ಅರಣ್ಯ ಅಧಿಕಾರಿಗಳ ಮುಖವಾಡ ಬಿಚ್ಚಿಟ್ಟ ಮಾವುತ, ಬೇಡ ಅಂತ ಹೇಳಿದ್ರು ಕೂಡ ಅರ್ಜುನನ ಮೇಲೆ ಗುಂ.ಡು ಹೊಡೆದರು

 | 
Hg

ಅಯ್ಯೋ ಎದ್ದೇಳು ಇಲ್ಲಿ ನೋಡು ಎಂದು ಮಾವುತ ಆನೆಯನ್ನು ತಬ್ಬಿ ಅಳುತ್ತಿದ್ದ ದೃಶ್ಯ ಎಂತಹ ಕಲ್ಲು ಮನಸ್ಸವರನ್ನು ಕಂಬನಿ ಮಿಡಿಯುವಂತೆ ಮಾಡಿದೆ. ಹೌದು ಅರ್ಜುನ, ಮೈಸೂರು ದಸಾರದ ಸಮಯದಲ್ಲಿ ತುಂಬಾನೇ ಕೇಳಿ ಬರುತ್ತಿದ್ದ ಹೆಸರು... 8 ವರ್ಷಗಳ ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊತ್ತು ಸಾಗಿದ ಹೆಗ್ಗಳಿಕೆ ಅರ್ಜುನನಿಗೆ ಸಲ್ಲುತ್ತೆ, ಅಂಬಾರಿ ಹೊತ್ತು ಅರ್ಜುನ ಹೆಜ್ಜೆ ಹಾಕುತ್ತಿದ್ದರೆ ಲಕ್ಷಾಂತಕರ ಕಣ್ಣು ಈ ಗಜನ ಮೇಲೆ. ಅಲ್ಲದೆ ವೀರತ್ವದಲ್ಲಿಯೂ ಗುರುತಿಸಿಕೊಂಡಿದ್ದ ಅರ್ಜುನ ಇನ್ನು ನೆನಪು ಮಾತ್ರ.

ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದ ಅರ್ಜುನ ತನ್ನ ಮಾವುತನ ರಕ್ಷಿಸಲು ಹೋಗಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಕಾಡಾನೆ ವಿರುದ್ಧ ಒಬ್ಬಂಟಿಯಾಗಿ ಕಾದಾಟಕ್ಕಿಳಿದ ಅರ್ಜುನ ಬೇರೆಯವರ ರಕ್ಷಣೆ ಮಾಡಿ ತನ್ನ ಪ್ರಾಣ ಬಿಟ್ಟಿದ್ದಾನೆ, ಬದುಕಿದ್ದಾಗ ರಾಜನಂತೆ ಮೆರೆದ, ಸತ್ತಾಗ ವೀರನಾಗಿ ಸತ್ತ ನಮ್ಮ ಅರ್ಜುನ.

ಅರ್ಜುನ ಹೇಗೆ ಸತ್ತ ಎಂದು ಕೇಳಿದಾಗ ಅವನ ಮೇಲೆ ತುಂಬಾನೇ ಗೌರವ ಮೂಡುತ್ತದೆ. ಕಾಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಅಂದರೆ ಸಾಮಾನ್ಯವಾದ ಕಾರ್ಯವಲ್ಲ. ಅದರಲ್ಲೂ ಒಂಟಿ ಸಲಗವೆಂದ ಮೇಲೆ ಅಪಾಯ ಇನ್ನೂ ಹೆಚ್ಚು, ಎಷ್ಟು ಸುರಕ್ಷತೆವಹಿಸಿದರೂ ಸಾಲದು. ಸಕಲೇಶಪುರು ತಾಲ್ಲೂಕಿನ ಯಸಳೂರು ವಲಯದ ಬಾಳೆಕೆರೆ ಕಾಡಾನೆಯಲ್ಲಿ ರೇಡಿಯೋ ಕಾಲರ್ ಅಳವಡಿಕೆ ಮಾಡಲು ಆನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು.

ಎಲ್ಲರು ಒಂಟಿಸಲಗವನ್ನು ಹಿಡಿಯಲು ಪ್ಲ್ಯಾನ್ ಮಾಡಿದರು. ಆದರೆ ಒಂಟಿ ಸಲಗ ರೊಚ್ಚಿಗೆದ್ದು ಆಕ್ರಮಣ ಮಾಡಲು ಬರುತ್ತದೆ, ಮೊದಲಿಗೆ ಸಾಕಾನೆಗಳ ಮೇಲೆ ದಾಳಿ ಮಾಡುತ್ತದೆ. ಒಂಟಿಸಲಗದ ಆರ್ಭಟಕ್ಕೆ ಹೆದರಿದ ಇತರ ಆನೆಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ, ಆವಾಗ ಆ ಒಂಟಿ ಸಲಗ ಅಲ್ಲಿದ್ದ ಅರಣ್ಯಾಧಿಕಾರಿಗಳು ಹಾಗೂ ಮಾವುತನ ಮೇಲೆ ದಾಳಿಗೆ ಮುಂದಾಗುತ್ತದೆ, ಇದನ್ನು ನೋಡಿದ ಅರ್ಜುನ ಅವರ ರಕ್ಷಣೆ ಮುಂದಾಗುತ್ತಾನೆ. ಆ ಕಾಡಾನೆಯನ್ನು ಸಮರ್ಥವಾಗಿ ಎದುರಿಸಿ ನಿಲ್ಲುತ್ತಾನೆ.

ಅರ್ಜುನ ಮೊದಲಿನಿಂದಲೂ ಹಾಗೆಯೇ ಎಂಥದ್ಧೇ ಪರಿಸ್ಥಿತಿ ಇರಲಿ ಹೆದರಿ ಹಿಂದೇಟು ಹಾಕುತ್ತಿರಲಿಲ್ಲ. ಒಂಟಿಯಾಗಿಯೇ ಸಲಗವನ್ನು ಎದುರಿಸಿದೆ, ಅಷ್ಟೊತ್ತಿಗೆ ಅರಣ್ಯ ಸಿಬ್ಬಂದಿ ಹಾಗೂ ಮಾವುತ ಸುರಕ್ಷಿತ ಸ್ಥಳ ತಲುಪುತ್ತಾರೆ, ಕಾಡಾನೆ ಅರ್ಜುನನ ಹೊಟ್ಟೆಗೆ ತಿವಿದಿದೆ. ಅರ್ಜುನ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದ ಮೇಲೆ ಕುಸಿದು ಬಿದ್ದ ಎಂದು ಅದನ್ನು ಪ್ರತ್ಯಕ್ಷ ನೋಡಿದವರು ಹೇಳುತ್ತಾರೆ. ತನ್ನ ನಂಬಿ ಬಂದವರನ್ನು ರಕ್ಷಿಸಿ ಅರ್ಜುನ ವೀರ ಮರಣ ಹೊಂದಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.