ಗಜಕೇಸರಿ ಯೋಗ ಇದೆ; ನಾನೇ ಮುಂದಿನ ಪ್ರಧಾನ ಮಂತ್ರಿ ಎಂದಿದ್ದ ಮಹಿಳೆ' ಕಿಲಕಿಲ ನಕ್ಕ ರಂಗಣ್ಣ

 | 
Us

ಬಾಗಲಕೋಟೆ ಲೋಕಸಭಾ ಚುಣಾವಣೆಯಲ್ಲಿ 2024 ಫಲಿತಾಂಶ ಅಂತಿಮವಾಗಿದ್ದು, ಬಿಜೆಪಿಗೆ ಇಲ್ಲಿ ಭರ್ಜರಿ ಗೆಲುವಾಗಿದೆ. ತಮಗೆ ಗಜಕೇಸರಿ ಯೋಗ ಇದೆ, ನಾನು ಪ್ರಧಾನಿ ಆದರೂ ಆಗಬಹುದು ಎಂದಿದ್ದ ಕಾಂಗ್ರೆಸ್‌ನ ಗಜಕೇಸರಿ ಯೋಗ ಇರುವ ಅಭ್ಯರ್ಥಿಗೆ ಸೋಲಾಗಿದೆ. ಹೌದು 2029 ಕ್ಕೆ ನಾ ಪ್ರಧಾನಿ ಆಗಬಹುದು ಎಂದ ಅಭ್ಯರ್ಥಿ ಈದೀಗ ಟ್ರೊಲ್ ಆಗ್ತಿದ್ದಾರೆ.

ಸಂಯುಕ್ತ ಪಾಟೀಲ್ ಅವರಿಗೆ ಟಿಕೆಟ್ ನೀಡುವ ಮೊದಲು ಕಾಂಗ್ರೆಸ್‌ನಿಂದ ವೀಣಾ ಕಾಶಪ್ಪನವರ್ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಬಿಟ್ಟು ಸಂಯುಕ್ತಾಗೆ ನೀಡದ್ದೆ ಮುಳುವಾಯಿತಾ ಎಂಬ ಅನುಮಾನ ಕಾಡುತ್ತಿದೆ. ಅಲ್ಲದೇ ಸಂಯುಕ್ತಾ ಪಾಟೀಲ್ ಅವರು ತಮಗೆ ಗಜಕೇಸರಿ ಯೋಗ ಇದ್ದು, ತಾವು ಪ್ರಧಾನಿ ಬೇಕಾದರೂ ಆಗಬಹುದು ಎಂದು ಮಾಧ್ಯಮಗಳ ಎದುರು ಹೇಳಿಕೆ ಕೊಟ್ಟಿದ್ದರು. 

ನಾನು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದವಳು. ಬಾಗಲಕೋಟೆಯಲ್ಲಿರುವ ಎಲ್ಲ ಕಾರ್ಯಕರ್ತರು ನಮ್ಮವರು. ಇತ್ತೀಚೆಗೆ ಜಿಟಿ ಪಾಟೀಲ್​ ಸಾಹೇಬರ ಮನೆಯಲ್ಲಿ ಸಭೆ ನಡೆಸಿದೆವು. ಈ ವೇಳೆ ಪಾಟೀಲರು ನನ್ನನ್ನು ದತ್ತು ಪುತ್ರಿ ಎಂದು ಸಂಭೋಧಿಸಿದರು. ಅವರ ಹೇಳಿಕೆಯಿಂದ ನಾನು ಬೀಳಗಿ ತಾಲೂಕಿನ ಮಗಳಾಗಿದ್ದೇನೆ. ಆರ್​ಬಿ ತಿಮ್ಮಾಪೂರ್​ ನನ್ನನ್ನು ಸಹೋದರಿ ಅಂದರು. ಅವರ ಹೇಳಿಕೆಯಿಂದ ನಾನು ಮುಧೋಳದ ಸಹೋದರಿ ಆದೆ. ಆನಂದ್​ ನ್ಯಾಮಗೌಡ ನನಗೆ ಆಪ್ತರು, ಎಸ್​ಆರ್​ ಪಾಟೀಲ್​, ಎಚ್‌ವೈ ಮೇಟಿ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಪಕ್ಷದ ಎಲ್ಲ ಮುಖಂಡರ ಮನೆ ಸದಸ್ಯೆ ಆಗಿದ್ದೇನೆ. 

ವಿಜಯಪುರದಿಂದ ಬಂದಿರಹುದು. ಆದರೆ, ಬಾಗಲಕೋಟೆಯೇ ನನ್ನ ಮನೆ. ಎಂದೆಲ್ಲಾ  ಹೇಳಿಕೆ ನೀಡಿ ಟ್ರೊಲ್ ಮಾಡುವವರಿಗೆ ಹೊಸ ಕಂಟೆಂಟ್ ನೀಡಿದ್ದರು. ಅಷ್ಟೇ ಅಲ್ಲ ಇದು ಬಿಜೆಪಿ ನಾಯಕರಿಂದ ತೀವ್ರ ಟೀಕೆಗೆ, ಅಪಹಾಸ್ಯಕ್ಕೆ ಗುರಿಯಾಗಿತ್ತು. ಅಂತೂ ಇಂತೂ ಕ್ಷೇತ್ರದಲ್ಲಿ ಕಮಲ ಮತ್ತೆ ಅರಳಿದೆ, ಆಡಳಿತ ಪಕ್ಷ ಕಾಂಗ್ರೆಸ್‌ಗೆ ಆಘಾತ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾ‌ಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.