ನಿಶ್ಚಿತಾರ್ಥ ಮದುವೆ ಏನೂ ಇಲ್ಲ! ಡೈರೆಕ್ಟ್ ಮಗುನೇ ತೋರಿಸಿದ ತೆಲುಗು ನ ಟಿ

 | 
Sh

ಬಹುಭಾಷಾ ನಟಿ, ಮಲ್ಲು ಸುಂದರಿ ನಿವೇತಾ ಥಾಮಸ್‌ ವೇದಿಕೆಯ ಮೇಲೆ ಏಕಾಏಕಿ ತಮ್ಮ ಗಂಡ ಮತ್ತು ಇಬ್ಬರು ಮಕ್ಕಳನ್ನು ಪರಿಚಯಿಸಿದ್ದಾರೆ. ಇದರಿಂದಾಗಿ ಆಕೆಯ ಅಭಿಮಾನಿಗಳು ಶಾಕ್‌ನಲ್ಲಿದ್ದಾರೆ. ಹಾಗಾದರೆ ನಿವೇತಾ ಮದುವೆ ಯಾವಾಗ ಆಯ್ತು, ಗಂಡ ಯಾರು, ಮಕ್ಕಳು ಈಗ ಬೆಳಕಿಗೆ ಬಂದಿದ್ದಾರೆ.

ನಿವೇತಾ ಥಾಮಸ್ ಬಾಲ ಕಲಾವಿದೆಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 2011 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ 'ಚೆಪ್ಪಾ ಕುರಿಶ್' ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಜಂಟಲ್‌ಮ್ಯಾನ್ ಸಿನಿಮಾದ ಮೂಲಕ ಟಾಲಿವುಡ್‌ಗೆ ಪ್ರವೇಶ ಮಾಡಿದರು. ನಾನಿ ದ್ವಿಪಾತ್ರದಲ್ಲಿ ನಟಿಸಿದ ಈ ಸಿನಿಮಾ ಹಿಟ್‌ ಆಗಿದೆ.

ಎರಡನೇ ಬಾರಿಗೆ ನಾನಿ ಜೊತೆ ನಿನ್ನು ಕೋರಿ ಸಿನಿಮಾದಲ್ಲಿ ನಟಿಸಿದ ನಂತರ ನಿವೇತಾಗೆ ತೆಲುಗಿನಲ್ಲಿ ಆಫರ್‌ಗಳು ಸಾಲುಗಟ್ಟಿ ನಿಂತವು. ಅದೇ ಸಮಯದಲ್ಲಿ, ಎನ್ಟಿಆರ್ ಚಿತ್ರದಲ್ಲಿ ನಟಿಸಲು ಈ ಸುಂದರಿ ಅವಕಾಶ ಪಡೆದರು. ಬಾಬಿ ನಿರ್ದೇಶನದ ಜೈ ಲವಕುಶ ಚಿತ್ರದಲ್ಲಿ ನಿವೇತಾ ಥಾಮಸ್ ಎರಡನೇ ನಾಯಕಿಯಾಗಿ ಕಾಣಿಸಿಕೊಂಡು, ಸತತ ಮೂರು ಹಿಟ್‌ ಸಿನಿಮಾಗಳನ್ನು ನೀಡಿದರು.  

ಪವನ್‌ ಕಲ್ಯಾಣ್‌ ನಟನೆಯ ವಕೀಲ್ ಸಾಬ್ ಸೇರಿದಂತೆ ಸಾಕಷ್ಟು ಹಿಟ್‌ ಸಿನಿಮಾದಲ್ಲಿ ನಟಿಸಿದರೂ ಸಹ ನಿವೇತಾಗೆ ಸ್ಟಾರ್ ಪಟ್ಟ ಸಿಗಲಿಲ್ಲ. ಅಲ್ಲದೆ, ಇತ್ತೀಚೆಗೆ ನಟಿಗೆ ಸಿನಿಮಾ ಆಫರ್‌ಗಳು ಕಡಿಮೆಯಾಗಿವೆ. ಸಧ್ಯ ನನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳುವ ಮೂಲಕ ನಿವೇತಾ ಥಾಮಸ್ ಶಾಕ್ ನೀಡಿದ್ದಾರೆ. ನಿಜವಾಗಲೂ ನಟಿ ಮದುವೆಯಾಗಿದ್ದಾಳಾ? ಅಂತ ಅವರ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. 

ಆದರೆ ನಿವೇದಾ ಮದುವೆಯಾಗಿದ್ದು ನಿಜ ಜೀವನದಲ್ಲಿ ಅಲ್ಲ ಸಿನಿಮಾದಲ್ಲಿ. 35-ಚಿನ್ನ ಕಥಾ ಕಾದು ಎನ್ನುವ ಸಿನಿಮಾದ ಮೂಲಕ ನಿವೇತಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ನಿವೇದಾ.ನನಗೆ ಮದುವೆಯಾಗಿದೆ.ಇವರು ನನ್ನ ಗಂಡ ಮತ್ತು ಇವರೇ ನನ್ನ ಇಬ್ಬರು ಮಕ್ಕಳು ಎಂದು ವೇದಿಕೆಯಲ್ಲಿದ್ದ ಜನರಿಗೆ ತೋರಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.