ಪತ್ನಿ ಇದ್ದರೂ ಪರಸ್ತ್ರೀಗೆ ಆಸೆ ಪಟ್ಟ ಯುವಕ, ಆಂ ಟಿಯ ಸೌಂದರ್ಯಕ್ಕೆ ಪತ್ನಿಯ ಪ್ರೀತಿ ಕಾಣಲೇ ಇಲ್ಲ

 | 
Jd
ಪವಿತ್ರ ಹಬ್ಬ ಹರಿದಿನಗಳಂದು ಪತ್ನಿಯಾದವಳು ಪತಿಯ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು ವಾಡಿಕೆ. ಆದರೆ ಪತ್ನಿಯೇ ತನ್ನ ಪತಿಯ ಕಾಲು ಮುರಿಯಲು ಸುಪಾರಿ ನೀಡಿ ಜೈಲುಪಾಲಾದ ಘಟನೆ ನಗರದಲ್ಲಿ ನಡೆದಿದೆ.ಪತ್ನಿಯಿಂದ ಸುಪಾರಿ ಪಡೆದ ಮೂವರು ದುಷ್ಕರ್ಮಿಗಳು ಅವಳ ಪತಿಯ ಎರಡೂ ಕಾಲುಗಳನ್ನು ಮುರಿದು ಹಾಕಿದ್ದಾರೆ. 
ಕೈಕಾಲು ಮುರಿದಿದ್ದರಿಂದ ನಡೆಯಲು ಆಗದೇ ಆಸ್ಪತ್ರೆಯಲ್ಲಿ ಪತಿ ಚಿಕಿತ್ಸೆ ಪಡೆಯುತ್ತಿದ್ದರೆ, ಪತ್ನಿ ಮತ್ತು ಕೃತ್ಯಗೈದ ಆರೋಪಿಗಳು ಜೈಲು ಪಾಲಾಗಿದ್ದಾರೆ.ಕಲಬುರಗಿ ನಗರದ ಅತ್ತರ್‌ ಕಾಂಪೌಂಡ್‌ ಏರಿಯಾದ 62 ವರ್ಷದ ವೆಂಕಟೇಶ ಮಾಲಿ ಪಾಟೀಲ್‌ ಕಾಲು ಮುರಿದುಕೊಂಡ ಪತಿ. ಉಷಾ ಪಾಟೀಲ್‌ ಜೈಲು ಪಾಲಾದ ಪತ್ನಿ. ಸುಪಾರಿ ಪಡೆದು ಹಲ್ಲೆ ನಡೆಸಿ ಕಾಲು ಮುರಿದ ಆರೋಪಿಗಳಾದ ಮನೋಹರ, ಸುನೀಲ್‌, ಆರೀಫ್‌ ಸಹ ಕಂಬಿ ಎಣಿಸುತ್ತಿದ್ದಾರೆ.
ವೆಂಕಟೇಶ್‌ ಅವರ ಪುತ್ರ ನೀಡಿದ ದೂರಿನ ಅನ್ವಯ, ಇದನ್ನು ದರೋಡೆ ಪ್ರಕರಣವೆಂದು ಪೊಲೀಸರು ದಾಖಲಿಸಿ ಕೊಂಡು ತನಿಖೆ ಚುರುಕುಗೊಳಿಸಿದರು. ಘಟನೆ ನಡೆದ ಸ್ಥಳವಾದ ಕಲಬುರಗಿಯ ವಿಠಲ ನಗರದ ಸುತ್ತ ಮುತ್ತಲಿನ ಸಿಸಿಟಿವಿ ದೃಶ್ಯಾವಳಿ ನೋಡಿ ದರೋಡೆ ಕೋರರನ್ನು ಪತ್ತೆ ಹಚ್ಚಲಾಯಿತು. ಪತಿಯ ಕೈ ಕಾಲು ಮುರಿಯುವಂತೆ ಪತ್ನಿಯೇ ಸುಪಾರಿ ನೀಡಿದ್ದಳು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಇದನ್ನು ಕೇಳಿ ಪೊಲೀಸರೂ ಚಕಿತರಾಗಿದ್ದಾರೆ. 
ಆರೋಪಿಗಳ ಹೇಳಿಕೆ ಆಧರಿಸಿ ವೆಂಕಟೇಶ್‌ ಪತ್ನಿ ಉಷಾಗೆ ಠಾಣೆಗೆ ಕರೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.ಮನೆ ಕೆಲಸದವಳೊಂದಿಗೆ ತನ್ನ ಪತಿ ಸಲುಗೆಯಿಂದ ಇದ್ದ. ಇದು ಸರಿ ಕಾಣಲಿಲ್ಲ. ಹೀಗಾಗಿ ಸುಮ್ಮನೆ ಮನೆಯಲ್ಲೇ ಕೈ ಕಾಲು ಮುರಿದುಕೊಂಡು ಬೀಳಬೇಕು ಎನ್ನುವ ಕಾರಣಕ್ಕೆ ಹುಡುಗರಿಗೆ ಹಣ ಕೊಟ್ಟು ಕಾಲುಗಳನ್ನು ಮುರಿಸಿರುವುದಾಗಿ ಉಷಾ ಬಾಯಿ ಬಿಟ್ಟಿದ್ದಾಳೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.