ಸಮಾಜದಲ್ಲಿ ಹುಲಿ ಉಗುರಿನ ವಿಷಯ ದೊಡ್ಡದಾಗುತ್ತೆ, ಸೌಜನ್ಯ ನ್ಯಾಯದ ವಿಷಯ ಆಗಲ್ಲ

 | 
Bcf

ಮೈಸೂರಿನ ಒಡನಾಡಿ ಸಂಸ್ಥೆ ಕೂಡ ಸೌಜನ್ಯ ಹೋರಾಟಕ್ಕೆ ಬೆಂಬಲ ನೀಡಿದಾಗಲಿಂದ ಸೌಜನ್ಯ ಪರವಾದ ನ್ಯಾಯದ ಹೋರಾಟಕ್ಕೆ ನೂರಾನೆ ಬಲ ಬಂದಿದೆ, ರಾಜ್ಯದ್ಯಂತ ಸೌಜನ್ಯ ಪರವಾಗಿ ಹೋರಾಟ ನಡೆಸಲು ಒಡನಾಡಿ ಸಂಸ್ಥೆ ಕೂಡ ಸಿದ್ದವಾಗಿರುವುದು ಇಂದಲ್ಲ ನಾಳೆ ಸೌಜನ್ಯಾ ಪರ ನ್ಯಾಯ ದೊರಕುವುದೆಂಬ ನಂಬಿಕೆ ಮೂಡಿದೆ.

ನಿನ್ನೆ ಸೌಜನ್ಯ ಪರ ಹೋರಾಟಗಾರರನ್ನ ಭೇಟಿಯಾದ ಒಡನಾಡಿಯ ಮುಖಂಡರಾದ ಒಡನಾಡಿಯ ಸ್ಥಾಪಕ ಕಾರ್ಯದರ್ಶಿ ಸ್ಟಾಲಿನ್ ಸೌಜನ್ಯಾ ಗೆ ನ್ಯಾಯ ನೀಡುವಂತೆ ಸಮಾರಂಭವೊಂದರಲ್ಲಿ ಮಾತನಾಡಿದ್ದಾರೆ. ಹೌದು ಈ ಹಿಂದೆ ಮುರುಘಾ ಶ್ರೀ ಪ್ರಕರಣದಲ್ಲಿ ಹೋರಾಟಕ್ಕಿಳಿದು ಅಮಾಯಕ ಮಕ್ಕಳ ಮೇಲೆ ನಡೆದ ಅಕ್ಷಮ್ಯ ಅಪರಾಧವನ್ನು ಬಯಲಿಗೆ ಎಳೆದಿದ್ದ ಒಡನಾಡಿ ಸೇವಾ ಸಂಸ್ಥೆ ಈಗ ಸೌಜನ್ಯ ಗೌಡ ಹೋರಾಟಕ್ಕೆ ಇಳಿದಿರುವುದು ನಾಡಿನ ಜನತೆಗೆ ಸಂತೋಷ ತಂದಿದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಹುಲಿ ಉಗುರು ಧರಿಸಿದ್ದು ಸುದ್ದಿಯಾಗುತ್ತದೆ. ಅದು ಹುಲಿ ಬದುಕಿದ್ದಾಗ ತೆಗೆದಿದ್ದೋ ಸತ್ತ ಮೇಲೆ ತೆಗೆದಿದ್ದೊ , ಯಾರು ಕೊಟ್ಟರು ಏನು ಮಾಡಿದಿರಿ ಎಂಬುದೆಲ್ಲ  ಸುದ್ದಿಯಾಗುತ್ತದೆ. ಯಾವ ಸೆಲೆಬ್ರಿಟಿ ಹುಲಿ ಉಗುರು ಧರಿಸಿದ್ದಾರೆ ನಕಲಿಯೋ ಅಸಲಿಯೋ ಎಂಬುದು ಟ್ರೆಂಡ್ ಆಗುತ್ತದೆ ಆದರೆ ಇತ್ತೀಚಿಗೆ ಸೌಜನ್ಯ ಅತ್ಯಾಚಾರಿ ಪ್ರಕರಣದಲ್ಲಿ ಆರೋಪಿ ಎಂದು ಬಿಂಬಿತವಾಗಿ ಕಳೆದ 11 ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಾ ಬಿದ್ದಿದ್ದ ಸಂತೋಷ್ ರಾವ್ ಎಂಬ ಅಮಾಯಕನನ್ನು ಕೋರ್ಟ್ ನಿರಪರಾಧಿ ಎಂದು ಘೋಷಿಸಿ ಬಿಡುಗಡೆ ಮಾಡಿತ್ತು. 

ಅವತ್ತಿನ ನಂತರ ಅವರೆನಾದರು? ಅವರ  11 ವರ್ಷ ಸಮಯ ವ್ಯರ್ಥ ಆಗಿದ್ದಕ್ಕೆ ಪರಿಹಾರವೇನು? ಹಾಗಿದ್ದರೆ ಅಪರಾಧಿಗಳು ಯಾರು ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಉದ್ಭವವಾಗುತ್ತಲೇ  ಇಲ್ಲ ಎನ್ನುವುದು ಬೇಸರದ ಸಂಗತಿ ಎಂದಿದ್ದಾರೆ. ಸೌಜನ್ಯ ಎಂಬ ಮಗುವಿನ ಮರಣ ವಿರುದ್ಧ ಎಲ್ಲರೂ ದನಿಯೆತ್ತಬೇಕು. ಇದು ಒಂದು ಜಾತಿ, ಒಂದು ಮತ, ಒಂದು ಧರ್ಮದ ಅಥವಾ ಒಂದು ಮತದ ಕೆಲಸವಲ್ಲ, ಇದು ಎಲ್ಲರ ಸಾಮಾಜಿಕ ಜವಾಬ್ದಾರಿ. ಎಲ್ಲರೂ ಇದರಲ್ಲಿ ಕೈ ಜೋಡಿಸಬೇಕು. ಆ ನಿಟ್ಟಿನಲ್ಲಿ ಕರ್ನಾಟಕದ ಮನೆ ಮನೆಗೆ ಇದರ ವಿಷ್ಯವನ್ನು ಸಾರಲಾಗುವುದು ಎಂದಿದ್ದಾರೆ ಒಡನಾಡಿ ಸಂಸ್ಥೆಯ ಕಾರ್ಯದರ್ಶಿ ಸ್ಟಾನ್ಲಿ ಅವರು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.