ಇವನು ವಿಷ ತುಂಬಿರೋ ನಾಗರ ಹಾವು ಸರ್, ವಿನಯ್ ಮೇಲೆ ನಮ್ರತಾ ಕೆಂಡಾಮಂಡಲ

 | 
Bz

 ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​​ ಸೀಸನ್​​ 10 ಅದ್ಭುತವಾಗಿ ಮೂಡಿಬರುತ್ತಿದೆ. ಇದೀಗ 12 ವಾರವನ್ನು ಸಂಪೂರ್ಣವಾಗಿ ಮುಗಿಸಿ 13ನೇ ವಾರಕ್ಕೆ ಬಿಗ್​ಬಾಸ್​​ ಸ್ಪರ್ಧಿಗಳು ಎಂಟ್ರಿ ಕೊಡುತ್ತಿದ್ದಾರೆ. ಇಂದು ಸೂಪರ್​ ಸಂಡೇ ವಿತ್​​ ಸುದೀಪ್ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್​ ಅವರು ಮನೆಮಂದಿಗೆ ಚಿಕ್ಕ ಟಾಸ್ಕ್​ವೊಂದನ್ನು ಕೊಟ್ಟಿದ್ದಾರೆ.


ಹೌದು, ಸದ್ಯ ರಿಲೀಸ್​ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಬಿಗ್​ಬಾಸ್​ ಅನ್ನೋ ಈ ಹಾವು ಏಣಿ ಆಟದಲ್ಲಿ ನಿಮಗೆ ಏಣಿ ಆಗಿರೋರು ಯಾರು? ಹಾವು ಆಗಿರೋರು ಯಾರು ಎಂದು ಕೇಳಿದ್ದಾರೆ. ಕಿಚ್ಚ ಸುದೀಪ್​ ಕೊಟ್ಟ ಟಾಸ್ಕ್​ಗಾಗಿ ಬಿಗ್​ಬಾಸ್​​ 10 ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ಉತ್ತರ ನೀಡಿದ್ದಾರೆ.


ರೀಲಿಸ್​ ಆದ ಪ್ರೋಮೋದಲ್ಲಿ ನಮ್ರತಾ ಗೌಡ ಅವರು ಕಾರ್ತಿಕ್​ಗೆ ಹಾವು ಕೊಟ್ಟಿದ್ದಾರೆ. ಜೊತೆಗೆ ವಿನಯ್​​ ಗೌಡ ಕೂಡ ಕಾರ್ತಿಕ್​ಗೆ ಹಾವು ಕೊಟ್ಟಿದ್ದಾರೆ. ಬಳಿಕ ಕಾರ್ತಿಕ್​​ ವಿನಯ್​ಗೆ ಹಾವು ಕೊಟ್ಟಿದ್ದಾರೆ. ಹೀಗೆ ಅವರು ಹಾವು ಪಟ್ಟವನ್ನು ಏಕೆ ಕೊಟ್ಟಿದ್ದಾರೆ ಎಂದು ಕಿಚ್ಚ ಸುದೀಪ್​ ಮುಂದೆ ವಾದ ಮಂಡಿಸಿದ್ದಾರೆ. ಈ ಮೂಲಕ ವಿನಯ್​​ ಹಾಗೂ ಕಾರ್ತಿಕ್​ ಸ್ನೇಹದಲ್ಲಿ ಮತ್ತೆ ಬಿರುಕು ಮೂಡುತ್ತಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.


ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಗ್ಬಾಸ್ ಮುಗಿದು ಫಲಿತಾಂಶ ಹೊರಬೀಳಲಿದೆ. ಆದರೂ ಕೂಡ ಕೋಳಿ ಜಗಳ ನಿಂತಿಲ್ಲ. ಇನ್ನು ಈ ವಾರಾಂತ್ಯದಲ್ಲಿ ಸಿರಿ ಮನೆಗೆ ಸೇರಿದರೆ ಉಳಿದವರು ಎಲಿಮಿನೇಷನ್ ತೂಗು ಕತ್ತಿಯಿಂದ ಪಾರಾಗಿದ್ದಾರೆ.ನಮ್ರತಾ ಹಾಗೂ ಪ್ರತಾಪ್ ನಾಮಿನೇಷ್‌ನಿಂದ ಬಚಾವ್ ಆಗಿದ್ದಾರೆ. ಆದ್ರೆ ವೀಕೆಂಡ್ ಎಪಿಸೋಡ್‌ನಲ್ಲಿ ಯಾರು ಔಟ್ ಆಗುತ್ತಾರೆ ಅನ್ನೋದು ಗೊತ್ತಾಗಲಿದೆ. ಹೀಗಾಗಿ ದಿನೇ ದಿನ ಒಂಟಿ ಮನೆ ಕಹಾನಿ ಕುತೂಹಲದ ಗಟ್ಟ ತಲುಪುತ್ತಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.