ಹನುಮಂತನ ವಿರುದ್ಧ ನಿಂತ ಕರ್ನಾಟಕದ ಮಹಿಳೆಯರು, ಈ ಹಾಡು ಹಾಡುವ ಯೋಗ್ಯತೆ ಇಲ್ಲ ಅವನಿಗೆ ಎಂದ ಸ್ತ್ರೀಯರು
Feb 4, 2025, 13:25 IST
|

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದೆನಿಸಿಕೊಂಡಿರುವ ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿಯ ವಿಜೇತರಾಗಿ ಹನುಮಂತ ಲಮಾಣಿ ಹೊರಹೊಮ್ಮಿದ್ದಾರೆ. ವಿವಿಧ ಕ್ಷೇತ್ರಗಳ 20 ಸ್ಪರ್ಧಿಗಳನ್ನು ಒಳಗೊಂಡಿದ್ದ ಈ ಸಲದ ಬಿಗ್ ಬಾಸ್‌ನಲ್ಲಿ, ಘಟಾನುಘಟಿಗಳೇ ದಂಡೇ ಇತ್ತು. ಬಲಿಷ್ಠ ಸ್ಪರ್ಧಿಗಳ ನಡುವೆ, ಚಾಣಾಕ್ಷ ಆಟಗಾರರೂ ಬಿಗ್ ಬಾಸ್ ಮನೆ ಪ್ರವೇಶಕ್ಕೂ ಮೊದಲೇ, ಒಂದಷ್ಟು ಪಟ್ಟುಗಳನ್ನು ಕಲಿತು ಬಂದಿದ್ದರು.
ಆದರೆ, ಅದ್ಯಾವುದರ ಅರಿವೇ ಇಲ್ಲದೆ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸೈಲೆಂಟ್ ಆಗಿ ಬಂದು, ಈಗ ಕಪ್ ಗೆದ್ದು ಎಲ್ಲರ ಹುಬ್ಬೇರಿಸಿದ್ದಾರೆ ಹಾವೇರಿಯ ಹಮ್ಮೀರ ಹನುಮಂತ ಲಮಾಣಿ.ಅಪ್ಪಟ ಹಳ್ಳಿಗಾಡಿನ ಹುಡುಗ ಈ ಹನುಮಂತು. ವಿದ್ಯೆ ಅಷ್ಟಕಷ್ಟೇ. ವಿದ್ಯೆ ಕಡಿಮೆ ಇದ್ದರೂ ಕುರಿಕಾಯುತ್ತ, ಅದೇ ಕುರಿಗಳ ನಡುವೆ ಬಂಜಾರ ಸಮುದಾಯದ ಹಾಡು, ಭಜನೆ ಪದಗಳನ್ನು ಹಾಡುತ್ತ, ಸಂಗೀತದಲ್ಲಿ ಮುಂದುವರಿದು ಗುರುತಿಸಿಕೊಂಡ. ಕರ್ನಾಟಕದ ಜನತೆಗೆ ಹನುಮಂತ ಲಮಾಣಿಯ ಪರಿಚಯವಾಗಿದ್ದೇ ಅವರ ಗಾಯನದಿಂದ.
2019ರ ಸರಿಗಮಪ ಸೀಸನ್ 15 ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹನುಮಂತನ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದ ಶುರುವಾದ ಅವರ ಯಶಸ್ಸಿನ ಪಯಣ ಇದೀಗ ಕರ್ನಾಟಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆಲ್ಲುವ ಹಂತಕ್ಕೆ ಬಂದು ನಿಂತಿದೆ.ಸಂಗೀತ ಕಲಿತು ಬಂದ ಸ್ಪರ್ಧಿಗಳಿಗೆ ಸೆಡ್ಡು ಹೊಡೆದು, ಫಿನಾಲೆ ತಲುಪಿದರು.
ಅಚ್ಚರಿಯ ರೀತಿಯಲ್ಲಿ ಮೊದಲ ರನ್ನರ್ ಆಗಿ ಹನುಮಂತ ಹೊರಹೊಮ್ಮಿದರು. ಅಲ್ಲಿಗೆ ಹನುಮಂತನ ಲಕ್ ಬದಲಾಯಿತು. ಸುಮ್ಮನಾಗಲಿಲ್ಲ. ಗಾಯನ ಅಷ್ಟೇ ಅಲ್ಲ ಡಾನ್ಸ್‌ನಲ್ಲೂ ನಾನು ಮುಂದಿದ್ದೇನೆ ಎಂದು ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿಯೂ ಸೈ ಎನಿಸಿಕೊಂಡರು. ನೃತ್ಯ ಬಾರದಿದ್ದರೂ, ನುರಿತ ಘಟಾನುಘಟಿ ಡಾನ್ಸರ್ ಜತೆ ಸೆಣಸಿ ಸೆಮಿಫಿನಾಲೆ ವೇದಿಕೆ ತಲುಪಿ ಭೇಷ್ ಎನಿಸಿಕೊಂಡರು. ಆದರೆ ಇವರನ್ನು ಕಂಡರೆ ಆಗದವರು ಇವರು ಬಡತನ, ಮುಗ್ಧ ರೂಪ ತೋರಲು ನಾಟಕ ಮಾಡಿದ್ದಾರೆ ಎಂದು ಕೂಡ ಆಡಿಕೊಳ್ಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.