ಮೈಸೂರಿನ ರಾಜನ ಬಳಿ ಒಂದು ರೂಪಾಯಿಯೂ ಆಸ್ತಿ ಇಲ್ಲ; ದತ್ತು ಪುತ್ರನಿಗೆ ದಕ್ಕದ ಒಡೆತನ

 | 
Gu

ರಾಜ ಮನೆತನದ ವ್ಯಕ್ತಿ ಚುಣಾವಣೆಗೆ ನಿಲ್ಲುತ್ತಾನೆ ಎಂದಾಗ ಎಲ್ಲರೂ ಅಬ್ಬಾ ಇವರಿಗ್ಯಾಕೆ ಬೇಕು. ಹಣ ಮಾಡಬೇಕಾ ಇಲ್ಲ ಹೆಸರು ಮಾಡಬೇಕಾ ತಿಂದು ಕೊಳೆಯುವಷ್ಟು ಆಸ್ತಿಯಿದೆ ಎಂದು ಕುಹುಕ ಆಡಿದ್ದರು.ಪ್ರತಿಷ್ಠಿತ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ಅದರಂತೆ ಮೈಸೂರಿನ ರಾಜವಂಶಸ್ಥರಾದ ಯದುವೀರ್ ಒಡೆಯರ್ ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಆದ್ರೆ ಅವರ ಆಸ್ತಿ ವಿವರಣೆ ಕೇಳಿದರೆ ನಿಮಗೂ ಅಚ್ಚರಿಯಾಗುವುದು ಸತ್ಯ. ಏಕೆಂದರೆ ರಾಜ ಮನೆತನದಲ್ಲಿ ಹುಟ್ಟಿದವರ ಆಸ್ತಿ ಎಷ್ಟಿರಬಹುದು ಎಂಬ ಊಹೆ ನಿಮ್ಮಲ್ಲಿರಬಹುದು. ಆದರೆ ಇಲ್ಲಿ ನಿಮ್ಮ ಊಹೆ ತಪ್ಪಾಗುವ ಜೊತೆಗೆ ನಿಮಗೆ ಅಚ್ಚರಿ ಪಡ್ತೀರಿ.

ಈಗಾಗಲೇ ನಾಮಪತ್ರ ಸಲ್ಲಿಸಿರುವ ಯದುವೀರ್‌ 5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಆದರೆ, ಇವರ ಹೆಸರಿನಲ್ಲಿ ಯಾವುದೇ ಕಾರು ಇಲ್ಲ, ಸೈಟು ಇಲ್ಲ, ಭೂಮಿನೂ ಇಲ್ಲದಿರುವುದು ವಿಶೇಷ. ಪತ್ನಿಯ ಹೆಸರಲ್ಲಿ 1.04 ಕೋಟಿ ರೂ. ಆಸ್ತಿ ಇದ್ದು, ಅವಲಂಭಿತರ ಹೆಸರಲ್ಲಿ 3.63 ಕೋಟಿ ರೂ. ಚರಾಸ್ತಿ ಇದೆ.

ಯದುವೀರ್‌ ಒಡೆಯರ್‌ ಅವರ ಕೈಯಲ್ಲಿ ಸದ್ಯ ಒಂದು ಲಕ್ಷ ರೂ. ನಗದನ್ನು ಹೊಂದಿದ್ದು, ವಿವಿಧ ಬ್ಯಾಂಕ್‌ ಅಕೌಂಟ್‌ಗಳಲ್ಲಿ 1.36 ಕೋಟಿ ರೂ. ಅನ್ನು ಹೊಂದಿದ್ದಾರೆ.25 ಕೋಟಿ ರೂ. ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂ. ಮೌಲ್ಯದ 20 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 4.99 ಕೋಟಿ ರೂ. ಚರಾಸ್ತಿಯನ್ನು ಯದುವೀರ್‌ ಈ ವೇಳೆ ಘೋಷಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.