ಸ್ಬೇಹಿತನ ಜೊತೆ ಮಲಗು ಎಂದಿದ್ದ ಗಂಡ; ಅದಕ್ಕೆ ಆತನಿಗೆ ಡಿವೋರ್ಸ್ ಕೊಟ್ಟೆ ಎಂದ ನ ಟಿ

 | 
Hi

ಆ ಕಾಲದ ಬಾಲಿವುಡ್‌ ಜಗತ್ತಿನ ಪರಿಚಯ ಇರುವವರಿಗೆ ಕರೀಷ್ಮಾ ಕಪೂರ್‌ ಮತ್ತು ಸಂಜಯ್‌ ಕಪೂರ್‌ ಅವರ ಡಿವೋರ್ಸ್‌ ಕತೆ ಗೊತ್ತಿರಬಹುದು. ಆದರೆ, ಕರೀಷ್ಮಾ ಕಪೂರ್‌ ಎಂಬ ಬಾಲಿವುಡ್‌ನ ಅತೀವ ಸುಂದರಿಯ ಬದುಕಿನ ದುರಂತದ ಕಥೆ ತಿಳಿಯದವರು ಸಾಕಷ್ಟು ಜನರು ಇರುತ್ತಾರೆ. ಒಂದಾನೊಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಅತೀವ ಬೇಡಿಕೆಯ ನಟಿಯಾಗಿ ಮಿಂಚಿದ್ದ ಕರೀಷ್ಮಾಗೆ ಆಕೆಯ ಪತಿಯೇ ವಿಲನ್‌ ಆಗಿ ಆಕೆಯ ಬದುಕಿಗೆ ಕೊಳ್ಳಿ ಇಟ್ಟದ್ದು ಮಾತ್ರ ದುರಂತ.

ವರದಿಗಳ ಪ್ರಕಾರ ಬಿವಿ ನಂ 1 ನಟಿ ಕರೀಷ್ಮಾ ಕಪೂರ್‌ಳನ್ನು ಆಕೆಯ ಪತಿಯೇ ತನ್ನ ಸ್ನೇಹಿತರಿಗೆ ಒಂದೊಮ್ಮೆ ಹರಾಜು ಹಾಕಿದ್ದನಂತೆ. ಬಾಲಿವುಡ್‌ನಲ್ಲಿ ಉತ್ತುಂಗದಲ್ಲಿದ್ದ ನಟಿಗೆ ಮದುವೆಯಾದ ಬಳಿಕ ಬದುಕೇ ಬದಲಾಯಿತು. ಬಳಿಕ ತನ್ನ ಪತಿಗೆ ಡಿವೋರ್ಸ್‌ ನೀಡಿದ್ದರು. ಅಭಿಷೇಕ್‌ ಬಚ್ಚನ್‌ ಜತೆ ಬ್ರೇಕಪ್‌ ಆದ ಬಳಿಕ ದಿಲ್‌ ತೊ ಪಾಗಲ್‌ ಹೈ ನಟಿ ಸಂಜಯ್‌ ಕಪೂರ್‌ ಎಂಬ ಬಿಸ್ನೆಸ್‌ಮ್ಯಾನ್‌ ಜತೆ ವಿವಾಹವಾಗಿದ್ದರು. ಇದೀಗ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ವಿಚ್ಚೇದನದ ಸುದ್ದಿಗಳೂ ಕೇಳಿಬರುತ್ತಿದೆ.

ಕರೀಷ್ಮಾ ಕಪೂರ್‌ ಮತ್ತು ಸಂಜಯ್‌ ಕಪೂರ್‌ ಅವರದ್ದು ಅರೇಂಜ್ಡ್‌ ಮದುವೆ. ತಮ್ಮ ಹನಿಮೂನ್‌ ನಂತರದ ಕಥೆಯನ್ನು ಕರೀಷ್ಮಾ ಕಪೂರ್‌ ಈ ಹಿಂದೆ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದರು. ಸಂಜಯ್‌ ಕಪೂರ್‌ ತನ್ನ ಪತ್ನಿ ಕರೀಷ್ಮಾ ಕಪೂರ್‌ಳನ್ನು ತನ್ನ ಸ್ನೇಹಿತರ ಜತೆ ಮಲಗುವಂತೆ ಒತ್ತಾಯಿಸುತ್ತಿದ್ದನಂತೆ. ಇದಕ್ಕೆ ಆಕೆ ಒಪ್ಪದೆ ಇದ್ದಾಗ ಹೊಡೆಯುತ್ತಿದ್ದನಂತೆ. ಆಕೆಗೊಂದು ದರ ನಿಗದಿಪಡಿಸಿ ಸ್ನೇಹಿತನ ಮುಂದೆ ಹರಾಜಿಗಿಟ್ಟಿದ್ದನಂತೆ. ಹಣಕಾಸು ವಿಷಯದಲ್ಲಿ ಸಂಜಯ್‌ಗೆ ಯಾವುದೇ ಜವಾಬ್ದಾರಿ ಇರಲಿಲ್ಲವಂತೆ. ಕರೀಷ್ಮಾ ಕಪೂರ್‌ ಬಳಿ ಇರುವ ಹಣಕ್ಕಾಗಿಯೇ ಮದುವೆಯಾಗಿದ್ದೇನೆ ಎಂದು ಸಂಜಯ್‌ ಕಪೂರ್‌ ನೇರವಾಗಿ ಹೇಳುತ್ತಿದ್ದನಂತೆ.

ಕರೀಷ್ಮಾ ಕಪೂರ್‌ ಮತ್ತು ಸಂಜಯ್‌ ಕಪೂರ್‌ಗೆ 2003ರಲ್ಲಿ ವಿವಾಹವಾಗಿತ್ತು. ಹನ್ನೊಂದು ವರ್ಷದ ಬಳಿಕ ಇವರಿಬ್ಬರು 2014ರಲ್ಲಿ ದೂರವಾಗಿದ್ದರು. ಸಂಜಯ್‌ ಕಪೂರ್‌ ಮತ್ತು ಅತ್ತೆ ರಾಣಿ ವಿರುದ್ಧ ಕರೀಷ್ಮಾ ಕಪೂರ್‌ ಡಿವೋರ್ಸ್‌ ಕೇಸ್‌ ಹಾಕಿದ್ದರು. ಕರೀಷ್ಮಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಅತ್ತೆ ರಾಣಿಯು ಒಂದು ಡ್ರೆಸ್‌ ಉಡುಗೊರೆಯಾಗಿ ನೀಡಿದ್ದರಂತೆ. ಆ ಡ್ರೆಸ್‌ ಕರೀಷ್ಮಾಗೆ ಸರಿ ಹೊಂದಲಿಲ್ಲವಂತೆ. ಈ ಸಂದರ್ಭದಲ್ಲಿ ಈಕೆಗೆ ಹೊಡಿ ಎಂದು ತನ್ನ ತಾಯಿಗೆ ಸಂಜಯ್‌ ಹೇಳುತ್ತಿದ್ದನಂತೆ. ಸಂಜಯ್‌ಗೆ ಬೇರೊಬ್ಬ ಮಹಿಳೆ ಜತೆ ಸಂಬಂಧ ಕೂಡ ಇತ್ತು ಎಂದು ಕರೀಷ್ಮಾ ಕಣ್ಣೀರು ಇಟ್ಟಿದ್ದಾರೆ.