ಸಿನಿಮಾ‌‌ ಸೀರಿಯಲ್ ಅವಕಾಶ ಸಿಗುವ ಮುನ್ನ ತುತ್ತು ಅನ್ನಕ್ಕೂ ಪರದಾಟ, ದುಡ್ಡಿಲ್ಲ ಅಂತ ಬಾಡಿಗೆ ಮನೆ ಮಾಲೀಕ

 | 
Js
ನಿಮ್ಮ ಮೆಚ್ಚಿನ ಧಾರವಾಹಿ ಶ್ರಾವಣಿ ಸುಬ್ರಮಣ್ಯಯ ನಟಿ ಅಸೀಯ ಬದುಕು ಹೇಗಿತ್ತು ಅನ್ನೋದನ್ನ ಹೇಳಿಕೊಂಡಿದ್ದಾರೆ ಹೆಚ್ಚೇನು ಇಲ್ಲ... 5 ವರ್ಷದ ಹಿಂದೆ ಕೊರೊನಾ ಎಂಬ ಪೀಡೆ ವಕ್ಕರಿಸಿಕೊಂಡು ಹಲವರ ಬದುಕು ಸರ್ವನಾಶವಾಯ್ತು. ದೊಡ್ಡವರು- ಚಿಕ್ಕವರು.. ಶ್ರೀಮಂತರು-ಬಡವರು- ಜಾತಿ-ಧರ್ಮದ ಯಾವ ಭೇದವೂ ಇಲ್ಲದೇ ಎಲ್ಲರನ್ನು ಮನೆಯೊಳಗೆ ಈ ಕೊರೊನಾ ಕೂಡಿ ಹಾಕಿತ್ತು. ಇನ್ನು.. ಕೊರೊನಾ ಶುರುವಾದಾಗ ಹೇಳದೇ.. ಕೇಳದೇ.. ಯಾವ ಮುನ್ಸೂಚನೆಯನ್ನು ಕೂಡ ನೀಡದೇ ಏಕಾಏಕಿ ಲಾಕ್ ಡೌನ್ ಅನೌನ್ಸ್ ಮಾಡಿದರಲ್ಲಾ.. ಆಗಿನ ಸ್ಥಿತಿ ಒಂದಿಷ್ಟು ಚೆನ್ನಾಗಿ ಇರಲಿಲ್ಲ.
ನಟಿ ಆಸಿಯಾ ಫಿರ್ದೋಸ್‌ ಸದ್ಯ ಕಿರುತೆರೆ ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ಒಳ್ಳೆಯ ಸಂಭಾವನೆ ಕೂಡ ಅವರಿಗೆ ಸಿಗುತ್ತಿರಬಹುದು. ಆದರೆ ಕೊರೋನಾ ಪರಿಸ್ಥಿತಿಯಲ್ಲಿ ತುತ್ತು ಅನ್ನಕ್ಕೂ ಪರಿದಾಡಿದ್ದರು. ಈ ಬಗ್ಗೆ ಅವರು ಮಾತನಾಡಿ, ನಾನು ಅದೆಷ್ಟೋ ಸೀರಿಯಲ್‌ಗಳಿಗೆ ಆಡಿಷನ್‌ ಕೊಟ್ಟಿದ್ದೆ. ಸಿಕ್ಕಾಪಟ್ಟೆ ರಿಜೆಕ್ಷನ್ಸ್‌ ಆಗಿತ್ತು. ಹೀಗೆ ʻನಾನು ನನ್ನ ಕನಸುʼ ಎಂಬ ಸೀರಿಯಲ್‌ನಲ್ಲಿ ನಟಿಸುವ ಆಫರ್‌ ಸಿಕ್ಕಿತ್ತು. ಡಿಗ್ರಿ ಮಾಡಿಕೊಂಡು ನಾನು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಇವತ್ತು ಬರ್ತ್‌ ಡೇ.. ಮಾರನೇ ದಿನ ನಾನು ಶೂಟಿಂಗ್‌ನಲ್ಲಿದ್ದೆ. ಅದರ ಮರು ದಿನ ಲಾಕ್‌ಡೌನ್‌ ಆ ನಂತರ ಆ ಧಾರಾವಾಹಿ ನಿಂತೋಯ್ತು ಎಂದು ಇತ್ತೀಚೆಗೆ ʻರಾಜೇಶ್‌ ಗೌಡʼ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.
ಅದೇ ನನ್ನ ಮೊದಲ ಸೀರಿಯಲ್‌, ಈಗ ಏನು ಮಾಡಬೇಕು ಅನ್ನೋದು ನನಗೆ ಗೊತ್ತಿಲ್ಲ. ನಾನು ಕ್ಯಾಂಪಸ್‌ ಇಂಟರ್ವ್ಯೂಗಳು ಕೊಟ್ಟಿರಲಿಲ್ಲ. ಡಿಗ್ರಿ ಮುಗಿದಮೇಲೆ ಲೀಡ್‌ ಪಾತ್ರಕ್ಕಾಗಿ ಆಡಿಷನ್ಸ್‌ ಕೊಡೋಣ ಅಂತ ಪ್ಲ್ಯಾನ್‌ ಮಾಡಿಕೊಂಡಿದ್ದೆ. ಆದರೆ ಏಕಾಏಕಿ ಸೀರಿಯಲ್‌ ನಿಂತೋಯ್ತು. 2 ರಿಂದ 3 ತಿಂಗಳು ಬಾಡಿಗೆ ಕಟ್ಟಲು ದುಡ್ಡು ಇರಲಿಲ್ಲ ಎಂದಿದ್ದಾರೆ ಆಸಿಯಾ ಫಿರ್ದೋಸ್.ಅಮ್ಮ ಟೈಲರಿಂಗ್‌ ಮಾಡ್ತಿದ್ರು. ಅಪ್ಪ, ಅಣ್ಣ ಸೆಪರೇಟ್‌ ಆಗಿದ್ದರು. ಅವರ ಕಡೆಯಿಂದ ನಮಗೆ ಯಾವುದೇ ಸಹಾಯ ಆಗುತ್ತಿರಲಿಲ್ಲ. ಅದೇ ಸಮಯಕ್ಕೆ ಸೀರಿಯಲ್‌ ನಿಂತು ಹೋಯ್ತು. ಮೊದಲ ಲಾಕ್‌ಡೌನ್‌ನಲ್ಲಿ ನಮ್ಮ ಮನೆಯಲ್ಲಿ ರೇಷನ್‌ ಕೂಡ ಇರುತ್ತಿರಲಿಲ್ಲ.
ನನ್ನ ಸ್ನೇಹಿತರು ಮನೆ ಮನೆಗೆ ಹೋಗಿ ರೇಷನ್‌ ಕೊಡುತ್ತಿದ್ದರು. ನಮ್ಮ ಮನೆಯಲ್ಲಿ ಕಷ್ಟ ಇದೆ ಅಂತ ಅವರಿಗೆ ಹೇಗೆ ಹೇಳೋದು ಅಂತ ನನಗೆ ಗೊತ್ತಾಗುತ್ತಿರಲಿಲ್ಲ. ಬಾಡಿಗೆ ಬಿಡಿ ಊಟಕ್ಕೆ ಇರುತ್ತಿರಲಿಲ್ಲ ಎಂದು ಆಸಿಯಾ ಫಿರ್ದೋಸ್‌ ಭಾವುಕರಾಗಿದ್ದರು.3 ರಿಂದ 4 ನಾಲ್ಕು ತಿಂಗಳು ಬಾಡಿಗೆ ಕಟ್ಟಿರಲಿಲ್ಲ. ಓನರ್‌ ಮನೆ ಖಾಲಿ ಮಾಡಿ ಅಂದ್ರು.‌ ಲಾಕ್‌ಡೌನ್‌ ಓಪನ್‌ ಆದ ನಂತರ ಒಂದು ಕಂಪನಿಗೆ ಸೇರಿಕೊಂಡೆ. ನಂತರ ದುಡ್ಡು ಕೂಡಿ ಹಾಕಿ, ಸ್ವಲ್ಪ ಸಮಯ ತೆಗೆದುಕೊಂಡು, ಬೇರೆ ಮನೆಗೆ ಶಿಫ್ಟ್‌ ಆದೆವು ಎಂದು ನಟಿ ಆಸಿಯಾ ಫಿರ್ದೋಸ್‌ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.