'ಇವನೊಬ್ಬ ಕಾಗೆ ಪ್ರತಾಪ್' ಎಂದು ಅವಮಾನ ಮಾಡಿದ ಇಶಾನಿ, ನಿನ್ನೆಯ ಸಂಚಿಕೆಯಲ್ಲಿ ರಣರಂಗ

 | 
H

ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದ ಇಶಾನಿ ಸೇರಿದಂತೆ ಹಲವು ಕಾಂಟೆಸ್ಟೆಂಟ್ ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಎಂಟು ಜನರ ಜೊತೆ ಎಲ್ಲರೂ ಮಾತನಾಡುತ್ತಿದ್ದಾರೆ. ಯಾರು ಹೇಗೆ? ಹೇಗೆ ಆಡಬೇಕು, ಏನು ಮಾಡ್ತಿದ್ದೀರಿ ಎಂಬಿತ್ಯಾದಿ ಮಾತುಗಳನ್ನು ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಅನುಮಾನಿಸೋ ರೀತಿಯಲ್ಲಿ ಇಶಾನಿ ಆಡಿದ್ದಾರೆ. ಆ ಮಾತೇ ಅವರಿಗೆ ಮುಳುವಾಗಿದೆ.

ಕಾಗೆ ಕಕ್ಕ ಉದಾಹರಣೆಯನ್ನು ತೆಗೆದುಕೊಂಡ ಡ್ರೋನ್ ಪ್ರತಾಪ್ ಅವರಿಗೆ ಬೈದಿದ್ದಾರೆ. ಪ್ರತಾಪ್ ಅವರನ್ನು ಕಾಗೆಗೆ ಹೋಲಿಸಿದ್ದಾರೆ. ಇಶಾನಿ ಆಡಿದ ಈ ಮಾತುಗಳನ್ನು ಕೇಳಿದ ಡ್ರೋನ್ ಫ್ಯಾನ್ಸ್ ಇಶಾನಿ ಮೇಲೆ ಗರಂ ಆಗಿದ್ದಾರೆ. ಡ್ರೋನ್ ಗೆ ಮಾತನಾಡುವ ಯಾವುದೇ ಯೋಗ್ಯತೆ ಇಲ್ಲವೆಂದು ಕಾಮೆಂಟ್ ಮಾಡಲಾಗಿದೆ.

ಇಶಾನಿ ಮತ್ತು ಡ್ರೋನ್ ಪ್ರತಾಪ್ ಆಡಿದ ಮಾತುಗಳು ಕೂಡ ನಾನಾ ಅರ್ಥಗಳನ್ನು ಕಲ್ಪಿಸುತ್ತಿವೆ. ಇಶಾನಿ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸುಮ್ಮನೆ ಇದ್ದ ಇಶಾನಿ, ಡ್ರೋನ್ ಬಗ್ಗೆ ಮಾತಾಡಿ, ಕೆಟ್ಟವರೆನಿಸಿದ್ದಾರೆ. ಸುಮ್ಮನೆ ಇಲ್ಲದ ಸಲ್ಲದ ಕಾರಣಕ್ಕೆ ಮಾತಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಿಗ್ ಬಾಸ್ ಇನ್ನೇನು ಫಿನಾಲಿ ಹಂತ ತಲುಪಿದೆ. ಈ ವೇಳೆಯಲ್ಲಿ ಎಲಿಮಿನೇಟ್ ಆಗಿರುವಂತಹ ಅಷ್ಟೂ ಕಾಂಟೆಸ್ಟೆಂಟ್ ಗಳು ಮತ್ತೆ ಬಿಗ್ ಬಾಸ್ ಮನೆಗೆ ಹೋಗಿ, ಅಲ್ಲಿದ್ದವರ ತಲೆ ಕೆಡಿಸುತ್ತಿದ್ದಾರೆ. ಇರುವವರು ತೊಂದರೆ ಅನುಭವಿಸ್ತಾರಾ? ಅಥವಾ ಮುಂದಕ್ಕೆ ಹೋಗಲು ಸಹಾಯ ತಗೋತಾರಾ? ಕಾದು ನೋಡಬೇಕು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.