ಅವರೆಲ್ಲಾ ನನ್ನ ಜೊತೆ ಇದ್ದಿದ್ದಕ್ಕೆ ಇವತ್ತು ದೊಡ್ಡ ಸ್ಟಾರ್ ಆಗಿದ್ದಾರೆ; ವಿಜಯ್ ಮಲ್ಯ

 | 
Ha
ಆರ್​ಸಿಬಿ ಐಪಿಎಲ್ ಕಪ್ ಗೆದ್ದ ನಂತರ ಉದ್ಯಮಿ ವಿಜಯ್ ಮಲ್ಯ ಅವರ ರೀಸೆಂಟ್ ಸಂದರ್ಶನವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅವರು ಬ್ಯುಸಿನೆಸ್ ಸೇರಿದಂತೆ ಹಲವಾರು ಸಂಗತಿಗಳ ಬಗ್ಗೆ ಕೊಟ್ಟ ಕಮೆಂಟ್ಸ್ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಅವರು ಬಾಲಿವುಡ್ ನಟಿಯರ ಬಗ್ಗೆಯೂ ಮಾತನಾಡಿದರು. ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್ ಓವರ್​ನೈಟ್ ಸ್ಟಾರ್ ಆಗಿದ್ದರ ಬಗ್ಗೆ ವಿಜಯ್ ಮಲ್ಯ ಹೇಳಿದ ಮಾತುಗಳು ಸದ್ಯ ವೈರಲ್ ಆಗಿವೆ.
ವಿಜಯ್ ಮಲ್ಯ ಅವರು ಹಲವಾರು ಉದ್ಯಮಗಳನ್ನು ಮಾಡಿದ್ದಾರೆ. ಬ್ಯುಸಿನೆಸ್ ಲೋಕದಲ್ಲಿ ಹೊಸ ಪ್ರಯತ್ನಗಳನ್ನು ಮಾಡಿ ಒಂದು ಕೈ ನೋಡಿದ್ದಾರೆ. ಅವರ ಹಲವಾರು ಹೂಡಿಕೆಗಳಲ್ಲಿ ಕಿಂಗ್ ಫಿಶರ್ ಏರ್ಲೈನ್ಸ್ ಕೂಡಾ ಒಂದು. 2000ದಲ್ಲಿ ಕಿಂಗ್ ಫಿಶರ್ ಏರ್​ಲೈನ್ಸ್ ಅತ್ಯಂತ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ ಕಿಂಗ್​ಫಿಶರ್ ಕ್ಯಾಲೆಂಡರ್ ಲಾಂಚ್ ಮಾಡಿತ್ತು. ಅದು ಬೋಲ್ಡ್ ಸ್ವಿಮ್ ಸೂಟ್ ಕ್ಯಾಲೆಂಡರ್ ಆಗಿದ್ದು, 2003ರಲ್ಲಿ ಲಾಂಚ್ ಆಗಿತ್ತು. ಅತುಲ್ ಕಸ್ಬೆಕರ್ ಫೋಟೋಗ್ರಫಿ ಮಾಡಿದ್ದರು.
ಖ್ಯಾತ ಯೂಟ್ಯೂಬರ್ ರಾಜ್ ಶಮನಿ ಜೊತೆಗೆ ಇತ್ತೀಚೆಗೆ ಮಾತನಾಡಿದ ವಿಜಯ್ ಮಲ್ಯ ಅವರು ಹಲವಾರು ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ದೀಪಿಕಾ ಪಡುಕೋಣೆಯಿಂದ ಕತ್ರೀನಾ ಕೈಫ್ ತನಕ ಹೇಗೆ ಎಲ್ಲಾ ನಟಿಯರೂ ತಮ್ಮ ಕ್ಯಾಲೆಂಡರ್ ಭಾಗವಾಗಿದ್ದರು ಎನ್ನುವುದರ ಬಗ್ಗೆಯೂ ಮಾತನಾಡಿದ್ದಾರೆ. ಅವರು ಹೇಗೆ ರಾತ್ರೋ ರಾತ್ರಿ ಸ್ಟಾರ್ಸ್ ಆದರು ಎನ್ನುವುದನ್ನು ಕೂಡಾ ರಿವೀಲ್ ಮಾಡಿದ್ದಾರೆ.
ವಿಜಯ್ ಮಲ್ಯ ಅವರು ಇತ್ತೀಚೆಗೆ ರಾಜ್ ಶಮನಿ ಜೊತೆ ಪಾಡ್​ಕಾಸ್ಟ್​​ನಲ್ಲಿ ಫೇಮಸ್ ಕಿಂಗ್​ಫಿಶರ್ ಕ್ಯಾಲೆಂಡರ್ ಬಗ್ಗೆ ಮಾತನಾಡಿದರು. ನಾವು ಸರಿಯಾದ ಯುವತಿಯರನ್ನು ಆಯ್ಕೆ ಮಾಡುತ್ತಿದ್ದೆವು. ಅದು ದೀಪಿಕಾ ಪಡುಕೋನೆ ಆಗಿರಲಿ, ಅಥವಾ ಕತ್ರೀನಾ ಕೈಫ್ ಆಗಿರಲಿ. ನಾವು ನಮ್ಮ ಕ್ಯಾಲೆಂಡರ್​ನಲ್ಲಿ ಎಲ್ಲಾ ನಟಿಯರ ಫೋಟೋಗಳನ್ನು ಹಾಕಿದ್ದೆವು. ಅದೂ ಯಂಗ್ ಏಜ್​​ನಲ್ಲಿ. ನಾವು ಸರಿಯಾದ ಪ್ರತಿಭೆಯನ್ನು ಆಯ್ಕೆ ಮಾಡುತ್ತಿದ್ದೆವು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.