ತಂದೆ ತಾಯಿಯ ವಿರುದ್ದವೇ ಅಧಿಕಾರಿಗಳಿಗೆ ದೂರು ಕೊಟ್ಟ ಪುಟ್ಟ ಬಾಲಕಿ, ಇಡೀ ದೇಶವೇ ಕ.ಣ್ಣೀರು

 | 
ಬ

ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಪೊಲೀಸರ ಸಹಾಯ ಪಡೆಯಲೆಂದೇ ಸಹಾಯವಾಣಿ ಚಾಲ್ತಿಯಲ್ಲಿದೆ. ಕೆಲವೊಮ್ಮೆ ಸಹಾಯವಾಣಿಗೆ ಬರುವ ದೂರುಗಳು ಹಾಸ್ಯಾಸ್ಪದ ಎನ್ನಿಸಿದರೂ ಅವುಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಯಾರೇ ಆಗಲಿ ಪೊಲೀಸರ ನೆರವು ಪಡೆಯುವ ಅಧಿಕಾರವಿದೆ. ಆದ್ದರಿಂದ ಸಹಾಯವಾಣಿಗೆ ಬರುವ ದೂರುಗಳನ್ನು ಪೊಲೀಸರು ಖುದ್ದಾಗಿ ತೆರಳಿ ಆಲಿಸುತ್ತಾರೆ. ಇತ್ತೀಚಿಗೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದೂರುವವರ ಪಟ್ಟಿಯಲ್ಲಿ ಮಕ್ಕಳೂ ಸಹ ಸೇರ್ಪಡೆಯಾಗುತ್ತಿರುವುದು ವಿಶೇಷ. ಅಂತಹ ಇತ್ತೀಚಿನ ಒಂದು  ನಿದರ್ಶನ ಇಲ್ಲಿವೆ.

ಹಳೆಯ ಕಾಲದಲ್ಲಿ ಹೀಗಿರಲಿಲ್ಲ ಅಪ್ಪ ಅಮ್ಮ ಅಜ್ಜ ಅಜ್ಜಿ ಯಾರೇನೇ ಹೇಳಿದರೂ ಕೇಳುವ ಸಂಪ್ರದಾಯವಿತ್ತು. ಒಂದು ಮಾತು ಬೈದರು ಬೈಸಿಕೊಳ್ಳಬೇಕಿತ್ತು. ಹೊಡೆದರೆ ಹೊಡೆಸಿಕೊಳ್ಳಬೇಕಿತ್ತು. ತಪ್ಪು ಮಾಡಿದರೆ ಹೊಡೆಯುತ್ತಾರೆ, ಹಿರಿಯರು ಬೈಯ್ಯುತ್ತಾರೆ ಎಂಬ ಭಯವಿತ್ತು. ಆದರೆ ಈಗ ಹಾಗಲ್ಲ ಕಾಲ ಬದಲಾಗಿದೆ ಅದರೊಂದಿಗೆ ಮಕ್ಕಳಿಗೆ ಹಿರಿಯರ ಮಾತಿಗೆ ಕಿವಿಗೊಡದೆ ಸಾಗುವುದು ಕೂಡ ರೂಢಿಯಾಗಿದೆ.

ಕೆಲ ದಿನಗಳ ಹಿಂದಷ್ಟೇ ಲಗ್ಗೆರೆಯ ಬಾಲಕಿ  ಒಬ್ಬಳು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ನಮ್ಮ ಮನೆಯಲ್ಲಿ ಅಮ್ಮ ಹೊಡೆಯುತ್ತಾರೆ, ಅಪ್ಪ ಮನೆಯಲ್ಲಿಲ್ಲ. ಅದಕ್ಕಾಗಿ ನಿಮಗೆ ಕರೆ ಮಾಡಿದ್ದೇನೆ ಎಂದಿದ್ದಾಳೆ. ತಕ್ಷಣ ಆಕೆಯ ವಿಳಾಸದ ಮಾಹಿತಿ ಪಡೆದ ಸಹಾಯವಾಣಿ ಸಿಬ್ಬಂದಿ ಸಂಬಂಧಪಟ್ಟ ನಂದಿನಿ ಲೇಔಟ್ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂದಿನಿ ಲೇಔಟ್ ಠಾಣಾ ಸಿಬ್ಬಂದಿ ಕರೆ ಮಾಡಿದಾಗ ಉತ್ತರಿಸಿದ ಆಕೆಯ ತಾಯಿ ''ನನ್ನ ಮಗಳಿಗೆ ನಾನು ಹೊಡೆಯುವ ಸ್ವಾತಂತ್ರ್ಯವಿಲ್ಲವೇ?" ಎಂದು ಪ್ರಶ್ನಿಸಿ ಕರೆ ಸ್ಥಗಿತಗೊಳಿಸಿದ್ದಾರೆ.

ಇಷ್ಟೇ ಅಲ್ಲದೆ ಮತ್ತೊಂದೆಡೆ, ಸ್ನೇಹಿತರು ಕ್ರಿಕೆಟ್ ಆಟಕ್ಕೆ ಸೇರಿಸಿಕೊಂಡಿಲ್ಲವೆಂದು ಬಾಲಕನೊಬ್ಬ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಪ್ರಸಂಗ ಸಹ ಕೆಲ ದಿನಗಳ ಹಿಂದೆ ನಡೆದಿದೆ. ಸ್ಥಳಕ್ಕೆ ತೆರಳಿದ ಸಂಬಂಧಪಟ್ಟ ಠಾಣಾ ಸಿಬ್ಬಂದಿ, ಆತನ ಸ್ನೇಹಿತರಿಗೆ ಬುದ್ದಿವಾದ ಹೇಳಿ ಆಟವಾಡಲು ಜೊತೆ ಸೇರಿಸಿ ವಾಪಸಾಗಿದ್ದಾರೆ.ಮಕ್ಕಳಿಗೆ ಆಟ ಪೊಲೀಸರಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.