ಬಿಗ್ ಬಾಸ್ ಮನೆಯಲ್ಲಿ ಮತ್ತೆ ಕುಚುಕುಚು, ಈ ಬಾರಿ ಸ್ವತಃ ಬಿಗ್ ಬಾಸ್ ಕಡೆಯಿಂದ ಕೊನೆಯ ವಾರ್ನಿಂಗ್

 | 
Hs

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಫಿನಾಲೆ ವಾರಕ್ಕೆ ತಲುಪುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಆಟದ ಕಾವು ಜಾಸ್ತಿಯಾಗಿದೆ. ಸದ್ಯ ಬಿಗ್​ಬಾಸ್ ವೀಕ್ಷಕರ ಚಿತ್ತ​ ಟ್ರೋಫಿ ಗೆಲ್ಲೋದ್ಯಾರು ಎಂಬುವುದರ ಮೇಲೆ ಬಿದ್ದಿದೆ. ಬಿಗ್​​ಬಾಸ್​ ಸ್ಪರ್ಧಿಗಳು ಟ್ರೋಫಿ ಗೆಲ್ಲಲು ನಾನಾ ಸರ್ಕಸ್ ಮಾಡುತ್ತಿದ್ದಾರೆ. ಸದ್ಯ ಬಿಗ್​ಬಾಸ್​ನಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಅದರಲ್ಲೂ ಓರ್ವ ಸ್ಪರ್ಧಿ ಮಿಡ್​ ವೀಕ್​ ಎಲಿಮಿನೇಶನ್​​ನಿಂದ ಆಚೆ ಬರಲಿದ್ದಾರೆ.

ಈ ಮೊದಲು ಇಂಗ್ಲಿಷ್ ಪದಗಳನ್ನು ಬಳಸಿ ಕಿಚ್ಚ ಅವರ ಕೈಯಲ್ಲಿ ಬೈಸಿಕೊಂಡಿದ್ದ ಸಂಗೀತಾ ಇದೀಗ ಮೈಕ್ ಸರಿಯಾಗಿ ಹಾಕಿಕೊಳ್ಳದೆ ಬೈಸಿಕೊಂಡಿದ್ದಾರೆ. ಹೌದು ಈಗಾಗಲೇ ದೊಡ್ಡ ಫ್ಯಾನ್ ಬೇಸ್ ಹೊಂದಿರುವ ಸಂಗೀತಾಗೆ ಬಿಗ್ಬಾಸ್ ಮತ್ತೊಮ್ಮೆ ವಾರ್ನಿಂಗ್ ನೀಡಿದೆ.ಬಿಗ್​ಬಾಸ್​ ಸೀಸನ್​ 10 ಶುರುವಾದ ದಿನದಿಂದ ಸ್ನೇಹಿತರಾಗಿದ್ದ ಸಂಗೀತಾ ಹಾಗೂ ಕಾರ್ತಿಕ್​ ಮಧ್ಯೆ ಮತ್ತೆ ಟಾಕ್ ವಾರ್ ಆಗಿದೆ. 

ಕಲರ್ಸ್​ ಕನ್ನಡ ರಿಲೀಸ್​ ಮಾಡಿದ ಹೊಸ ಪ್ರೋಮೋದಲ್ಲಿ ತಾವು ವಿಜೇತರಾದ್ರೆ ಉಳಿದಿರುವ ಯಾವ ಸ್ಪರ್ಧಿ ಯಾವ ಸ್ಥಾನದಲ್ಲಿರಬೇಕು ಎಂದು ಬಿಗ್​ಬಾಸ್ ಸೂಚಿಸುತ್ತಾರೆ. ಆಗ ಒಬ್ಬೊಬ್ಬರು ಇತರ ಸ್ಪರ್ಧಿಗಳನ್ನು ಒಂದೊಂದು ಸ್ಥಾನದಲ್ಲಿ ಇಟ್ಟಿದ್ದಾರೆ. ಈ ಟಾಸ್ಕ್ ವೇಳೆ ಸಂಗೀತಾ ಹಾಗೂ ಕಾರ್ತಿಕ್​ ನಡುವೆ ಮತ್ತೆ ಜಗಳವಾಗಿದೆ.ಸಂಗೀತಾ ತಾನು ಗೆದ್ದರೆ ಕಾರ್ತಿಕ್​ ಅವರನ್ನು 6ನೇ ಸ್ಥಾನದಲ್ಲಿ ಇಡುತ್ತೇನೆ ಎಂದಿದ್ದಾರೆ.

ಸಂಗೀತಾ 6ನೇ ಸ್ಥಾನ ಕೊಟ್ಟಿದ್ದಕ್ಕೆ ಕಾರ್ತಿಕ್ ಮಹೇಶ್ ಸಿಟ್ಟಾಗಿದ್ದಾರೆ. ಸಂಗೀತಾ ಮನರಂಜನೆ ನೀಡುವಲ್ಲಿ ಝೀರೋ ಎಂದಿದ್ದಾರೆ. ನಿಮ್ಮಿಂದ ನನಗೆ ಫೈನಲ್ಸ್​ಗೆ ಟಿಕೆಟ್ ಸಿಕ್ಕಿಲ್ಲ. 6ನೇ ಸ್ಥಾನಕ್ಕೆ ಕಾರ್ತಿಕ್​ ಹೇಗೆ ಬಂದ್ರು ಅನ್ನೋದು ಎಲ್ಲರಿಗೂ ಗೊತ್ತು ಎಂದು ಸಂಗೀತಾ ಕಾರ್ತಿಕ್​ಗೆ ತಿರುಗೇಟು ನೀಡಿದ್ದಾರೆ. ಇವರಿಬ್ಬರ ಜಗಳ ನೋಡಿ ವಿನಯ್ ಗೌಡ ಜೋರಾಗಿ ನಗುಬೀರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.