ಊಟದಲ್ಲಿ 'ನಲ್ಲಿ ಮೂಳೆ' ಇಲ್ಲ ಎಂಬ ಕಾರಣಕ್ಕೆ ಮದುವೆಯೇ ಮುರಿದ ವದು
ಗುರುಹಿರಿಯರು ಸೇರಿ ನಿಶ್ಚಯಿಸುವ ಮದುವೆಗಳು ವಿಚಿತ್ರ ಕಾರಣಗಳಿಂದ ಮುರಿದುಬೀಳುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತದೆ. ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಿಶ್ಚಿತಾರ್ಥದ ಊಟದಲ್ಲಿ ನಲ್ಲಿ ಮೂಳೆ ಇಲ್ಲ ಎಂಬ ಕಾರಣಕ್ಕೆ ಗಂಡಿನ ಮನೆಯವರು ಮದುವೆಯನ್ನೇ ರದ್ದುಗೊಳಿಸಿದ್ದಾರೆ.
ಹೌದು ವಧುವಿನ ಕಡೆಯವರು ನಿರ್ಧರಿಸಿದ ಮಾಂಸಾಹಾರದ ಊಟದ ಮೆನುವಿನಲ್ಲಿ ನಲ್ಲಿ ಮೂಳೆ ಇಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವರ ಮನೆಯವರು ಮದುವೆಯನ್ನೇ ರದ್ದುಗೊಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅಷ್ಟಕ್ಕೂ ಅವರು ಈ ಕುರಿತಾಗಿ ಮೊದಲೇ ಹೇಳಿದ್ದರಂತೆ.
ನಿಜಾಮಾಬಾದ್‌ನ ಹುಡುಗಿ ಮತ್ತು ಜಗ್ತಿಯಾಳ್‌ನ ಹುಡುಗನ ಮದುವೆ ನಿಶ್ಚಯವಾಗಿತ್ತು. ನವೆಂಬರ್‌ನಲ್ಲಿ ನಿಜಾಮಾಬಾದ್‌ನಲ್ಲಿರುವ ವಧುವಿನ ಮನೆಯಲ್ಲಿ ನಿಶ್ಚಿತಾರ್ಥ ನಡೆದಿತ್ತು. ಅದ್ದೂರಿಯಾಗಿ ಮದುವೆ ಮಾಡುವ ಬಗ್ಗೆ ಎರಡೂ ಕುಟುಂಬಗಳು ಮಾತನಾಡಿಕೊಂಡಿವೆ. ಆದರೆ ಅದಾಗಿ ಕೆಲವೇ ಸಮಯದಲ್ಲಿ ಮದುವೆ ಮುರಿದುಬಿದ್ದಿದೆ.
ತಮ್ಮ ಕುಟುಂಬದ ಸದಸ್ಯರು ಹಾಗೂ ವರದ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ವಧುವಿನ ಕುಟುಂಬವು ಮಾಂಸಾಹಾರದ ಮೆನು ಸಿದ್ಧಪಡಿಸಿತ್ತು. ನಿಶ್ಚಿತಾರ್ಥದ ಬಳಿಕ ಗಮ್ಮತ್ತು ಊಟ ಬಾರಿಸಲು ಸಿದ್ಧರಾಗಿದ್ದಾಗ ಜಗಳ ಶುರುವಾಗಿದೆ. ನಲ್ಲಿ ಮೂಳೆಯನ್ನು ಬಡಿಸುತ್ತಿಲ್ಲ ಎಂದು ಕೆಲವು ಅತಿಥಿಗಳು ತಗಾದೆ ತೆಗೆದಿದ್ದಾರೆ. ಆಗ ವಧುವಿನ ಕಡೆಯವರು, ನಮ್ಮ ಖಾದ್ಯಗಳ ಪಟ್ಟಿಯಲ್ಲಿ ನಲ್ಲಿ ಮೂಳೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆಗ ಕಿತ್ತಾಟ ಮತ್ತಷ್ಟು ಜೋರಾಗಿದೆ.
ತಮಗೆ ಸರಿಯಾಗಿ ಊಟೋಪಚಾರ ನೀಡದೆ ವಧುವಿನ ಕಡೆಯವರು ಅವಮಾನಿಸಿದ್ದಾರೆ ಎಂದು ಗಂಡಿನ ಕಡೆಯವರು ರಂಪಾಟ ನಡೆಸಿದ್ದಾರೆ. ಈ ಜಗಳ ತೀವ್ರಗೊಳ್ಳುತ್ತಿದ್ದಂತೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಜಗಳ ಪರಿಹರಿಸಿದ್ದಾರೆ. ಆದರೆ ಮದುವೆ ನಡೆದಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.