ಪರೀಕ್ಷೆ ಪೇಪರ್ ನಲ್ಲಿ ವಿದ್ಯಾರ್ಥಿ ಬರೆದ ಸಣ್ಣ ಡೈಲಾಗ್ ನೋಡಿ Full ಮಾರ್ಕ್ಸ್ ಕೊಟ್ಟ ಶಿಕ್ಷಕ

 | 
Ji
ಸಾಮಾನ್ಯವಾಗಿ ಶಾಲೆಗೆ ಮತ್ತು ಕಾಲೇಜಿಗೆ ಓದಲು ಹೋಗುವ ಹುಡುಗರು ಹಾಗೂ ಹುಡುಗಿಯರು ಯಾವುದಾದರೂ ತಮ್ಮ ನೆಚ್ಚಿನ ನಟ ಮತ್ತು ನಟಿಯರ ಚಲನಚಿತ್ರವನ್ನು ನೋಡಿ ಬಂದರೆ ಸಾಕು, ಮಾರನೆಯ ದಿನ ಅವರಂತೆಯೇ ಡ್ರೆಸ್ ಮಾಡಿಕೊಳ್ಳುವುದು, ಅವರಂತೆಯೇ ತಮ್ಮ ಕೂದಲುಗಳನ್ನು ಬಾಚುವುದು ಮತ್ತು ಆ ಚಿತ್ರದ ಡೈಲಾಗ್‌ಗಳನ್ನು ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ತಮ್ಮ ಸ್ನೇಹಿತರ ಮುಂದೆ ಸ್ಟೈಲ್ ಆಗಿ ಹೇಳುವುದು ಮತ್ತು ಮುಖ್ಯವಾಗಿ ಆ ಚಿತ್ರದ ಇಷ್ಟವಾದ ಹಾಡುಗಳನ್ನು ಪದೇ ಪದೇ ಹಾಡುತ್ತಲೇ ಇರುತ್ತಾರೆ. 
ಹೀಗೆ ಈ ಸಿನಿಮಾ ಎನ್ನುವುದು ಈ ಹುಡುಗ ಮತ್ತು ಹುಡುಗಿಯರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ನೋಡಿ. ಕೆಲವೊಮ್ಮೆ ಅಂತೂ ಪರೀಕ್ಷೆಯಲ್ಲಿ ಏನು ಬರೆದೆ ಎಂದು ಕೇಳಿದರೆ ಒಂದು ಪ್ರಶ್ನೆಗೆ ಉತ್ತರ ಗೊತ್ತಿರಲಿಲ್ಲ, ಅದಕ್ಕೆ ಯಾವುದೋ ಒಂದು ಚಿತ್ರದ ಹಾಡಿನ ಸಾಲುಗಳನ್ನು ಬರೆದು ಬಂದೆ ಎಂದು ಹೇಳುವುದನ್ನು ನಾವು ನಮ್ಮ ಸ್ನೇಹಿತರ ಬಾಯಿಂದ ಒಮ್ಮೆಯಾದರೂ ಕೇಳಿರುತ್ತೇವೆ.
ಹೌದು ಉತ್ತರ ಗೊತ್ತಿಲ್ಲದೆ ಶಿಕ್ಷಕರಿಂದ ಭೇಷ್ ಎನಿಸಿಕೊಂಡ ಕಥೆಯಿದು. ಹೌದು ಉತ್ತರ ಗೊತ್ತಿಲ್ಲದಿದ್ದರೂ ಇಲ್ಲೊಬ್ಬ ವಿದ್ಯಾರ್ಥಿ 80 ಅಂಕಕ್ಕೆ 80 ಅಂಕ ನೀಡಿರುವುದನ್ನು ನಾವಿಲ್ಲಿ ಕಾಣಬಹುದು. ಅಯ್ಯೋ ಈಗೇಕೆ ಇದನ್ನೆಲ್ಲಾ ಮಾತಾಡುತ್ತಿದ್ದೇವೆ ಎಂದು ನಿಮಗೆ ಅನ್ನಿಸಬಹುದು. ಹೌದು, ವಿಷಯ ಇದೆ ಇಲ್ಲೊಬ್ಬ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಬೋರ್ಡ್ ಪರೀಕ್ಷೆಯಲ್ಲಿ ಒಂದು ಡೈಲಾಗ್ ಅನ್ನು ಬರೆದು ಬಂದಿದ್ದಾನೆ. 
ಹೌದು ಹಲವಾರು ಜನ ನನ್ನ ಸೋಲಿಗೆ ಕಾಯುತ್ತಿದ್ದಾರೆ. ನಾನು ಸೋಲಬಾರದು . ನೀನು ಸೋಲು ಅನುಭವಿಸಿ ಹೋಗು ಎನ್ನುವವರ ಮುಂದೆ ಗೆದ್ದಾಗ ಆಗುವ ಖುಷಿಯೇ ಬೇರೆ ಎಂದೆಲ್ಲ ಬರೆದಿದ್ದಾನೆ. ಅದನ್ನು ಓದಿ ಸಂತೋಷವಾಗಿ ಫುಲ್ ಮಾರ್ಕ್ಸ್ ನೀಡಿದ್ದಾರೆ ಎಂಬ ವೀಡಿಯೋ ಒಂದು ವೈರಲ್ ಆಗ್ತಿದೆ. ಸಿನಿಮಾ ಡೈಲಾಗ್ ಬರೆಯೋಕಿಂತ ಇದು ಬೆಸ್ಟ್ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.