ಅಜ್ಜಿಯನ್ನು ಮದುವೆಯಾದ ಫ್ರಾನ್ಸ್ ದೇಶದ ಅಧ್ಯಕ್ಷ, ಮೊದಲು ರಾತ್ರಿ ಆಗಿದ್ದೇನು ಗೊ.ತ್ತಾ

 | 
ರಕ

ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ, ಯಾವುದೇ ಬಂಧವಿಲ್ಲ. ಪ್ರೀತಿ ಮನಸ್ಸಿನಿಂದ ಹುಟ್ಟುವಂತಹದ್ದೇ ಹೊರತು ಮತ್ತೇನನ್ನು ನೋಡೋದಿಲ್ಲ. ವಯಸ್ಸಿನ ಮಧ್ಯೆ ಎಷ್ಟೇ ಅಂತರವಿರಲಿ ಇಬ್ಬರ ಮಧ್ಯೆ ಪ್ರೀತಿ ಇದ್ರೆ ಅದು ದೀರ್ಘಕಾಲ ಬಾಳುತ್ತದೆ. ಇದಕ್ಕೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪ್ರೇಮ ಕಥೆ ಉತ್ತಮ ನಿದರ್ಶನ.   ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪತ್ನಿ, ಅವರಿಬ್ಬರ ಪ್ರೇಮ ಕಥೆಯನ್ನು ಹೇಳಿದ್ದಾರೆ. 

ಡೇಟಿಂಗ್ ಆರಂಭದಲ್ಲಿ ಇಬ್ಬರು ತಮ್ಮ ಭವಿಷ್ಯದ ಬಗ್ಗೆ ಎಷ್ಟು ಆಲೋಚನೆ ಮಾಡ್ತಿದ್ದರು ಎಂಬುದರ ಜೊತೆಗೆ ಸ್ಕೂಲ್ ಜೀವನ ಮುಗಿದ ಮೇಲೆ ಎಮ್ಯಾನುಯೆಲ್ ಮ್ಯಾಕ್ರನ್ ತಮ್ಮ ವಯಸ್ಸಿನ ಹುಡುಗಿಯನ್ನು ಮದುವೆಯಾದ್ರೆ ಏನು ಕಥೆ ಎಂದು ಅವರು ಪತ್ನಿ ಚಿಂತಿಸುತ್ತಿದ್ದರಂತೆ.ಎಮ್ಯಾನುಯೆಲ್ ಮ್ಯಾಕ್ರನ್ ಪತ್ನಿ ಹೆಸರು ಬ್ರಿಗಿಟ್ಟೆ ಮ್ಯಾಕ್ರನ್. ಅವರು ಪ್ಯಾರಿಸ್  ಮ್ಯಾಚ್ ಔಟ್ಲೆಟ್ ಎಗೆ ನೀಡಿದ ಸಂದರ್ಶನದಲ್ಲಿ ತಮ್ಮ ಪ್ರೇಮ ಜೀವನದ  ಬಗ್ಗೆ ಮಾತನಾಡಿದ್ದಾರೆ. 

ನನಗೆ ತುಂಬಾ ಟೆನ್ಷನ್ ಆಗ್ತಿತ್ತು ಎನ್ನುವ ಬ್ರಿಗಿಟ್ಟೆ, ಇಷ್ಟು ಚಿಕ್ಕ ವಯಸ್ಸಿನ ಹುಡುಗನನ್ನು ಡೇಟಿಂಗ್ ಮಾಡ್ತಿರೋದು ಗಂಭೀರ ವಿಷ್ಯವಾಗಿತ್ತು ಎನ್ನುತ್ತಾರೆ. ಅವರ ವಯಸ್ಸಿನ ಹುಡುಗಿ ಜೊತೆ ಅವರು ಪ್ರೀತಿಗೆ ಬೀಳ್ತಾರೆ ಅಂತಾ ನಾನು ಅನೇಕ ಬಾರಿ ಎಮ್ಯಾನುಯೆಲ್ ಮ್ಯಾಕ್ರನ್ ಗೆ ಹೇಳಿದ್ದೆ. ಆದ್ರೆ ಅದು ಎಂದಿಗೂ ಆಗ್ಲಿಲ್ಲ ಎನ್ನುತ್ತಾರೆ ಬ್ರಿಗಿಟ್ಟೆ ಮ್ಯಾಕ್ರನ್. ಇವರಿಬ್ಬರ ಮಧ್ಯೆ ವಯಸ್ಸಿನ ದೊಡ್ಡ ಅಂತರವಿದೆ. ಬ್ರಿಗಿಟ್ಟೆಗೆ 72 ವರ್ಷ ಮತ್ತು ಎಮ್ಯಾನುಯೆಲ್‌ಗೆ 45 ವರ್ಷ. 

ಬ್ರಿಗಿಟ್ಟೆ ಮ್ಯಾಕ್ರನ್‌ಗಿಂತ 27 ವರ್ಷ ದೊಡ್ಡವರು. ಬ್ರಿಗಿಟ್ಟೆ ಕ್ಯಾಥೋಲಿಕ್ ಪ್ರಾವಿಡೆನ್ಸ್ ಶಾಲೆಯಲ್ಲಿ ನಾಟಕ ತರಗತಿಗಳನ್ನು  ತೆಗೆದುಕೊಳ್ಳುತ್ತಿದ್ದಳು. ಬ್ರಿಗಿಟ್ಟೆ ಅವರ ಮಗಳು ಅಧ್ಯಕ್ಷ ಮ್ಯಾಕ್ರನ್ ಅವರ ಸಹಪಾಠಿಯಾಗಿದ್ದಳು. ನಮ್ಮಿಬ್ಬರ ವಯಸ್ಸಿನ ಬಗ್ಗೆ ನನಗೆ ತುಂಬಾ ಚಿಂತೆಯಿತ್ತು ಎನ್ನುವ ಬ್ರಿಗಿಟ್ಟೆ, ನಾನು ಸುಕ್ಕುಗಳನ್ನು ಬರಮಾಡಿಕೊಳ್ಳುತ್ತಿದ್ದರೆ ಆತ ಇನ್ನೂ ಯೌವ್ವನದಲ್ಲಿದ್ದ ಎನ್ನುತ್ತಾರೆ ಬ್ರಿಗಿಟ್ಟಿ. ಜಗತ್ತಿಗೆ ಇವರಿಬ್ಬರ ಸಂಬಂಧ ತಿಳಿದಾಗ ಅದನ್ನು ಹಗರಣವೆಂದು ಜನರು ಮಾತನಾಡಿದ್ದರಂತೆ. 

ಬ್ರಿಗಿಟ್‌ಗೆ ಈಗಾಗಲೇ ಮದುವೆ ಆಗಿತ್ತು. ಆದ್ರೆ ಪತಿಯಿಂದ ದೂರವಿದ್ದರು. ಎಮ್ಯಾನುಯೆಲ್ ಮದುವೆ ಆಗ್ಬೇಕು ಅಂದ್ರೆ ವಿಚ್ಛೇದನ ಪಡೆಯಬೇಕಿತ್ತು. ವಿಚ್ಛೇದನ ಸಿಕ್ಕದ ಮೇಲೂ ಬ್ರಿಗಿಟ್ ಗೆ ಚಿಂತೆ ಕಾಡ್ತಿತ್ತು. ನನ್ನ ಈ ಸಂಬಂಧವನ್ನು ಮಕ್ಕಳು ಹೇಗೆ ಸ್ವೀಕರಿಸ್ತಾರೆ ಎನ್ನುವ ಭಯವಿತ್ತು. ಯಾಕೆಂದ್ರೆ ಎಮ್ಯಾನುಯೆಲ್ ಮಕ್ಕಳ ಸಹಪಾಠಿ ಆಗಿದ್ದರು. 10 ವರ್ಷ ಡೇಟಿಂಗ್ ನಲ್ಲಿದ್ದ ಜೋಡಿ ಕೊನೆಗೆ ಮದುವೆಯಾದ್ರು. ಸಂಬಂಧದಲ್ಲಿ ಯಾವುದೇ ಸಮಸ್ಯೆ ಬರದಿರಲಿ ಎನ್ನುವ ಕಾರಣಕ್ಕೆ ಬ್ರಿಗಿಟ್ ಮದುವೆಗೆ ಇಷ್ಟು ಸಮಯ ನೀಡಿದ್ದರು. 

ಎಮ್ಯಾನುಯೆಲ್  ಅವರಿಗೆ 29 ವರ್ಷ ವಯಸ್ಸಾದಾಗ 2007 ರಲ್ಲಿಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಮ್ಮನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದವೆಂದು ಬ್ರಿಗಿಟ್ ತನ್ನ ಮಕ್ಕಳಿಗೆ ಹೇಳಿದ್ದರಂತೆ. ಎಮ್ಯಾನುಯೆಲ್ ತಮ್ಮ 39 ನೇ ವಯಸ್ಸಿನಲ್ಲಿ ಚುನಾವಣೆ ಗೆದ್ದು, ದೇಶದ ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.