ಮಗು ಬೇಕು ಎಂದು ಹಠ ಮಾಡಿದ ಗಂಡ; ತಕ್ಷಣ ಮತ್ತೊಂದು ಮದುವೆ ಮಾಡಿಸಿದ ಪತ್ನಿ

 | 
Gd

ಮಹಿಳೆಯರು ತನ್ನ ಗಂಡ ಇನ್ನೊಬ್ಬ ಮಹಿಳೆಯನ್ನು ನೋಡಿದರೆ ಸಾಕು ಕೆಂಡಮಂಡಲರಾಗುತ್ತಾರೆ. ಅಂತಹದರಲ್ಲಿ ಇಲ್ಲೊಬ್ಬ ವ್ಯಕ್ತಿ ಈಗಾಗಲೇ ಎರಡು ಮದುವೆಯಾಗಿದ್ದರೂ ಕೂಡ ಮೂರನೇ ಬಾರಿಗೆ ಮದುವೆಯಾಗಲು ಆತನ ಪತ್ನಿಯರು ಒಪ್ಪಿಗೆ ನೀಡಿದ್ದಾರಂತೆ. ಹಾಗಾಗಿ ಆತನ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್  ಆಗಿದೆ.

ವ್ಯಕ್ತಿಯ ಹೆಸರು ಪಂಡನಾ ಎಂಬುದಾಗಿ ತಿಳಿದುಬಂದಿದೆ. ಮೊದಲ ಪತ್ನಿ ಪಾರ್ವತಮ್ಮ ಗರ್ಭಧರಿಸಲು ಸಾಧ್ಯವಾಗದಿದ್ದಾಗ ಪಂಡನಾ ಎರಡನೇ ಬಾರಿಗೆ ವಿವಾಹವಾಗಿದ್ದಾನೆ. 2007ರಲ್ಲಿ, ಎರಡನೇ ಪತ್ನಿ ಅಪ್ಪಲಮ್ಮನಿಂದ ಮಗು ಪಡೆದ ಬಳಿಕ ಮತ್ತೊಂದು ಮಗು ಪಡೆಯುವ ಆಸೆ ಆಗಿದೆ. ಗಂಡನ ಆಸೆಗೆ ಹೆಂಡತಿಯರಿಬ್ಬರೂ ಒಪ್ಪಿ ಮತ್ತೊಂದು ಮದುವೆಯಾಗಲು ಹೇಳಿದ್ದಾರೆ. ಹಾಗಾಗಿ ಆತ ಜೂನ್ 25, 2024ರಂದು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೆಡಬಯಾಲು ಮಂಡಲದಲ್ಲಿ ಲವ್ಯ ಎಂಬಾಕೆಯನ್ನು ವಿವಾಹವಾಗಿದ್ದಾನೆ.

ಕೆಲವು ಬುಡಕಟ್ಟು ಜನಾಂಗಗಳಲ್ಲಿ ಎರಡು ಬಾರಿ ಮದುವೆಯಾಗುವುದು ಸಾಮಾನ್ಯವಾಗಿದೆ. ಆದರೆ ಮೂರನೇ ಮದುವೆ ಅಪರೂಪ ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಗಮನ ಸೆಳೆದಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದು, ಮತ್ತೊಂದು ಮಗುವನ್ನು ಬಯಸಿದರೆ, ನಾಲ್ಕನೇ ಬಾರಿಗೆ ಮದುವೆಯಾಗುತ್ತಾನಾ ಎಂದು ಹಲವರು ಪ್ರಶ್ನಿಸಿದ್ದಾರೆ.

ಇನ್ನು ಈ  ಹಿಂದೆ ಯೂಟ್ಯೂಬರ್ ಅರ್ಮಾನ್ ಮಲಿಕ್ ಕೂಡ ಎರಡು ಬಾರಿ ಮದುವೆಯಾಗಿದ್ದರು. ಇವರು ತನ್ನ ಇಬ್ಬರು ಹೆಂಡತಿಯರೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಪಾಯಲ್ ಅವರನ್ನು ಪ್ರೀತಿಸಿದ ಮಲಿಕ್ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು. ನಂತರ, ಅವರ ಹಿರಿಯ ಮಗನ ಹುಟ್ಟುಹಬ್ಬದ ಸಮಾರಂಭಕ್ಕೆ ಆಗಮಿಸಿದ ಪಾಯಲ್ ಅವರ ಸ್ನೇಹಿತೆ ಕೃತಿಕಾ ಅವರನ್ನು ಪ್ರೀತಿಸಿ ವಿವಾಹವಾದರು. 

ಅವರಿಗೆ ಒಬ್ಬ ಮಗ ಇದ್ದಾನೆ. ಬಹುಪತ್ನಿತ್ವವನ್ನು ಉತ್ತೇಜಿಸಿದ್ದಕ್ಕಾಗಿ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಟೀಕೆಗಳು ಕೇಳಿಬಂದಿದ್ದವು. ಅಲ್ಲದೇ ಇತ್ತೀಚೆಗೆ, ಅರ್ಮಾನ್ ಮಲಿಕ್ ತನ್ನ ಇಬ್ಬರು ಹೆಂಡತಿಯರೊಂದಿಗೆ ಬಿಗ್‌ಬಾಸ್ ಒಟಿಟಿ 3 ಮನೆಗೆ ಪ್ರವೇಶಿಸಿ ಸುದ್ದಿ ಮಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.