ತುಂಬಾ ಕೆಟ್ಟದಾಗಿ ಫೋಟೋ Edit ಮಾಡಿ ನನಗೇನೆ Send ಮಾಡ್ತಾರೆ, ನೋದಿದ್ರೆ ಅಸಹ್ಯ ಆಗುತ್ತೆ ಎಂದ ರಚ್ಚು

 | 
ರಚ್ಚು

ಕನ್ನಡದ ಜನಪ್ರಿಯ ನಟಿ ರಚಿತಾ ರಾಮ್ ಅವರ ಹೆಸರು ಬಳಸಿ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಎಡಿಟ್ ಮಾಡಿ ಹರಿಬಿಟ್ಟಿರುವ ಪ್ರಕರಣ ಇದೀಗ ದೊಡ್ಡ ಚರ್ಚೆಯ ವಿಷಯವಾಗಿದೆ. ಈ ಕುರಿತಂತೆ ನಟಿಯು ಕಠಿಣ ಎಚ್ಚರಿಕೆ ನೀಡಿದ್ದು, ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ತಮ್ಮ ಗೌರವಕ್ಕೆ ಧಕ್ಕೆ ತರುವ ಈ ಕೃತ್ಯದಿಂದ ರಚಿತಾ ರಾಮ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಹೆಸರಿನಲ್ಲಿ ಸುಳ್ಳು ಚಿತ್ರಗಳು ಹಾಗೂ ವಿಡಿಯೋಗಳು ಸೃಷ್ಟಿಸಿ ಹಂಚುವವರು ಕಠಿಣ ಕಾನೂನು ಕ್ರಮಕ್ಕೆ ಸಿಲುಕಬೇಕಾಗುತ್ತದೆ. ಇದು ಕೇವಲ ನನ್ನ ವಿರುದ್ಧವಲ್ಲ, ಮಹಿಳೆಯರ ಗೌರವದ ವಿರುದ್ಧದ ಅಪರಾಧ” ಎಂದು ಅವರು ಎಚ್ಚರಿಸಿದ್ದಾರೆ.

ಈಗಾಗಲೇ ಸೈಬರ್ ಕ್ರೈಂ ಅಧಿಕಾರಿಗಳೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರಾದರೂ ಈ ರೀತಿಯ ನಕಲಿ ಕಂಟೆಂಟ್ ಹಂಚಿದರೆ ಅಥವಾ ಕಾಮೆಂಟ್ ಮಾಡಿದರೆ ಅವರಿಗೂ ಕಾನೂನು ಕ್ರಮ ತಪ್ಪದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿನಿಮಾ ಕ್ಷೇತ್ರದ ಅನೇಕ ಕಲಾವಿದರು ರಚಿತಾ ರಾಮ್ ಅವರ ಬೆಂಬಲಕ್ಕೆ ಧ್ವನಿ ಎತ್ತಿದ್ದಾರೆ. ಇದು ಕೇವಲ ರಚಿತಾ ಅವರ ವಿಷಯವಲ್ಲ, ಇಂತಹ ಕೃತ್ಯಗಳು ಸಂಪೂರ್ಣ ಸಮಾಜದ ವಿರುದ್ಧ ಎಂದು ಅವರು ಹೇಳಿದ್ದಾರೆ. ಮಿಮ್ಸ್ ಹಾಗೂ ಟ್ರೊಲ್ ಪೇಜ್ ಗಳ ಅಡ್ಮಿನ್ ಗಳಿಗೆ ಕೂಡ. ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯದನ್ನು ಅವೇರ್ನೆಸ್ ಇರುವ ಕಂಟೆಂಟ್ ಪೋಸ್ಟ್ ಮಾಡಿ ಅದರ ಹೊರತಾಗಿ ಎಡಿಟ್ ಮಾಡಿ ಸ್ತ್ರೀಯರ ಚಿತ್ರವಲ್ಲ ಎಂದಿದ್ದಾರೆ.