ಈ ನಟಿ ಅಂದು ನನಗೆ ರನ್ ಹೊಡೆಯಲು ಬಿಡಲಿಲ್ಲ, ಅಂದಿನ ದಿನ ನೆನೆದು ಯುವರಾಜ್ ಸಿಂಗ್ ಬೇಸರ

 | 
ರಕ

 ಆಗಾಗ ಹಳೆ ಘಟನೆಗಳು ನೆನಪಾಗುವಂತೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯವರಾಜ್ ಸಿಂಗ್ ಅವರು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. 2007-08ರ ಸಾಲಿನ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಬಾಲಿವುಡ್‌ ನಟಿಯೊಂದಿಗೆ ಡೇಟ್‌ ಮಾಡಿದ್ದ ಶಾಕಿಂಗ್‌ ಘಟನೆಯೊಂದನ್ನು ಸಿಕ್ಸರ್‌ ಕಿಂಗ್‌ ಬಹಿರಂಗಪಡಿಸಿದ್ದಾರೆ. ಅಂದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಜೊತೆಯಾಗಿ ಇದ್ದೆವು ಎಂದು ಮಾಜಿ ಆಲ್‌ರೌಂಡರ್‌ ತಿಳಿಸಿದ್ದಾರೆ.

ನನ್ನನ್ನು ಭೇಟಿಯಾಗಲು ಬಾಲಿವುಡ್‌ ನಟಿ ಆಸ್ಟ್ರೇಲಿಯಾಕ್ಕೆ ಬಂದಿದ್ದರು ಮತ್ತು ನನ್ನೊಂದಿಗೆ ಸಮಯ ಕಳೆಯುವ ಅವರು ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಯುವರಾಜ್ ಸಿಂಗ್‌ ಬಹಿರಂಗಪಡಿಸಿದ್ದಾರೆ. ಅವರು ತಂಡದ ಬಸ್‌ನಲ್ಲಿ ಬಂದಿದ್ದರು. ಈ ವೇಳೆ ತಾನು ಕ್ರಿಕೆಟ್‌ ಕಡೆಗೆ ಗಮನ ನೀಡಬೇಕೆಂದು ಆಕೆಗೆ ತಿಳಿಸಿದ್ದೆ ಎಂದು ಮಾಜಿ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ.
ಹೌದು ನಾನು ಆಗ ನಟಿಯೊಬ್ಬರನ್ನು ಡೇಟ್‌ ಮಾಡಿದ್ದೆ, ಆದರೆ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಆ ಸಂದರ್ಭದಲ್ಲಿ ಅವರು ಸ್ಟಾರ್‌ ಆಗಿದ್ದರು ಹಾಗೂ ತುಂಬಾ ಖ್ಯಾತಿಯನ್ನು ಗಳಿಸಿದ್ದರು. ಆಕೆ ಅಂದು ಅಡಿಲೇಡ್‌ನಲ್ಲಿ ಶೂಟಿಂಗ್‌ಗೆ ಬಂದಿದ್ದರು. ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ, ನನ್ನನ್ನು ಭೇಟಿಯಾಗಬೇಡಿ ಹಾಗೂ ಕ್ರಿಕೆಟ್‌ ಕಡೆಗೆ ಗಮನ ನೀಡಬೇಕೆಂದು ಆಕೆಗೆ ತಿಳಿಸಿದ್ದೆ.
 ಅವರು ಬಸ್‌ನಲ್ಲಿ ಕ್ಯಾನ್‌ಬೆರ್ರಾವರೆಗೂ ನನ್ನನ್ನು ಹಿಂಬಾಲಿಸಿದ್ದರು. ಎರಡು ಟೆಸ್ಟ್‌ ಪಂದ್ಯಗಳಲ್ಲಿ ನಾನು ರನ್‌ ಹೊಡೆಯಲು ಸಾಧ್ಯವಾಗಿರಲಿಲ್ಲ. ಅವರು ನನ್ನ ಜೊತೆ ಸಮಯ ಕಳೆಯಬೇಕೆಂದು ಹೇಳಿದ್ದರೆ, ನಾನು ನಿನಗೆ ಇಲ್ಲಿ ಕೆಲಸವೇನು? ಎಂದು ಹೇಳಿದ್ದೆ,ಎಂದು ಪಾಡ್‌ಕಾಸ್ಟ್‌ವೊಂದರಲ್ಲಿ ಯುವರಾಜ್‌ ಸಿಂಗ್‌ ತಿಳಿಸಿದ್ದಾರೆ. ಆದರೆ ಆ ನಟಿಯ ಹೆಸರನ್ನು ಇನ್ನೂ ಗುಟ್ಟಾಗಿ ಇಟ್ಟಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.