ಪೆನ್ ಡ್ರೈವ್ ಲೀ ಇರೋ ವಿಡಿಯೋ ನನ್ನದೇ, ನಟ ಪ್ರಥಮ್ ಹೇಳಿಕೆಗೆ ಕರುನಾಡು ತತ್ತರ

ಸದ್ಯ ರಾಜ್ಯ ರಾಜಕಾರಣದಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ಹಾಸನದ ಪೆನ್ ಡ್ರೈವ್ ಪ್ರಕರಣ ಪ್ರಭಾವಿ ರಾಜಕಾರಣಿಯೊಬ್ಬರ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಹತ್ತಾರು ಪ್ರತಿಭಟನೆಗಳು ಶುರುವಾಗಿದೆ.ರಾಜಕೀಯ ಪಕ್ಷಗಳು ಸೇರಿದಂತೆ ಅನೇಕರು ಈ ಕೃತ್ಯ ಎಸೆಗಿದವರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ನಟಿ ಕಸ್ತೂರಿ, ತೆಲುಗು ನಟಿ ಪೂನಂ ಕೌರ್ ಮುಂತಾದ ಕಲಾವಿದರು ಹರಿಹಾಯ್ದಿದ್ದಾರೆ.ನಟ ಪ್ರಥಮ್ ರಾಜ್ಯದಲ್ಲಿ ಸದ್ದು ಮಾಡಿದ ಪ್ರಕರಣಗಳಿಗೆ ಯಾವಾಗಲೂ ತಮ್ಮ ಪ್ರತಿಕ್ರಿಯೆಯನ್ನು ನೀಡಿ ನ್ಯಾಯದ ಪರವಾಗಿ ಧ್ವನಿ ಎತ್ತುತ್ತಾರೆ. ಇತ್ತೀಚೆಗೆ ನೇಹಾ ಹೀರೆಮಠ್ ಪ್ರಕರಣದಲ್ಲೂ ಧ್ವನಿ ಎತ್ತಿದ್ದರು. ಇದೀಗ ಪೆನ್ ಡ್ರೈವ್ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ.
ರಾಜಕಾರಣಿಯೊಬ್ಬರ ವಿಡಿಯೋ ಕೇಸ್ ಗೆ ಸಂಬಂಧಿಸಿದಂತೆ ಪ್ರಥಮ್ ಪ್ರತಿಕ್ರಿಯೆ ನೀಡಬೇಕೆಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಟ್ವೀಟ್ ಮಾಡಿರುವ ಅವರು,ಹಾಸನದ ಘಟನೆ ಅಕ್ಷಮ್ಯ. ತಪ್ಪಿತಸ್ಥರಿಗೆ ಗಲ್ಲು ಆಗಲಿ. ಎಸ್ ಐಟಿಯಲ್ಲಿರುವ ನಾಗಲಕ್ಷ್ಮೀ ಮೇಡಮ್ ಗೆ ಮಹಿಳೆಯರ ಕಾಳಜಿ ಇದೆ. FSIL test ಮಾಡಿದರೆ 4ದಿನದಲ್ಲಿ ವರದಿ ಬರುತ್ತದೆ.
ಅಲ್ಲಿರುವ ಧ್ವನಿ ಸಂಬಂಧ ಪಟ್ಟವರದ್ದಾಗಿದರೆ ಶಿಕ್ಷಿಸಿ. ನಾನು ಫಿಲ್ಮ್ ಮಾಡಿ ಸಾಲದಲ್ಲಿದ್ದೇನೆ. ಎಲ್ಲದಕ್ಕೂ ಪ್ರಥಮ್ ನ ಕೇಳಬೇಡಿ. ಕರ್ನಾಟಕದ ಅಳಿಯ ಫಿಲ್ಮ್ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಎಲ್ಲರೂ ಗೆಲ್ಲಿಸಿ ಎಂದು ಟ್ವೀಟ್ ಮಾಡಿದ್ದರು.ಇದಾದ ಬಳಿಕ ಅವರು ಪೆನ್ ಡ್ರೈವ್ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಪ್ರಚಾರವನ್ನು ಪೆನ್ ಡ್ರೈವ್ ವಿಚಾರವನ್ನು ಹೇಳಿ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಪೆನ್‌ಡ್ರೈವ್ ಬಗ್ಗೆ ಮಾತನಾಡುವ ಟೈಂ ಬಂತು. ಪೆನ್‌ಡ್ರೈವ್ ಇದೆ. ಇದೇ ಪೆನ್‌ಡ್ರೈವ್ ಬಗ್ಗೆ ತಾನೇ ಮಾತಾಡಿ ಮಾತಾಡಿ ಅಂದಿದ್ದು. ಈ ಪೆನ್‌ಡ್ರೈವ್‌ನಲ್ಲಿರು ವಿಡಿಯೋ ನಿಜ. ನಾನು, ಹೀರೊಯಿನ್ ಇಬ್ಬರೂ ಸೇರಿ ಮಾಡಿದಂತಹ ವಿಡಿಯೋ ಇದು. ಈ ಪೆನ್‌ಡ್ರೈವ್ ಇಷ್ಟು ದೊಡ್ಡ ಸಮಸ್ಯೆ ಮಾಡುತ್ತದೆ ಎಂದು ಗೊತ್ತಿರಲಿಲ್ಲ. ಜನರ ಬಳಿ ಮುಚ್ಚಿಟ್ಟು ನಾನು ಏನು ಸಾಧಿಸಬೇಕಾದ್ದು ಇಲ್ಲ. ನಾನು ಮಾಡಿಲ್ಲ, ನನ್ನದ್ದಲ್ಲ. ಫೇಕ್ ಅಂತ ನಾನು ಹೇಳಲ್ಲ.
ಈ ಪೆನ್‌ಡ್ರೈವ್‌ನಲ್ಲಿರುವುದು ನಾನೇ. ಆ ನಟಿಯೂ ನಿಜ. ಇದನ್ನು ಸಿಎಂ ಗಮನಕ್ಕೂ ತಂದಿದ್ದೆ. ಅವರು ಮುಂದಿನ ತಿಂಗಳು ಗಮನ ಹರಿಸುತ್ತೇನೆ ಎಂದಿದ್ದರು. ಎಲ್ಲರಿಗೂ ಪೆನ್‌ಡ್ರೈವ್ ಮಾಡಿ ಹಂಚಲು ಸಾಧ್ಯವಿಲ್ಲ. ಒಂದು ಪೆನ್‌ಡ್ರೈವ್ ಬೆಲೆ 600 ರೂ. ಯಾರು ಕೊಡ್ತಾರೆ. ಆದರೂ ನೀವು ನೋಡಬೇಕು. ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ಯೂಟ್ಯೂಬ್‌ನಲ್ಲಿದೆ. ಕರ್ನಾಟಕದ ಆಳಿಯ ಸಿನಿಮಾದ ಹಾಡುಗಳು ಈ ಪೆನ್ ಡ್ರೈವ್ ನಲ್ಲಿದೆ. ಪೂರ್ತಿ ಸಿನಿಮಾ ಮುಂದಿನ ತಿಂಗಳು ಬರಲಿದೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.