ಹೆಣ್ಣು ಅಂತ ತಿಳಿದು ನನ್ನ ಜೀವನಕ್ಕೆ ಬಂದ ರಾಜಕಾರಣಿ, ಸತ್ಯ ತಿಳಿದಾಗ ಆ ಕ್ಷಣ ಬಿಟ್ಟೋದ

 | 
Cy
 ಚರಿತಾ ಕೊಂಕಲ್​ ಹೆಸರು ರಾಜಕೀಯ ಕ್ಷೇತ್ರದವರಿಗೆ ಚಿರಪರಿಚಿತ.  ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ಇತಿಹಾಸ ಸೃಷ್ಟಿಸಿದವರು ಇವರು. ಮೊದಲ ತೃತೀಯಲಿಂಗಿಯೊಬ್ಬರು ರಾಷ್ಟ್ರಮಟ್ಟದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡವರು.  ಮುಂಬೈನಿಂದ ಬೆಂಗಳೂರಿಗೆ ಬಂದು ಇಲ್ಲಿಯ ರಾಜಕಾರಣಿಯೊಬ್ಬರ ಪ್ರೀತಿಗೆ ಬಿದ್ದು ಆಮೇಲೆ ಅನುಭವಿಸಿದ ನೋವುಗಳ ಬಗ್ಗೆ ಯೂಟ್ಯೂಬರ್​ ರಾಜೇಶ್​ ಗೌಡ ಅವರ ಚಾನೆಲ್​ನಲ್ಲಿ ಚರಿತಾ ಅವರು ನೋವಿನ ಮಾತುಗಳನ್ನಾಡಿದ್ದಾರೆ. 
ಥೇಟ್​ ಹೆಣ್ಣಿನಂತೆಯೇ ಕಾಣುವ, ಸುಂದರವಾಗಿರುವ ಚರಿತಾ ಅವರನ್ನು ನೋಡಿದ ರಾಜಕಾರಣಿ ಹೆಣ್ಣೆಂದೇ ತಿಳಿದು ಕೆಲ ತಿಂಗಳು ಒಟ್ಟಿಗೇ ಇದ್ದು, ಆಮೇಲೆ ಅವರಿಗೆ ದೂರವಾಗಿ ನೋವು ಕೊಟ್ಟ ಘಟನೆಯನ್ನು ಚರಿತಾ ಈ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ. ರಾಜಕಾರಣಿಯ ಹೆಸರನ್ನು ನೇರವಾಗಿ ಹೇಳದೇ ತಾವು ಅನುಭವಿಸಿದ ಕಹಿ ದಿನಗಳನ್ನು ಅವಹೇಳಿಕೊಂಡಿದ್ದಾರೆ.
ನಾನು ಮುಂಬೈನಿಂದ ಬೆಂಗಳೂರಿಗೆ ನನ್ನ ಗುರುಗಳ ಜೊತೆ ಬಂದಿದ್ದೆ. ಇಲ್ಲಿಯೇ ಉಳಿಯುವ ಆಸೆಯಾಗಿ, ವಾಪಸ್​ ಮುಂಬೈಗೆ ಹೋಗಲಿಲ್ಲ. ನನ್ನ ಗುರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಪಬ್​, ಪಾರ್ಟಿ ಅಂತೆಲ್ಲಾ ಕರೆದುಕೊಂಡು ಹೋಗುತ್ತಿದ್ದರು. ಒಂದು ದಿನ ಪಬ್​ಗೆ ಹೋದಾಗ ಆ ರಾಜಕಾರಣಿ ನನ್ನನ್ನು ನೋಡಿದರು. ಅವರು ನನ್ನ ಇತಿಹಾಸವನ್ನೆಲ್ಲಾ ಕೇಳಲೇ ಇಲ್ಲ. ನನ್ನ ಗುರುವನ್ನು ಕರೆದು ನನ್ನ ಜೊತೆ ಇರಬೇಕು ಎಂದು ಇಷ್ಟಪಟ್ಟರು. ಗುರುಗಳು ಅವರನ್ನು ನನಗೆ ಪರಿಚಯಿಸಿದರು. ನನಗೂ ಅವರು ಇಷ್ಟವಾಗಿ ಹೋದರು ಎನ್ನುತ್ತಲೇ ಆ ರಾಜಕಾರಣಿಯ ಜೊತೆಗಿನ ಅನುಭವವನ್ನು ತೆರೆದಿಟ್ಟಿದ್ದಾರೆ ಚರಿತಾ.
ಎರಡು ತಿಂಗಳು ಹೀಗೆಯೇ ಇದ್ದೆವು. ಅವರೂ ನನ್ನ ಜೊತೆ ಪ್ರೀತಿಯಲ್ಲಿ ಬಿದ್ದರು. ನನಗೆ ಅಪ್ಪ-ಅಮ್ಮ, ಬಂಧು-ಬಳಗ, ಅಣ್ಣ-ತಮ್ಮ, ಸಹಪಾಠಿಗಳು... ಹೀಗೆ ಯಾರ ಪ್ರೀತಿಯನ್ನೂ ಬಲ್ಲವಳಲ್ಲ. ಹೀಗಾಗಿ ಮೂರನೆಯ ವ್ಯಕ್ತಿ ಬಂದು ನನ್ನನ್ನು ಈ ಪರಿಯಲ್ಲಿ ಪ್ರೀತಿಸುತ್ತಿದ್ದಾರೆ ಎಂದು ತಿಳಿದು ನಾನೂ ಪ್ರೀತಿಯ ಬಲೆಗೆ ಬಿದ್ದು ಬಿಟ್ಟೆ. ಮೊದಲ ಎರಡು ತಿಂಗಳು ನಮ್ಮ ನಡುವೆ ಶಾರೀರಿಕ ಸಂಪರ್ಕ ಇರಲಿಲ್ಲ. ಆದ್ದರಿಂದ ಅವರಿಗೆ ನಾನು ಟ್ರಾನ್ಸ್​ಜೆಂಡರ್​ ಎನ್ನುವುದು ತಿಳಿಯಲಿಲ್ಲ. ನನ್ನ ಗುರುಗಳಿಂದ ನನ್ನ ಇತಿಹಾಸವನ್ನು ಅವರು ತಿಳಿದುಕೊಂಡಿದ್ದರೂ ನನ್ನನ್ನು ಪ್ರೀತಿಸ್ತಾರೆ ಎಂದುಕೊಂಡು ನಾನು ಕೂಡ ನನ್ನ ಬಗ್ಗೆ ಹೇಳಲು ಹೋಗಲೇ ಇಲ್ಲ ಎಂದಿದ್ದಾರೆ ಚರಿತಾ. ಎರಡು ತಿಂಗಳು ಕಳೆದ ಮೇಲೆ ಅದೊಂದು ದಿನ ನನ್ನ ಸತ್ಯ ಅವರಿಗೆ ತಿಳಿಯಿತು. ನನ್ನನ್ನು ಬಿಟ್ಟು ಹೋದರು. ಆಗ ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ ಎಂದು ದುಃಖದ ದಿನಗಳನ್ನು ಚರಿತಾ ನೆನೆದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.