಾಹಿಯಾಗಿದ್ದ ಹನುಮಂತ,  ನ್ನ ಗಾಯನದಿಂದ ಮೋಡಿ ಮಾಡಿದ್ದರು. ಯಾವುದೇ ಸಂಗೀತ ತರಬೇತಿ ಇಲ್ಲದೇ ತನ್ನ ಗಾಯನದಿಂದ ಹನುಮಂತ ಗಮನ ಸೆಳೆದಿದ್ದರು. ಬಂಜಾರ ಹಾಡುಗಳನ್ನು ಹಾಡುವುದರಲ್ಲಿ ಹನುಮಂತ ಎತ್ತಿದ್ ಕೈ. ತನ್ನ ಮುಗ್ಧ ಸ್ವಭಾವ ಹಾಗೂ ಉತ್ತರ ಕರ್ನಾಟಕ ಭಾಗದ ಹಳ್ಳಿ ಸೊಗಡಿನ ಮಾತಿನಿಂದಲೇ ಜನಪ್ರಿಯರಾಗಿರುವ ಹನುಮಂತ ಲಮಾಣಿ ೧೯೯೩ರ ಅಕ್ಟೋಬರ್ ೭ರಂದು ಜನಿಸಿದ್ದಾರೆ. ಇವರಿಗೆ ಈಗ 31 ವರ್ಷ ವಯಸ್ಸಾಗಿದೆ.  ಇವರು ಎಸ್‌ಎಸ್‌ಎಲ್‌ಸಿವರೆಗೂ ಓದಿಕೊಂಡಿದ್ದಾರೆ ಎನ್ನಲಾಗಿದೆ.
ಯಾವುದೇ ಸಂಗೀತ ತರಬೇತಿ ಇಲ್ಲದೇ ತನ್ನ ಗಾಯನದಿಂದಲೇ ಗಮನ ಸೆಳೆದ ಹನುಮಂತ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸರಿಗಮಪ ಸೀಸನ್ 15ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇಲ್ಲಿ ಮೆಂಟರ್‌ಗಳ ಮಾರ್ಗದರ್ಶನದಿಂದ ಅವರ ಗಾಯನದಲ್ಲಿ ಮತ್ತಷ್ಟು ಪಕ್ವತೆ ಬಂದಿತ್ತು. ಈ ರಿಯಾಲಿಟಿ ಶೋನಲ್ಲಿ ಜಾನಪದ ಹಾಡುಗಳನ್ನು ಹಾಡಿ, ತನ್ನ ಕಂಠ ಮತ್ತು ಸುಮಧುರ ಗಾಯನದಿಂದ ಜನಪ್ರಿಯತೆ ಪಡೆದರು. ಜೊತೆಗೆ ಈ ಶೋನ ಮೊದಲ ರನ್ನರ್ ಅಪ್ ಕೂಡ ಆಗಿದ್ದರು. 
ಸರಿಗಮಪ ಬಳಿಕ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಅಲ್ಲಿಯೂ ಉತ್ತಮ ನೃತ್ಯ ಪ್ರದರ್ಶನ ನೀಡಿದ್ದರು.  ಈ ಸಂದರ್ಭ ಹನುಮಂತ ಅವರಿಗೆ ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಭಾಗವಹಿಸಲು ಆಫರ್ ನೀಡಲಾಗಿತ್ತಂತೆ. ಆದರೆ, ಡ್ಯಾನ್ಸ್ ಶೋನಲ್ಲಿ  ಭಾಗವಹಿಸಿದ್ದರಿಂದ ಆಫರ್ ರಿಜೆಕ್ಟ್ ಮಾಡಿದ್ದರಂತೆ. ಇದಾದ ಬಳಿಕ ಭರ್ಜರಿ ಬ್ಯಾಚುಲರ್ಸ್, ಕಾಮಿಡಿ ಕಿಲಾಡಿಗಳು ಶೋನಲ್ಲೂ ಭಾಗವಹಿಸಿದ್ದರು. ಎಂದು ತಾಯಿ ಶೀಲವ್ವಾ ಹೆಮ್ಮೆಯಿಂದ ಹೇಳಿಕೊಂಡರು. ಅವನು ಈ ಮನೆಗೆ ಆಧಾರ ಎಂದು ಅಲವೆತ್ತಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.