ಮೂರು‌ ಬಾರಿ ಕುಂಭವೇಳದ ಗಂಗೆಯಲ್ಲಿ ಮುಳುಗಿ ಎದ್ದ ಕೆಜಿಎಫ್ ಸುಂದರಿ, ಈ ಬಾರಿ ರಕ್ಷಿತ್ ಶೆಟ್ಟಿ ಜೊತೆ ಸಿಗುತ್ತಾ ಸಿಹಿಸುದ್ದಿ

 | 
Nd
ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ನಡೆಯುತ್ತಿದೆ. ಇದು ಫೆಬ್ರುವರಿ 26ರ ವರೆಗೂ ನಡೆಯಲಿದ್ದು, ಬೇರೆ ಬೇರೆ ದೇಶಗಳಿಂದ ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ. ಇದೀಗ ಕನ್ನಡದ ನಟಿ ಕೆಜಿಎಫ್ ಮೂಲಕ ಪ್ರಖ್ಯಾತಿಯಾದ ಶ್ರೀನಿಧಿ ಶೆಟ್ಟಿ  ಮಹಾ ಕುಂಭಮೇಳಕ್ಕೆ ಭೇಟಿ ನೀಡುವ ಮೂಲಕ ತ್ರಿವೇಣಿ ಸಂಗಮದಲ್ಲಿ ಮಿಂದಿದ್ದಾರೆ.
 ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಟಿ ತಾವು ಭೇಟಿ ನೀಡಿರುವ ಬಗ್ಗೆ ತಿಳಿಸಿದ್ದಾರೆ.ಫೋಟೋ ಹಂಚಿಕೊಂಡಿರುವ ನಟಿ ಮೌನಿ ಅಮಾವಾಸ್ಯೆಯ ದಿನ ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದೇನೆ ನಾನು ಇದನ್ನು ಯಾವತ್ತಿಗೂ ಉಹಿಸಿರಲಿಲ್ಲ ಎಂದಿದ್ದಾರೆ. 
ಮಹಾಕುಂಭಮೇಳದಲ್ಲಿ ಭೇಟಿ ನೀಡಿದ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಶಾಹಿ ಸ್ನಾನ ಮಾಡಿ ಪುನೀತಳಾಗಿದ್ದೇನೆ ಹಾಗೂ ಈ ಅನುಭವವನ್ನು ಸಂಪೂರ್ಣವಾಗಿ ಅನುಭವಿಸಿದ್ದೇನೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.ಬದುಕು ಅಚ್ಚರಿಯ ಸಂತೆ ಈ ದೈವಿಕ ಅನುಗ್ರಹ ಮತ್ತು ಆಶೀರ್ವಾದದಿಂದ ನನ್ನ ಹೃದಯ ತುಂಬಿದೆ ಎಂದು ಅವರು ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. 
ಇತ್ತೀಚೆಗೆ ನಿರ್ದೇಶಕ ಹಾಗೂ ನಟ ರಾಜ್‌ ಬಿ ಶೆಟ್ಟಿ, ಚಾರ್ಲಿ ಸಿನಿಮಾದ ನಿರ್ದೇಶಕ ಕೆ. ಕಿರಣ್‌ ರಾಜ್‌, ನಿರೂಪಕಿ ಅನುಶ್ರೀ ಕೂಡ ಮಹಾ ಕುಂಭಮೇಳದಲ್ಲಿ ಅಮೃತಸ್ನಾನ ಮಾಡಿದ್ದರು.ಕೆಜಿಎಫ್‌-1 ಹಾಗೂ ಕೆಜಿಎಫ್‌-2 ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ಆ ಬಳಿಕ ತಮಿಳು ಹಾಗೂ ತೆಲುಗು ಸಿನಿಮಾರಂಗದಲ್ಲಿ ಬ್ಯೂಸಿಯಾಗಿದ್ದು, ಸದ್ಯ ನ್ಯಾಚುರಲ್‌ ಸ್ಟಾರ್‌ ನಾನಿ ಅವರ ಹಿಟ್‌-3 ಸಿನಿಮಾದಲ್ಲಿ ಹಾಗೂ ಹಲವು ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.