ಡ್ಯಾನ್ಸ್ ಮಾಡುವಾಗ ಪ್ರಾ ಣ ಬಿಟ್ಟ ಸೈನಿಕ; ಬೆಚ್ಚಿಬಿ ದ್ದ ಕನ್ನಡಿಗರು
ಸಾವು ಯಾರಿಗೆ ಯಾವಾಗ ಬೇಕಾದರೂ ಸಂಭವಿಸಬಹುದು. ಹೌದು ಮಧ್ಯಪ್ರದೇಶದ ಇಂದೋರ್ ಯೋಗ ಕೇಂದ್ರದಲ್ಲಿ ಆಸ್ತ ಯೋಗ ಕ್ರಾಂತಿ ಅಭಿಯಾನದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗು ಮತ್ತು ತೂಕ ಇಳಿಸುವ ಯೋಗಕ್ಕೆ ಹೆಸರಾದ ಬಲ್ವಿಂದರ್ ಸಿಂಗ್ ಛಾಬ್ರಾ ಎಂಬ ನಿವೃತ್ತ ಸೈನಿಕ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರು.
ಆಗ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಅವರು ನೆಲಕ್ಕೆ ಬಿದ್ದಿದ್ದಾರೆ. ಆದರೆ, ಇದು ಕೂಡ ಡ್ಯಾನ್ಸ್ನ ಒಂದು ಭಾಗವೆಂದು ತಿಳಿದ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾ ಕುಳಿತಿದ್ದಾರೆ. ಬಹಳ ಹೊತ್ತಾದ ನಂತರವೂ ಅವರು ಮೇಲಕ್ಕೆ ಏಳದ ಹಿನ್ನೆಲೆಯಲ್ಲಿ ಹತ್ತಿರ ಹೋಗಿ ನೋಡಿದಾಗ ಅವರು ಸಾವನ್ನಪ್ಪಿರುವುದು ಗೊತ್ತಾಗಿದೆ.
ಸೈನಿಕನ ಯೂನಿಫಾರಂ ಹಾಕಿ, ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡೇ ಬಲ್ವಿಂದರ್ ಸಿಂಗ್ ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಸಿಪಿಆರ್ ಪಡೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಛಾಬ್ರಾ ಅವರ ಕುಟುಂಬವು ಅವರ ಕೊನೆಯ ವಿಧಿಗಳಿಗೂ ಮೊದಲು ಅವರ ಕಣ್ಣುಗಳು, ಚರ್ಮ ಮತ್ತು ಇತರ ಅಂಗಗಳನ್ನು ದಾನ ಮಾಡಿದ್ದಾರೆ.
ಈ ಮೂಲಕ ಬಲ್ವಿಂದರ್ ಸಿಂಗ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಬ್ಬ ಯೋಧನಾಗಿ ರಾಷ್ಟ್ರಧ್ವಜ ಹಿಡಿದುಕೊಂಡೇ ಸಾವನ್ನಪ್ಪಿದ್ದಾರೆ. ವೈದ್ಯರು ಇದು ಹೃದಯಾಘಾತದಿಂದಾದ ಸಾವು ಎಂದು ಶಂಕಿಸಿದ್ದಾರೆ. ಆದರೂ ಹಲವಾರು ಜನ ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.