ಇದು R Boss ಕೋಟೆ ಕಣೋ; ಕಿಚ್ಚನಿಗೆ ಮತ್ತೆ ಡಿಚ್ಚಿ ಕೊಟ್ಟ ರಕ್ಷಕ್ ಬುಲೆಟ್

 | 
Hui

ರಕ್ಷಕ್ ಬುಲೆಟ್ ಅವರ ದೈನಂದಿನ ದಿನಚರಿಯನ್ನ ತಿಳಿದುಕೊಳ್ಳುವ ಕುತೂಹಲ ಅನೇಕರಲ್ಲಿದೆ. ರಕ್ಷಕ್ ಅವರ ಹವ್ಯಾಸ-ಅಭ್ಯಾಸ ಇದರ ಜೊತೆಯಲ್ಲಿ ಅವರ ಮುಂಬರುವ ಸಿನಿಮಾ, ಹೀಗೆ ಹತ್ತು ಹಲವು ವಿಚಾರಗಳ ಕುರಿತು ಪ್ರಶ್ನೆ ಇವರ ಅಸಂಖ್ಯಾತ ಅಭಿಮಾನಿಗಳಲ್ಲಿದೆ.

ಇನ್ನೂ ನಿಮಗೆ ಗೊತ್ತು. ರಕ್ಷಕ್ ಮಾತನಾಡಿದರೂ ಸುದ್ದಿ. ಕೆಮ್ಮಿದರೂ ಸುದ್ದಿ. ಟ್ರೋಲಿಗರಿಗೆ ಆಗಾಗ ಆಹಾರವಾಗ್ತಾನೇ ಬಂದಿದ್ದಾರೆ ರಕ್ಷಕ್. ಆದರೆ ಇದ್ಯಾವುದಕ್ಕೂ ರಕ್ಷಕ್ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಆನೆ ನಡೆದಿದ್ದೇ ಹಾದಿ ಎಂಬ ಮಾತನ್ನ ರಕ್ಷಕ್ ಆಗಾಗ ಸಾಬೀತು ಮಾಡ್ತಾನೇ ಬಂದಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಅನ್ನುವಂತೆ ರಕ್ಷಕ್ ಬುಲೆಟ್ ಈಗ ಹೊಚ್ಚ ಹೊಸ ಕಾರನ್ನ ಖರೀದಿಸಿದ್ದಾರೆ.

ತಮ್ಮ ಇನ್ಸ್ಟಾಗ್ರಾಂನ ಸ್ಟೋರಿಯಲ್ಲಿ ಫಳ ಫಳ ಅಂತ ಹೊಳೆಯುತ್ತಿರುವ ಕಾರಿನ ಫೋಟೋವನ್ನೂ ಹಾಕಿಕೊಂಡಿದ್ದಾರೆ. ಬಿಎಂಡಬ್ಲೂ ಕಾರನ್ನ ಪರ್ಚೇಸ್ ಮಾಡಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಕ್ಷಕ್ ಹಾಕಿಕೊಂಡಿದ್ದೇ ತಡ, ಇವರ ಆಡಂಬರದ ಜೀವನ ಶೈಲಿ ನೋಡಿ ಮೊದಲೇ ತಲೆಕೆಡಿಸಿಕೊಂಡಿದ್ದ ಅನೇಕರು ಈಗ ಇವರ ಆದಾಯದ ಮೂಲವನ್ನ ಅದೇ ಸಾಮಾಜಿಕ ಜಾಲತಾಣದ ಸಹಾಯದ ಮೂಲಕ ಹುಡುಕಲು ಶುರುವಿಟ್ಟುಕೊಂಡಿದ್ದಾರೆ.

ಯಾಕೆಂದರೆ ರಕ್ಷಕ್ ಬುಲೆಟ್ ಅಭಿನಯಿಸಿದ ಏಕೈಕ ಸಿನಿಮಾ ಗುರು ಶಿಷ್ಯರು. ಆ ಚಿತ್ರವನ್ನ ಹೊರತು ಪಡಿಸಿದರೆ ರಕ್ಷಕ್ ಕಂಡಿದ್ದು ಬಿಗ್ ಬಾಸ್ ಮನೆಯಲ್ಲಿಯೇ. ಇನ್ನೂ ಬೇರೆ ಯಾವ ಸಿನಿಮಾವನ್ನೂ ರಕ್ಷಕ್ ಘೋಷಿಸಿಲ್ಲ. ಹೀಗಿರುವಾಗ ರಕ್ಷಕ್ ಮನೆಗೆ ಹೊಸ ಬಿ.ಎಂ.ಡಬ್ಲೂ ಕಾರು ಬಂದಿಳಿದಿದೆ. ಹೀಗಾಗಿ ಬಿಟ್ಟ ಕಣ್ಣು ಬಿಟ್ಟಂತೆ ಕಾರಿನ ಫೋಟೋ ನೋಡ್ತಿರುವ ಅನೇಕರು ರಕ್ಷಕ್ ತೆಗೆದುಕೊಂಡಿರುವ ಬಿ.ಎಂ.ಡಬ್ಲೂ ಕಾರಿನ ಬೆಲೆ ಕಡಿಮೆ ಅಂದರೂ 40 ಲಕ್ಷದ ಮೇಲಿದೆ, 2.60 ಕೋಟಿಯ ಒಳಗಿದೆ ಎಂಬ ಚರ್ಚೆಯನ್ನ ಮಾಡ್ತಿದ್ದಾರೆ. ಇಷ್ಟೊಂದು ಕಾಸು ರಕ್ಷಕ್ ಬಳಿ ಬಂದಿದ್ದಾದರೂ ಎಲ್ಲಿಂದ ಎಂಬ ಪ್ರಶ್ನೆಯನ್ನ ತಮಗೆ ತಾವೇ ಕೇಳಿಕೊಳ್ಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.