ವಿಷ್ಣುವರ್ಧನ್ ಬಳಸುತ್ತಿದ್ದ ಐಶಾರಾಮಿ ಕಾರು ಈಗ ಎ.ಲ್ಲಿದೆ; ಇದರ ಬೆಲೆ‌‌ ಇಷ್ಟು ದುಬಾರಿನಾ

 | 
Hii

ಹಲವರ ಮನಗೆದ್ದ ನಟ ಕನ್ನಡ ಚಿತ್ರರಂಗ ಕಂಡ ಸ್ಟೈಲಿಶ್ ಹಾಗೂ ಸುಂದರ ನಟ ಸಾಹಸ ಸಿಂಹ ವಿಷ್ಣುವರ್ಧನ್. ಆಗಿನ ಕಾಲಕ್ಕೆ ವಿಷ್ಣುದಾದ ಬಳಸುವ ಪ್ರತಿಯೊಂದು ವಸ್ತುವೂ ಅವರ ಅಭಿಮಾನಿಗಳಿಗೆ ಕ್ರೇಜಿ ಎನಿಸಿತ್ತು. ವಿಷ್ಣುವರ್ಧನ್ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗ ದುಬಾರಿ ಕಾರುಗಳನ್ನು ಖರೀದಿ ಮಾಡಿದ್ದರು. ಆ ಕಾರುಗಳು ಇಂದಿಗೂ ಇವೆ.

ಸಿನಿಮಾ ಕಲಾವಿದರಿಗೆ ಕಾರಿನ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತೆ. ಹಾಗೇ ಆರಂಭದ ದಿನಗಳಲ್ಲಿ ವಿಷ್ಣುವರ್ಧನ್ ಹಾಗೂ ಗೆಳೆಯ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೂ ದುಬಾರಿ ಕಾರುಗಳ ಬಗ್ಗೆ ಕ್ರೇಜ್ ಇತ್ತು. ಸಾಹಸ ಸಿಂಹ ಬಳಸಿದ ಮೊದಲ ಕಾರು, ಆ ಬಳಿಕ ಬಳಸಿದ ಕಾರುಗಳು ಇಂದಿಗೂ ಇವೆ. ಅವು ಎಲ್ಲಿವೆ? ಆ ಕಾರುಗಳ ಫ್ಯಾನ್ಸಿ ನಂಬರ್ ಏನು? ಆ ಕಾರಿನ ವಿಶೇಷತೆಯೇನು? ಅನ್ನೋದನ್ನು ತಿಳಿದ್ರೆ ನಿಜಕ್ಕೂ ಶಾಕ್ ಆಗ್ತೀರಿ.

ವಿಷ್ಣುವರ್ಧನ್ ಅವರಿಗೆ ಕಾರುಗಳು ಅಂದರೆ ಬಲು ಪ್ರೀತಿ. 70 ಹಾಗೂ 80 ದಶಕದಲ್ಲಿ ಚಾಲ್ತಿಯಲ್ಲಿದ್ದ ಕಾರನ್ನು ಖರೀದಿ ಮಾಡಿದ್ದರು. ನಾಗರಹಾವು ಸಿನಿಮಾ ಬಳಿಕ ವಿಷ್ಣುವರ್ಧನ್ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿ ಬೆಳೆದಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟನಾಗಿ ಹೆಸರು ಮಾಡುತ್ತಿದ್ದಂತೆ ವಿಷ್ಣುದಾದ ಮೊದಲ ಕಾರನ್ನು ಖರೀದಿ ಮಾಡಿದ್ದರು. ಅದುವೇ ದಾಟ್ಸನ್ ವಿಂಟೇಜ್ ಕಾರು.

ನಿಸ್ಸಾನ್ ಕಂಪನಿಯ ಈ ಕಾರು 70 ರಿಂದ 80ರ ದಶಕದಲ್ಲಿ ಜನರು ಇಷ್ಟ ಪಟ್ಟಿದ್ದ ಕಾರು ಇದು. ಬಿಳಿ ಬಣ್ಣದ ಈ ಕಾರು ಈಗಲೂ ಅಭಿಮಾನಿಗಳು ನೋಡಬಹುದಾಗಿದೆ. KA04 M707 ನಂಬರ್‌ನ ಕಾರನ್ನು ವಿಷ್ಣುವರ್ಧನ್ ಹಲವು ವರ್ಷಗಳ ಕಾಲ ಬಳಸಿದ್ದರು. ಬಳಿಕ ಈ ಕಾರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಸ್ಥಾಪಿಸಿದ್ದ ಮ್ಯೂಸಿಯಂಗೆ ನೀಡಿದ್ದರು.

ವಿಷ್ಣುವರ್ಧನ್ ಒಮ್ಮೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ್ದರು. ಆಗತಾನೇ ಹೊಸದಾಗಿ ಕಾರು ಮ್ಯೂಸಿಯಂ ಅನ್ನು ಸ್ಥಾಪನೆ ಮಾಡಿದ್ದರು. ಆ ವೇಳೆ ವಿಷ್ಣುದಾದಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಏನಾದರೂ ನೀಡುವಂತೆ ಕೇಳಿದ್ದರಂತೆ. 

ಅದಕ್ಕೆ ವಿಷ್ಣುವರ್ಧನ್ ಅವರು ತಾನು ಮೊದಲು ಬಳಸಿದ ಕಾರನ್ನು ನೀಡುವುದಾಗಿ ಹೇಳಿದ್ದರಂತೆ. ಹಾಗಾಗಿ ಈಗಲೂ ಅದು ಅಲ್ಲಿ ನೋಡ ಸಿಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು‌ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.