ದ ರ್ಶನ್ ಮೇಲೆ ಯಾವುದೇ ದ್ವೇಷ ಇಲ್ಲ; ರೇಣುಕಾಸ್ವಾಮಿ ತಂದೆ ಮೆಚ್ಚುಗೆಯ ಮಾತು
Jul 26, 2024, 08:20 IST
|
ನಟ ದರ್ಶನ್ ಕುರಿತು ಮೃತ ರೇಣುಕಾಸ್ವಾಮಿ ತಂದೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಟ ದರ್ಶನ್ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡುವ ಕುರಿತು, ಕ್ಷಮೆ ಕೇಳುವ ಕುರಿತು ಅವರ ಹೇಳಿಕೆ ಅಚ್ಚರಿ ಹುಟ್ಟಿಸುವಂತಿದೆ. ದರ್ಶನ್ ನಮ್ಮ ಮನೆಗೆ ಬಂದರೂ ನಾವು ದ್ವೇಷ ಮಾಡಲ್ಲ. ನಾವು ಯಾರ ಬಗ್ಗೆಯೂ ಕಾಮೆಂಟ್ ಮಾಡಲ್ಲ, ಎಲ್ಲರ ಬಗ್ಗೆ ಒಳ್ಳೆಯ ಭಾವನೆ ಇದೆ.
ಕಾನೂನು ಪ್ರಕಾರ ಏನು ನಡೆಯುತ್ತದೆಯೋ ಅದು ನಡೆಯಲಿ. ದರ್ಶನ ಮನೆಗೆ ಬರುವ ವಿಚಾರ ಗೊತ್ತಿಲ್ಲ, ಅಂತೆ ಕಂಥೆ ಎಲ್ಲಾ ಬೇಡ ಎಂದು ಅವರು ತಿಳಿಸಿದ್ದಾರೆ. ನಾವು ಜಂಗಮರು, ಯಾರನ್ನೂ ನಾವು ದ್ವೇಷ ಮಾಡಲ್ಲ, ಅಸೂಯೆ ಪಡುವವರಲ್ಲ. ದರ್ಶನ್ ನಮ್ಮ ಮನೆಗೆ ಬರುವುದಾದರೆ ಬರಲಿ, ಯಾರನ್ನೂ ಬೇಡ ಅನ್ನುವುದಿಲ್ಲ ಎಂದು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ತಂದೆ ಶಿವನಗೌಡರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಯಾರ ಜೊತೆಯೂ ಶತೃತ್ವ ಬಯಸಲ್ಲ, ಒಳ್ಳೆಯ ರೀತಿಯಲ್ಲಿ ಗೌರವಿಸುತ್ತೇವೆ. ದರ್ಶನ್ ನಮ್ಮ ಮನೆಗೆ ಬಂದ್ರು ಕೂಡಾ ಬನ್ನಿ ಊಟ ಮಾಡಿ, ಕೂತುಕೊಳ್ಳಿ ಎನ್ನುತ್ತೇವೆ. ಮನೆಗೆ ಬಂದಾಗ ಮುಂದೆ ನೋಡೋಣಾ ಬಿಡಿ ಸಾರ್ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ನಾವು ಎಲ್ಲರಿಗೂ ಗೌರವ ಕೊಡುತ್ತೇವೆ, ಪ್ರೀತಿ ವಿಶ್ವಾಸದಿಂದ ಇರುತ್ತೇವೆ. ನಮಗೆ ಆಗಿರುವ ಅನ್ಯಾಯಕ್ಕೆ ಕಾನೂನು ಏನೂ ನಡೆಯುತ್ತದೆ ನಡೆಯಲಿ.
ಯಾರೇ ನಮ್ಮ ಮನೆಗ ಬಂದರೂ ಬರಲಿ, ನಮ್ಮ ಅಭ್ಯಂತರ ಇಲ್ಲ. ಮನೆ ಬಾಗಿಲಿಗೆ ದರ್ಶನ್ ಬಂದರೆ ಬನ್ನಿ ಎಂದು ಕರೆಯುತ್ತೇವೆ. ಆ ಪ್ರಸಂಗ ಬಂದಾಗ ನಾವು ಮಾತನಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.ದರ್ಶನ್ ನಮಗೆ ಆರ್ಥಿಕ ಸಹಾಯ ಮಾಡ್ತಾರಂತೆ ಎಂಬ ಅಂತೆ ಕಂತೆಗಳ ವಿಚಾರ ಬೇಡ, ಅಂದಿನ ಪರಿಸ್ಥಿತಿ ನೋಡೋಣ ಬಿಡಿ. ದರ್ಶನ್ ಪತ್ನಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ವಿಚಾರದ ಕುರಿತು ಸಹ ಮಾತನಾಡಿದ ಅವರು ದರ್ಶನ್ ಪತ್ನಿಯುಂಟು, ಮಂತ್ರಿಯುಂಟು ನಮಗ್ಯಾಕೆ ಆ ವಿಚಾರ? ಎಂದು ಪ್ರಶ್ನಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.