ಯಶ್ ಮಕ್ಕಳ ನಡತೆ ನೋಡಿ ಫಿದಾ ಆದ ರಾಜ್ಯ ಜನರು
Aug 22, 2024, 08:28 IST
|
ಶ್ರಾವಣ ಮಾಸದ ಹುಣ್ಣಿಮೆಯಂದು ಪ್ರತಿ ವರ್ಷ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಈ ಬಾರಿ 2024ರ ಆಗಸ್ಟ್ 19ರಂದು ಸೋಮವಾರ ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಲಾಗಿದೆ. ಇದು ಅಣ್ಣ-ತಂಗಿ, ಅಕ್ಕ-ತಮ್ಮನ ನಡುವಿನ ಪವಿತ್ರ ಸಂಬಂಧವನ್ನು ಸಂಕೇತಿಸುವ ಹಬ್ಬ ಎಂದೇ ಹೇಳಬಹುದು. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ, ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ.
ಸದ್ಯ ಚಂದನವನದ ತಾರೆಯರು ಕೂಡ ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಿದ್ದಾರೆ. ರಾಗಿಣಿ ದ್ವಿವೇದಿ, ಸಂಗೀತಾ ಶೃಂಗೇರಿ, ಹೇಮಾ ಪ್ರಭಾತ್, ಕಾರ್ತಿಕ್ ಮಹೇಶ್, ಭೂಮಿಕಾ ರಮೇಶ್ ಮುಂತಾದವರು ರಕ್ಷಾ ಬಂಧನ ಆಚರಣೆ ಮಾಡಿದ್ದಾರೆ.ಇನ್ನು, ನಟ ಯಶ್ ಅವರಿಗೆ ಸಹೋದರಿ ನಂದಿನಿ ರಾಖಿ ಕಟ್ಟಿದ್ದಾರೆ. ಅಷ್ಟೇ ಅಲ್ಲ, ಯಶ್ ಅವರ ಮಕ್ಕಳು ಕೂಡ ರಕ್ಷಾ ಬಂಧನ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.
ಹೌದು, ಪ್ರತಿವರ್ಷ ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಅವರು ರಕ್ಷಾ ಬಂಧನ ಆಚರಿಸುತ್ತಾರೆ. ಇಲ್ಲಿವೆ ನೋಡಿ ಈ ಅಕ್ಕ-ತಮ್ಮನ ಕ್ಯೂಟ್ ರಕ್ಷಾ ಬಂಧನ ಆಚರಣೆಯ ಫೋಟೋಗಳು.ನಟಿ ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳ ರಕ್ಷಾಬಂಧನದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಪುಟ್ಟ ಪುಟ್ಟ, ದೊಡ್ಡ ಪ್ರೀತಿ.. ನಮ್ಮ ರಕ್ಷಾಬಂಧನ ಆಚರಣೆಯ ಕೆಲವು ಕ್ಷಣಗಳು. ನೀವೆಲ್ಲರೂ ನಿಮ್ಮ ಪ್ರೀತಿಪಾತ್ರರ ಜೊತೆಗೆ ಆಚರಿಸುತ್ತೀರಿ ಎಂದು ಭಾವಿಸುತ್ತೇವೆ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಸ್ಯಾಂಡಲ್ವುಡ್ನ ಸ್ಟಾರ್ ಕಿಡ್ಸ್ ಯಥರ್ವ್ ಹಾಗೂ ಐರಾ ಪವಿತ್ರ ರಕ್ಷಾ ಬಂಧನವನ್ನು ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿದರು. ಅವರ ಆಚಾರ ವಿಚಾರ ನೋಡಿ ಅಭಿಮಾನಿಗಳ ಭೇಷ್ ಅಂದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.