ಇಬ್ಬರ ಮಧ್ಯೆ ಬಿರುಕು ಬಂದಿದ್ದು ಆ ವ್ಯಕ್ತಿಯಿಂದ; ಚಂದನ್ ಮುಖ ನೋಡಿ ಸತ್ಯ ಹೇಳಿದ ತಾರಮ್ಮ

 | 
ಹಹ೭

ಸೆಲೆಬ್ರೆಟಿಗಳ ಬಾಳಲಿ ಬಿರುಗಾಳಿ ಏಳುತ್ತಿರುವುದು ಹೊಸದೇನಲ್ಲ. ಆದರೆ ಇತ್ತೀಚೆಗೆ ಸೆಲಬ್ರೆಟಿಗಳ ಡಿವೋರ್ಸ್ ಪ್ರಕರಣ ಗಲು ಹೆಚ್ಚಾಗುತ್ತಿದೆ. ಈ ಸಾಲಿಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿ ಎಂದೇ ಖ್ಯಾತಿಗೊಂಡಿರುವ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ ಸೇರಿಕೊಳ್ಳುತ್ತಿದೆ.  ಹೌದು, ಚಂದನ್ ಶೆಟ್ಟಿ ಹಾಗೂ  ಕಿರುತೆರೆ ಸ್ಟಾರ್ ನಿವೇದಿತಾ ಗೌಡಾ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದೀಗ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. 

ತಾರಾ ಜೋಡಿಯಾಗಿ ಮಿಂಚಿದ್ದ ನಿವೇದಿತಾ ಹಾಗೂ ಚಂದನ್ ವಿಚ್ಚೇದನ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ತಮ್ಮ ಕನ್ನಡ ರ್ಯಾಪ್ ಹಾಡುಗಳು ಮೂಲಕ ಮನೆ ಮಾತಾದ ಚಂದನ್ ಶೆಟ್ಟಿಗೆ ನಿವೇದಿತಾ ಜೊತೆಯಾಗಿದ್ದು ಬಿಗ್ ಬಾಸ್ -5ರಲ್ಲಿ. ಬೊಂಬೆ ಬೊಂಬೆ ಅಂತ ಹಾಡುತ್ತಲ್ಲೇ ಕಿಡ್ಡಿಶ್ ಎನಿಸಿದರೂ, ಪ್ರಬುದ್ಧತೆ ತೋರಿದ ನಿವೇದಿತಾ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಳು. ಇಬ್ಬರೂ ಕೆಲವು ವರ್ಷಗಳ ಕಾದು ಮದುವೆಯಾಗಿದ್ದರೂ. ಮೈಸೂರು ಯುವ ದಸರಾದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು ದೊಡ್ಡ ವಿವಾದವಾಗಿತ್ತು.

ನಂತರ ಎಲ್ಲರೂ ಇವರ ಬೆಂಬಲಕ್ಕೆ ನಿಂತು ವಿಷಯವನ್ನು ತಣ್ಣಗಾಗಿಸಿದ್ದರು. ನಂತರ ಮೈಸೂರಲ್ಲಿ ಈ ಜೋಡಿ ಅದ್ಧೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟಿತ್ತು. ಇನ್ನು ಬಿಡುಗಡೆಯಾಗದ ಕ್ಯಾಂಡಿ ಕ್ರಶ್ ಚಿತ್ರದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡಾ ಒಟ್ಟಿಗೆ ನಟಿಸಿದ್ದಾರೆ. ಹಲವು ಸೂಪರ್ ಹಿಟ್ ಹಾಡು ನೀಡಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡಾ ದಾಂಪತ್ಯ ಜೀವನದ ಶಾಕಿಂಗ್ ನ್ಯೂಸ್ ಅಭಿಮಾನಿಗಳನ್ನೂ ಬೆಚ್ಚಿ ಬೀಳಿಸಿದೆ.

ಇನ್ನು ಇವರ ಕುರಿತಾಗಿ ಹೇಳಿಕೆ ನೀಡಿರುವ ನಟಿ ತಾರಾ ಅನುರಾಧಾ ಇವರಿಬ್ಬರದು ಅತ್ಯುತ್ತಮ ಜೋಡಿ. ಅದ್ಯಾಕೆ ಇಂತಹಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋದರೋ ತಿಳಿಯುತ್ತಿಲ್ಲ. ಒಂದಿಷ್ಟು ಕೂತು ಮಾತನಾಡಿದರು ಬಗೆ ಹರಿಸಿಕೊಳ್ಳಬಹುದಿತ್ತು. ಆದರೆ ಇವರಿಬ್ಬರೂ ಇಂತಹಾ ನಿರ್ಧಾರಕ್ಕೆ ಬಂದಿದ್ದಾರೆ. ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.