ದೊಣ್ಣೆ ಹಿಡಿದು ಎದ್ದು‌ಬಿದ್ದು ಆಟ್ಟಾಡಿಸಿದ ವ್ಯಕ್ತಿ, 'ಬೇಕಾ ನಿನಗೆ ಪ್ರಚಾರ'

 | 
Hhh

ನಾವೆಲ್ಲರೂ ಮನುಜರು ಜಾತಿ ಧರ್ಮ ಬೇರೆಬೇರೆ ಆದರೂ ಎಂಬ ಮಾತು ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೂ ಬೇರೆ ಬೇರೆ ಧರ್ಮದ ಪ್ರಚಾರಕರು ತಮ್ಮ ಧರ್ಮದತ್ತ ಸೆಳೆಯುತ್ತಾರೆ.ಉಡುಪಿಯಲ್ಲಿ ಇಬ್ಬರು ಮಹಿಳೆಯರು ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುತ್ತಿದ್ದು, ಇದನ್ನು ಮನಗಂಡ ಸ್ಥಳೀಯರು ಅವರನ್ನು ದೊಣ್ಣೆ ಹಿಡಿದು ಓಡಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಹೌದು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆಯಲ್ಲಿ ಇಬ್ಬರು ಮಹಿಳೆಯರು ಬಂದು ಸ್ಥಳೀಯರಿಗೆ ಕ್ರಿಶ್ಚಿಯನ್ ಮತದ ಬಗ್ಗೆ ಪ್ರಚಾರ ಮಾಡಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬ, ಮತಾಂತರ ಮಾಡಲು ಬಂದಿದ್ದೀರ ಎಂದು ಪ್ರಶ್ನಿಸಿದಾಗ ಮಹಿಳೆಯರ ಕೈಯಲ್ಲಿ ಪ್ರಚಾರದ ಪುಸ್ತಕಗಳಿರುವುದು ಕಂಡು ಆಕ್ರೋಶವ್ಯಕ್ತಪಡಿಸಿರುವ ಸ್ಥಳೀಯ ವ್ಯಕ್ತಿ, ದೊಣ್ಣೆ ಹಿಡಿದು ಓಡಿಸಿ, ಇನ್ನೆಂದೂ ಬಾರದಂತೆ ಅವಾಜ್ ಹಾಕಿದ್ದಾರೆ.

ಬ್ರಿಟೀಷರ ಕಾಲದಲ್ಲಿ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಕ್ರೈಸ್ತ ಪಾದ್ರಿಗಳು ತಮ್ಮ ಧರ್ಮ ಪ್ರಚಾರ ಕಾರ್ಯ ಕೈಗೊಂಡಿದ್ದರು. ಈ ವೇಳೆ, ಅವರು ಕನ್ನಡಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ನಮ್ಮ ಭಾಷೆಯನ್ನು ಕಟ್ಟಿ ಬೆಳೆಸುವ ಕೆಲಸ ಮಾಡಿದರು ಕ್ರೈಸ್ತ ವಿದ್ವಾಂಸರು, ತಮ್ಮ ಧರ್ಮ ಮತ್ತು ಜಾತಿಯನ್ನು ಮೀರಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಶ್ರಮಿಸಿದ್ದಾರೆ ಆ ಮೂಲಕ, ಕನ್ನಡ ಭಾಷೆಯು ಜಾತ್ಯತೀತ ಎನಿಸಿಕೊಂಡಿದೆ. 

ಹಾಗಾಗಿ ಪ್ರತಿಯೊಬ್ಬರೂ ಕ್ರೈಸ್ತ ಧರ್ಮ ಸೇರಿ ಎಂದು ಅವರು ಭಾಷಣ ಮಾಡುತ್ತಿದ್ದರು ಎನ್ನಲಾಗಿದೆ. ಅದನ್ನ ಕೇಳಿದ ಊರ ಜನ ಸಿಟ್ಟಾಗಿ ಓಡಿಸಿಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಅದೇನೇ ಇರಲಿ ಅವರವರ ಧರ್ಮದಲ್ಲಿ ಅವರಿರಲಿ ದುಡ್ಡಿನ ಆಸೆ ತೋರಿಸಿ ಹುಟ್ಟಿ ಬೆಳೆದ ಧರ್ಮ ಬದಲಾಯಿಸಲು ಹೋಗದಿರಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.