ಇಷ್ಟು ಮುದ್ದಾಗಿರುವ ಅನುಶ್ರೀ ಮದುವೆ ಆಗದೆ ಇರೋದಕ್ಕೆ ಈ ಹುಡುಗ ಕಾರಣ;

 | 
Yy

ನಟಿ ಆಂಕರ್‌ ಆಗಿ ಗುರುತಿಸಿಕೊಳ್ಳುತ್ತಿರುವ ಅನುಶ್ರೀ ತಮ್ಮ ಆರಂಭಿಕ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿ ಈ ಮಟ್ಟಕ್ಕೆ ಬೆಳದಿದ್ದಾರೆ.. ಇವರ ನಿರೂಪಣೆ ಇಲ್ಲವಾದರೇ ಆ ಕಾರ್ಯಕ್ರಮವೇ ಅಪೂರ್ಣ ಎನ್ನಿಸುವಷ್ಟರ ಮಟ್ಟಿಗೆ ತಮ್ಮ ಕ್ರೇಜ್‌ ಬೆಳೆಸಿಕೊಂಡಿದ್ದಾರೆ. ಆಂಕರ್‌ ಅನುಶ್ರೀ ಅಚ್ಚ ಕನ್ನಡದಲ್ಲೇ ಚೊಕ್ಕವಾಗಿ ಮಾತನಾಡಿ ಕನ್ನಡಿಗರ ಮನೆಮಗಳಾಗಿದ್ದಾಳೆ.. ಒಂದು ಕಾಲದಲ್ಲಿ ಹಣಕ್ಕಾಗಿ ಪರದಾಡಿದ್ದ ಇವರು ಈಗ ಎಪಿಸೋಡ್‌ ಒಂದಕ್ಕೆ ಒಂದು ಲಕ್ಷದ ವರೆಗೂ ಸಂಭಾವನೆ ಪಡೆಯಿತ್ತಿದ್ದಾರೆ. 

ಚಟಪಟ ಮಾತಿನ ಮಲ್ಲಿ. ನೋಡಲು ಆಕರ್ಷಕವಾಗಿರುವ ನಿರೂಪಕಿ ಅನುಶ್ರೀ  ಯಶಸ್ಸಿನ ವಿಚಾರ ಎಲ್ಲರಿಗೂ ತಿಳಿದೇ ಇದೆ. ಕಡು ಕಷ್ಟದಲ್ಲಿ ಬೆಳೆದ ಈ ಹುಡುಗಿ ಇಂದು ಇನ್ನೊಬ್ಬರಿಗೆ ಸಹಾಯ ಮಾಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಹೌದು, ಸಿಗ್ನಲ್ ನಲ್ಲಿ ಬತ್ತಿ ಮಾರಿ ಜೀವನ ನಡೆಸುವ ಅಜ್ಜಿಯ ಮನೆ ಬಾಡಿಗೆಯನ್ನು ಜೀವನ  ಪರ್ಯಂತ ನೋಡಿಕೊಳ್ಳುವುದಾಗಿ ಮಹಾ ನಟಿ ವೇದಿಕೆಯಲ್ಲಿಯೇ ಅನುಶ್ರೀ ಘೋಷಿಸಿದ್ದಾರೆ.   

ಅನುಶ್ರೀಗೆ ತನ್ನ ತಾಯಿ ಎಂದರೆ ಸರ್ವಸ್ವ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ತಾಯಿಗಾಗಿ ಏನು ಬೇಕಾದರೂ ಮಾಡಲು ಸಿದ್ದ ಎನ್ನುವ ಹೆಮ್ಮೆಯ ಪುತ್ರಿ ಈಕೆ. ತಾಯಿಯಂತೆ ಮುಖ್ಯವಾದ ಮತ್ತೊಬ್ಬ ವ್ಯಕ್ತಿ ಇವರ ಬದುಕಿನಲ್ಲಿದ್ದಾರೆ.ನಾವಿಲ್ಲಿ ಹೇಳುತ್ತಿರುವುದು ಅನುಶ್ರೀ ಸಹೋದರ ಅಭಿಜಿತ್ ಕುರಿತು ಅವರಿಗಾಗಿ ಜೀವನ ಮೀಸಲು ಎಂದಿದ್ದಾರೆ ಅನುಶ್ರೀ.

ಅಭಿಜಿತ್ ಸಹೋದರ ಅನ್ನುವುದಕ್ಕಿಂತ ಹೆಚ್ಚು ಬೆಸ್ಟ್ ಫ್ರೆಂಡ್ ಎನ್ನುವುದನ್ನು ಅನುಶ್ರೀ ಅನೇಕ ಕಾರ್ಯಕ್ರಮಗಳಲ್ಲಿ ಅಭಿಜಿತ್ ಬಗ್ಗೆ ಹೇಳಿಕೊಂಡಿದ್ದಾರೆ.ತನ್ನ ವೃತ್ತಿ ಬದುಕಿನ ಆರಂಭದಲ್ಲಿ ತಾನು ಬೆಂಗಳೂರಿನಲ್ಲಿದ್ದಾಗ ತಾಯಿಯನ್ನು ಕಣ್ಣ ರೆಪ್ಪೆಯಂತೆ ನೋಡಿಕೊಂಡಿದ್ದಾನೆ. ಹಾಗಾಗಿ ತಾನು ತನ್ನ ಕೆಲಸದತ್ತ ಗಮನ ಹರಿಸುವುದು ಸಾಧ್ಯವಾಯಿತು ಎನ್ನುವುದನ್ನು ಕೂಡಾ ಅನುಶ್ರೀಯೇ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.