ಗಂಡನ ಹೇಳಿದ ಸತ್ಯ ಕೇಳಿ ಅಧಿಕಾರಿಗಳು ಶಾ ಕ್; ಆ ಕ್ಷಣ ನಡೆದಿದ್ದೇ ನು

 | 
U

ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದೆಯಾ, ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಕಾಸಾರಿ ಮಾಮಾ ಆನಿ ಪಿಲುವೀ. ನನ್ನ ಪಾವಿ ಇನ್ನಿಲ್ಲ, ದಯವಿಟ್ಟು ಹಿಂತುರುಗಿ ಬಾ. ಇದು ನಿನ್ನೊಂದಿಗೆ ತೆಗೆದ ಕೊನೆಯ ಚಿತ್ರ, ದಯವಿಟ್ಟು ಹಿಂತುರುಗಿ ಬಂದು ನನ್ನ ಕಣ್ಣೀರು ಒರೆಸು ಎಂದು ಭಾವುಕವಾಗಿ ಬರೆದು ಕಣ್ಣೀರಿಟ್ಟಿದ್ದಾರೆ.

ಪತ್ನಿ ಸಾವಿನ ಬಗ್ಗೆ ಚಂದು ಖಾಸಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಪವಿತ್ರಾ ಕಾರು ಅಪಘಾತದಿಂದ ಮೃತಪಟ್ಟಿಲ್ಲ ಎಂದಿದ್ದಾರೆ. ಘಟನೆ ಬಗ್ಗೆ ವಿವರಿಸಿದ ಚಂದು, ಕಾರಿನಲ್ಲಿ ಡ್ರೈವರ್ ಸೇರಿ ನಾವು 4 ಮಂದಿ ಇದ್ದೆವು ಎಂದು ಹೇಳಿದ್ರು.ನಾವು ಬೆಂಗಳೂರಿನಿಂದ ಹೈದರಾಬಾದ್ ಗೆ ಟ್ರಾವೆಲ್ ಮಾಡುತ್ತಿದ್ದೆವು. ಮಧ್ಯಾಹ್ನ 2:30ಕ್ಕೆ ಬೆಂಗಳೂರಿನಿಂದ ಹೊರಟೆವು ಸಂಜೆ 6:30ಕ್ಕೆ ಮಳೆ ಶುರುವಾಯ್ತು ಈ ವೇಳೆ ಟ್ರಾಫಿಕ್ ಜಾಮ್ ಆಯಿತು. ಮೂರು ಗಂಟೆ ಜಾಮ್ ಆಗಿತ್ತು.

80 ಫೀಟ್ ರೋಡ್ನಲ್ಲಿ ಸಾಗುತ್ತಿದ್ದನಂತೆ. ಕೆಎಸ್ಆರ್ಟಿಸಿ ಬಸ್ ಒಂದು ಓವರ್ ಟೇಕ್ ಮಾಡುವಾಗ ಕಾರಿಗೆ ಟಚ್ ಮಾಡಿದೆ. ಡ್ರೈವರ್ ಅದೇ ಶಾಕ್ ನಲ್ಲಿ ಆಗಿ ಸ್ಟೇರಿಂಗ್ ನ ಉಲ್ಟಾ ತಿರುಗಿಸಿದ್ದಾನೆ. ಇದ್ರಿಂದ ಕಾರು ಪಕ್ಕದ ರಸ್ತೆಗೆ ಹೋಗಿದೆ. ಎದುರಿನಿಂದ ಬಸ್ ಬರುತ್ತಿತ್ತು ಆ ಬಸ್ ಕೂಡ ಟಚ್ ಆಗು ಬ್ಲಾಸ್ಟ್ ಆಯ್ತು ಎಂದು ನಟ ಹೇಳಿದ್ದಾರೆ.

ಡ್ರೈವರ್ ಹಾಗೂ ಪವಿತ್ರಾ ಅಕ್ಕನ ಮಗಳು ಮುಂದೆ ಇದ್ರು. ಅವರಿಗೆ ಏನು ಆಗಿಲ್ಲ. ನನ್ನ ಕೈಗೆ, ತಲೆಗೆ ಪೆಟ್ಟಾಗಿತ್ತು. ಇದನ್ನು ನೋಡಿ ಪವಿತ್ರಾ ಶಾಕ್ ಆದರು. ಜೋರಾಗಿ ಉಸಿರು ಎಳೆದ್ರು. ಇದು ಸಡನ್ ಸ್ಟ್ರೋಕ್ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಗೆ ಸೇರಿಸಲು ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಕೂಡ ಸಿಗಲಿಲ್ಲ.  1 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಹೊದರು. 3 ಗಂಟೆಗೆ ಎಚ್ಚರವಾಯಿತು ಎಂದು ಚಂದು ಹೇಳಿದ್ರು.

ದರ್ಶನ್ ಸರ್ ಸಿನಿಮಾಗೆ ಆಫರ್ ಬಂದಿತ್ತು. ಹೀಗಾಗಿ ಸಿನಿಮಾಗೆ ಸಹಿ ಹಾಕಲು ಪವಿತ್ರಾ ಜೊತೆ ನಾನು ಕೂಡ ಬೆಂಗಳೂರಿಗೆ ಬಂದಿದ್ದೆವು. ಪವಿತ್ರಾ ಅವರಿಗೆ ಜೆಮಿನಿ ಟಿವಿಯಿಂದ ಆಫರ್ ಬಂತು. ಹೀಗಾಗಿ, ಬೆಂಗಳೂರಿನಿಂದ ಹೈದರಾಬಾದ್​ಗೆ ಹೊರಟಿದ್ದೆವು ಎಂದು  ಚಂದು ಅಪಘಾತದ ಬಗ್ಗೆ ಹೇಳಿದ್ರು.ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟಿ ಪವಿತ್ರಾ ಜಯರಾಮ್‌ ಇತ್ತೀಚಿಗೆ ತ್ರಿನಯನಿ ಸೀರಿಯಲ್‌ನಲ್ಲಿ ತಿಲೋತ್ತಮ ಪಾತ್ರದಲ್ಲಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ತೆಲುಗು ಪ್ರೇಕ್ಷಕ ಮನಗೆದ್ದಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.