ಆ ನಾಲ್ಕು ಜನ ಕಿರಿಕ್ ಕೀರ್ತಿ ಹೆಂಡತಿ ಜೀವನದಲ್ಲಿ ಮಾ.ಡಿದ್ದೇನು, ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿ ಕೀರ್ತಿ

 | 
Hhh

ಕಿರಿಕ್‌ ಕೀರ್ತಿ ಹೆಸರು ಕೇಳದವರೇ ಇಲ್ಲ. ಸಿನಿಮಾ ಪತ್ರಕರ್ತನಾಗಿ, ರೆಡಿಯೋ ಜಾಕಿ, ನಟನಾಗಿ, ನಿರೂಪಕನಾಗಿ, ಕನ್ನಡ ಪರ ಹೋರಾಟಗಾರನಾಗಿ ಕೀರ್ತಿ ಗುರುತಿಸಿಕೊಂಡಿದ್ದಾರೆ. ಕೀರ್ತಿ ಅವರ ಮಾತುಗಳಿಗೆ ಮನ ಸೋಲದವರೇ ಇಲ್ಲ. ತಮ್ಮ ಪ್ರತಿಭೆಯಿಂದ ಲಕ್ಷಾಂತರ ಜನರನ್ನು ರಂಜಿಸಿದ್ದ ಕೀರ್ತಿ ಕೂಡಾ ಒಮ್ಮೆ ಆತ್ಮಹತ್ಯೆಗೆ ನಿರ್ಧರಿಸಿದ್ದರಂತೆ ಅಂದ್ರೆ ನಂಬ್ತೀರಾ..? ಹೌದು, ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದಾರೆ.

ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಸೆಲೆಬ್ರಿಟಿಗಳ ಜೀವನ ಬಹಳ ಸಂತೋಷವಾಗಿರುತ್ತದೆ ಅನ್ನೋದು ಎಲ್ಲರ ತಪ್ಪು ಅಭಿಪ್ರಾಯ. ಆದರೆ ಅವರಿಗೂ ಸಮಸ್ಯೆಗಳಿರುತ್ತವೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೀರ್ತಿ ಕೂಡಾ ಕೆಲವೊಂದು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಖಿನ್ನತೆ ಅನುಭವಿಸಿದ್ದರಂತೆ. ಇದೇ ವೇಳೆ ಆತ್ಮಹತ್ಯೆ ನಿರ್ಧಾರ ಮಾಡಿ ಡೆತ್‌ ನೋಟ್‌ ಕೂಡಾ ಬರೆದಿಟ್ಟಿದ್ದರಂತೆ. ಆದರೆ ನಂತರ ಮನಸ್ಸು ಬದಲಾಯಿಸಿಕೊಂಡೆ ಎಂದು ಅಂದಿನ ಘಟನೆಯನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡಿ 10 ನಿಮಿಷ ಧ್ಯಾನ ಮಾಡಿದೆ. ತಡವಾದ್ರೂ ಪರವಾಗಿಲ್ಲ ನನ್ನ ನಂಬಿದ ಎಲ್ಲರಿಗೂ ಅವರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ಹಾಗೆ ಸಾಧಿಸಬೇಕು ಅಂತ ಡಿಸೈಡ್ ಮಾಡಿದೆ. ಮನಸ್ಸಿನಲ್ಲಿದ್ದ ಕೆಟ್ಟ ಅಲೋಚನೆಗಳನ್ನು ಕಿತ್ತು ಬಿಸಾಕಿದ್ದೇನೆ. ಕೆಲವರನ್ನು ಕಳೆದುಕೊಂಡಿದ್ದರ ಹೊರತು ಬೇರೆ ಎಲ್ಲವನ್ನೂ ಟ್ರ್ಯಾಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ. ನಿಮ್ಮ ಬೆಂಬಲ‌ ಜೊತೆಗಿರಲಿ, ಡಿಪ್ರೆಷನ್‌ನಿಂದ ಮತ್ತೆ ವಾಪಸ್ ಬರಲು ಸಹಕರಿಸಿ, ಮತ್ತೆ ನನ್ನ ಮುಖದ ಮೇಲಿನ ನಗು ವಾಪಸ್ ತರುವ ತನಕ ಪ್ರಯತ್ನ‌ ನಿರಂತರ, ಇದು ಹೇಳಿಕೊಳ್ಳಬಾರದ ವಿಷಯ, ಆದ್ರೆ ಹೇಳಿಕೊಂಡರಷ್ಟೇ ಸಮಾಧಾನ ಎಂದು ಕೀರ್ತಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ನನ್ನ ಹೆಣ ಎತ್ತಿಕೊಂಡು ಹೋಗಬೇಕಾದರೆ ನಾನು ತಮಟೆ ಹೊಡಿಬಾರದು ಎಂದೆಲ್ಲ ಯೋಚಿಸಿದ್ದೆ  ಆದರೆ ಕೀರ್ತಿ ಅವರ ಪೋಸ್ಟ್‌ಗೆ ನೆಟಿಜನ್ಸ್‌ ಕಮೆಂಟ್‌ ಮೂಲಕ ಧೈರ್ಯ ಹೇಳುತ್ತಿದ್ದಾರೆ. ಕೀರ್ತಿಯವರೇ, ಜಿಹಾದಿಗಳ ಬೆದರಿಕೆ ಕರೆಗೆ ಹೆದರುವ ಅಗತ್ಯವಿಲ್ಲ, ಹಿಂದೂಗಳು ಹೇಡಿಗಳಲ್ಲ ಹಿಂದೂಗಳು ಶೌರ್ಯವಂತರು ನಾವು ನಿಮ್ಮ ಜೊತೆ ಇದ್ದೇವೆ, ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಭಗವಂತನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಜೀವನ ಧೈರ್ಯದಿಂದ ಸಾಗಬೇಕು ಆಗಲೇ ಜಗತ್ತಿಗೆ ನಾವು ಯಾರು ಎಂದು ತಿಳಿಯುವುದು. 

ಕಷ್ಟ ಮನುಷ್ಯನಿಗೆ ಬರೋದು ಮರಕ್ಕಲ್ಲ, ಮುಂದೆ ಸಾಗಿ ಜೊತೆಗೆ ನಿಮ್ಮ ಜೂನಿಯರ್ ಇದ್ದಾನೆ ಒಳ್ಳೆದಾಗಲಿ, ಎಲ್ಲಾ ಸಮಸ್ಯೆಗೂ ಸಾವು ಪರಿಹಾರವಲ್ಲ, ಖಿನ್ನತೆಯಿಂದ ಹೊರ ಬನ್ನಿ, ಎಲ್ಲವೂ ಸರಿ ಹೋಗುತ್ತದೆ, ನಿಮಗಿಂತ ಕಷ್ಟ ಎದುರಿಸುತ್ತಿರುವವರನ್ನು ನೋಡಿ, ಅವರ ಮುಂದೆ ನಿಮ್ಮ ಕಷ್ಟಗಳು ಏನೂ ಅಲ್ಲ ಎಂಬುದು ಅರಿವಾಗುತ್ತದೆ ಎಂದು ಜನರು ಕೀರ್ತಿಗೆ ಬುದ್ಧಿ ಹೇಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.