ಬ್ರಹ್ಮಾಂಡ ಗುರೂಜಿ ಹೇಳಿದ ಭವಿಷ್ಯ ಇದುವರೆಗೂ ಸುಳ್ಳಾಗಿಲ್ಲ
Oct 29, 2024, 16:41 IST
|

ಕರ್ನಾಟಕ ರಾಜ್ಯ ಮೂರು ಭಾಗವಾಗಲಿದೆ. ಅಷ್ಟೇ ಅಲ್ಲದೆ, ಮೂವರು ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಮಾತನಾಡಿರುವ ಅವರು ಇಂತಹದೊಂದು ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ.ನರೇಂದ್ರ ಬಾಬು ಶರ್ಮಾ ಬ್ರಹ್ಮಾಂಡ ಗುರೂಜಿ ಎಂದೇ ಪ್ರಸಿದ್ಧಿ ಪಡೆದವರು. ಇವರು ರಾಜ್ಯ ಸೇರಿ ದೇಶ ಹಾಗೂ ಪ್ರಪಂಚದಲ್ಲಿ ನಡೆಯುವ ಬಗ್ಗೆ ಸ್ಫೋಟಕ ಭವಿಷ್ಯ ನುಡಿಯುವುದರ ಮೂಲಕ ಸುದ್ದಿಯಲ್ಲಿರುತ್ತಾರೆ.
ಇದೀಗ ಕರ್ನಾಟಕ ರಾಜ್ಯ ಮೂರು ಹೋಳಾಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.ಕರ್ನಾಟಕವು ಮೂರು ಭಾಗ ಆಗುವುದು ಶತಸಿದ್ಧ, ಶಿವನ ಮೇಲೆ ಆಣೆ ಮಾಡುತ್ತೇನೆ, ಇದು ಸತ್ಯವಾಗಲಿದೆ. ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕವಾಗಿ ರಾಜ್ಯವು ಮೂರು ಭಾಗ ಆಗಲಿದೆ. ಹಾಗೆಯೇ ಮೂವರು ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಯಾವಾಗ ಆಗಲಿದೆ? ಎಂಬುವುದನ್ನು ಮಾತ್ರ ತಿಳಿಸಿಲ್ಲ.
ಹಾಸನಕ್ಕೆ ಭೇಟಿ ನೀಡಿದ್ದ ಅವರು, ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಈ ಮಾತನ್ನು ಆಡಿದ್ದಾರೆ. ಕೇವಲ ಕರ್ನಾಟಕದ ಬಗ್ಗೆ ಮಾತ್ರ ಅವರು ಭವಿಷ್ಯ ನುಡಿದಿಲ್ಲ, ಭಾರತ ದೇಶವೂ ಎರಡು ಭಾಗವಾಗಲಿದೆ ಎಂದು ಹೇಳಿದ್ದಾರೆ. ಭಾರತ ದೇಶ ಮತ್ತೆ ಎರಡು ಭಾಗ ಆಗಲಿದೆ. ಈ ನಡುವೆ ಬಾಂಗ್ಲಾದೇಶ-ಚೀನಾ ಕುತಂತ್ರ ಮಾಡಿ ದೇಶದ ಮೇಲೆ ದಾಳಿ ಮಾಡಲಿವೆ ಎಂದೂ ಭವಿಷ್ಯ ನುಡಿದಿದ್ದಾರೆ.
ಇಂತಹ ಸಂದರ್ಭದಲ್ಲಿ ನಮ್ಮ ದೇಶಕ್ಕೆ ಅಮೆರಿಕದಿಂದಾಗಲಿ ಅಥವಾ ಬೇರೆ ಯಾವ ದೇಶದಿಂದಲೂ ಸಹಾಯ ಸಿಗುವುದಿಲ್ಲ. ಆದರೆ, ರಷ್ಯಾವೊಂದೇ ಸಹಾಯವನ್ನು ಮಾಡಲಿದೆ ಎಂದು ತಿಳಿಸಿದ್ದಾರೆ.ಕರ್ನಾಟಕ, ಭಾರತದ ಬಗ್ಗೆ ಮಾತ್ರ ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿಲ್ಲ, 2025 – 2026ಕ್ಕೆ ಮೂರನೇ ಮಹಾಯುದ್ಧಯೂ ನಡೆಯಲಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. 13 ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ದಾಳಿ ಮಾಡಲಿವೆ ಎಂದು ಅವರು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.