ಸ್ಪಂದನಾ ಅಂತಗ ಫಿಗರ್ ಬಿಗ್ ಬಾಸ್ ನಲ್ಲಿ ಯಾರು ಇಲ್ಲ, ಆಕೆಯ ಮೇಲೆ ನನಿಗೆ ಪ್ರೀತಿ ಹುಟ್ಟಿದ್ದು ನಿಜ ಎಂದ ಅಮಿತ್
ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗುತ್ತಿದ್ದಂತೆಯೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಆದರೆ ಈ ಬಾರಿ ಮೊದಲ ವಾರದಲ್ಲೇ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಡಬಲ್ ಎಲಿಮಿನೇಷನ್ ನಡೆದಿದೆ. ಆರ್‌ಜೆ ಅಮಿತ್ ಮತ್ತು ಬಾಡಿಬಿಲ್ಡರ್ ಕರಿಬಸಪ್ಪ ಮನೆಯಿಂದ ಹೊರಹೋಗಿದ್ದಾರೆ.
ಈ ವಾರ ಮನೆಯಿಂದ ಹೊರಹೋಗಲು ಒಟ್ಟು ಎಂಟು ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು — ಧನುಷ್, ಮಲ್ಲಮ್ಮ, ಆರ್‌ಜೆ ಅಮಿತ್, ಕರಿಬಸಪ್ಪ, ಕಾವ್ಯಾ ಶೈವ, ಗಿಲ್ಲಿ ನಟ, ಅಶ್ವಿನಿ ಮತ್ತು ಅಭಿಷೇಕ್. ಶನಿವಾರದ ಎಪಿಸೋಡ್‌ನಲ್ಲಿ ಮಲ್ಲಮ್ಮ ಸೇವ್ ಆಗಿದ್ದರೆ, ಭಾನುವಾರ ಕಿಚ್ಚ ಸುದೀಪ್ ಅವರು ಉಳಿದ ಸ್ಪರ್ಧಿಗಳಲ್ಲಿ ಇಬ್ಬರನ್ನು ಎಲಿಮಿನೇಟ್ ಮಾಡುವ ಘೋಷಣೆ ಮಾಡಿದರು. ಆರ್‌ಜೆ ಅಮಿತ್ ಹಾಗೂ ಕರಿಬಸಪ್ಪ ಬಿಗ್ ಬಾಸ್ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿಗಳಾದರು.
ಆರ್‌ಜೆ ಅಮಿತ್ ಅವರು ಶೋಗೆ ಎಂಟ್ರಿಯಾಗುವ ಮೊದಲು “ಬಿಗ್ ಬಾಸ್ ಒಂದು ಕ್ರಿಂಜ್ ಶೋ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಾಗಿ ಸುದೀಪ್ ಅವರಿಂದಲೇ ಕೌಂಟರ್ ದೊರಕಿತ್ತು. ಮನೆ ಒಳಗೆ ಅವರ ನಡವಳಿಕೆಯಲ್ಲಿ ಯಾವುದೇ ವಿಶೇಷತೆ ಕಾಣಿಸಲಿಲ್ಲ. ಮತ್ತೊಂದೆಡೆ ಕರಿಬಸಪ್ಪ ತಮ್ಮ ತತ್ತ್ವಭರಿತ ಮಾತುಗಳಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದರೂ, ಹೆಚ್ಚು ಸ್ಕ್ರೀನ್‌ಟೈಮ್ ಪಡೆಯಲಿಲ್ಲ. ಅವರಿಗೆ ಸ್ಪಂದನಾ ಸೋಮಣ್ಣ ಅವರ ಮೇಲೆ ಲೈಟ್ ಆಗಿ ಕೃಷ್ ಆದಂತಿತ್ತು.
ಆದ್ದರಿಂದ ಪ್ರೇಕ್ಷಕರ ಮತಗಳಲ್ಲಿ ಇವರಿಬ್ಬರಿಗೂ ಕಡಿಮೆ ಬೆಂಬಲ ದೊರೆಯಿತು. ಇದೇ ಕಾರಣಕ್ಕೆ ಮೊದಲ ವಾರದಲ್ಲೇ ಇವರ ಎಲಿಮಿನೇಷನ್ ನಡೆದಿದೆ. ಇನ್ನು ಮೊದಲ ದಿನವೇ ಹೊರಹೋಗಿದ್ದರು ಎನ್ನಲಾದ ರಕ್ಷಿತಾ ಶೆಟ್ಟಿ, ಮನೆಯೊಳಗೆ ಪುನಃ ಎಂಟ್ರಿ ಕೊಟ್ಟು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ.ಬಿಗ್ ಬಾಸ್ 12 ಮೊದಲ ವಾರದಲ್ಲೇ ನಡೆದ ಈ ಡಬಲ್ ಎಲಿಮಿನೇಷನ್, ಮುಂದಿನ ಎಪಿಸೋಡ್‌ಗಳಲ್ಲಿ ಇನ್ನಷ್ಟು ಸಂಚಲನಕಾರಿ ಕ್ಷಣಗಳನ್ನು ನೀಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಪ್ರೇಕ್ಷಕರು ಈಗ ಯಾವ ಸ್ಪರ್ಧಿ ಮುಂದೆ ಮನೆಗೆ ಸೇರಿದವರು ಎಂದು ಕಾತರದಿಂದ ಕಾಯುತ್ತಿದ್ದಾರೆ.