ಜಯಮಾಲಾ ಸೌಂದರ್ಯಕ್ಕೆ ಮರುಳಾಗಿದ್ದ ಟೈಗರ್ ಪ್ರಭಾಕರ್; ಗಂಡನ ಸಾ.ವಿನ ಬಳಿಕ ಮತ್ತೆ ಎರಡನೇ ಮದುವೆ

 | 
Frt

ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಮಾಲಾ ಬಹಳಷ್ಟು ಪ್ರಸಿದ್ಧರು. ಸ್ಯಾಂಡಲ್‌ವುಡ್ ಮೇರು ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ ಜಯಮಾಲಾ ಡಾ ರಾಜ್‌ಕುಮಾರ್ ಜತೆ ಗಿರಿಕನ್ಯೆ, ದಾರಿ ತಪ್ಪಿದ ಮಗ, ಬಬ್ರುವಾಹನ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಮೇರು ನಟರಾದ ಡಾ ವಿಷ್ಣುವರ್ಧನ್, ಅಂಬರೀಷ್, ಶಂಕರ್‌ನಾಗ್, ಅನಂತ್‌ನಾಗ್, ಟೈಗರ್ ಪ್ರಭಾಕರ್ ಅವರುಗಳೊಂದಿಗೆ ಕೂಡ ಜಯಮಾಲಾ ನಾಯಕಿಯಾಗಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ. 

ರೆಬೆಲ್ ಪಾತ್ರಗಳನ್ನು  ಹೆಚ್ಚಾಗಿ ಮಾಡಿರುವ ನಟಿ ಜಯಮಾಲಾ ನಿಜ ಜೀವನದಲ್ಲಿ ಕೂಡ ತಮ್ಮ ನೇರ ನಡೆ-ನುಡಿಗೆ ಹೆಸರುವಾಸಿ. ಅಂತ, ಶಂಕರ್‌ಗುರು, ಪ್ರೇಮದ ಕಾಣಿಕೆ, ಬೆಂಕಿ ಬಿರುಗಾಳಿ, ಖದೀಮ ಕಳ್ಳರು, ಮುನಿಯನ ಮಾದರಿ, ಹೇಳುತ್ತಾ ಹೋದರೆ ಪಟು ತುಂಬುವಷ್ಟು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ ಜಯಮಾಲಾ. ತೆಲುಗು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇಂಥ ನಟಿ ಟೈಗರ್ ಪ್ರಭಾಕರ್ ಜತೆ ಪ್ರೇಮದಲ್ಲಿ ಬಿದ್ದು ಅವರನ್ನು 1985ರಲ್ಲಿ ಮದುವೆಯಾಗಿದ್ದರು. 

ಆದರೆ, ಸಂಸಾರದಲ್ಲಿ ಬಂದ ಮನಸ್ತಾಪದಿಂದ ಈ ಇಬ್ಬರೂ 1988ರಲ್ಲಿ ಪರಸ್ಪರ ದೂರವಾಗಿದ್ದಾರೆ. ಬಳಿಕ ನಟಿ ಜಯಮಾಲಾ ಅವರು ಫೋಟೋಗ್ರಾಫರ್ ಹೆಚ್ಎಂ ರಾಮಚಂದ್ರ ಅವರನ್ನು ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಜಯಮಾಲಾ ಅವರಿಗೆ ಸೌಂದರ್ಯ ಹೆಸರಿನ ಮಗಳು ಇದ್ದಾರೆ. ಅವರು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಜೋಡಿಯಾಗಿ ಗಾಡ್ ಫಾದರ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ನಟಿಯಾಗಿ ಜಯಮಾಲಾ ಅವರು ಸಾಕಷ್ಟು ಹೆಸರು ಮಾಡಿದ ಹಾಗೆಯೇ 1986ರಲ್ಲಿ ನಾನು ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಒಳಗೆ ಪ್ರವೇಶಿಸಿದ್ದೇನೆ ಹಾಗೂ ಅಯ್ಯಪ್ಪ ಸ್ವಾಮಿಯ ಪ್ರತಿಮೆಯನ್ನು ಮುಟ್ಟಿದ್ದೇನೆ ಎಂದು ಹೇಳುವ ಮೂಲಕ ಭಾರೀ ವಿವಾದಕ್ಕೂ ಒಳಗಾಗಿದ್ದರು. ಆದರೆ, ಆ ಬಳಿಕ ಅವರು ಯಾವುದೇ ವಿವಾದದ ಸುಳಿಯಲ್ಲಿ ಸಿಲುಕಲಿಲ್ಲ.

ನಟಿ ಜಯಮಾಲಾ ಅವರು ಸರ್ಕಾರದಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮೂಲಕ (Member of the Karnataka Legislative Council-Year 2014–2020) ಆಡಳಿತದಲ್ಲಿದ್ದ ಸರ್ಕಾರದ ಭಾಗವಾಗಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ನಟಿಸುತ್ತಲೇ, ರಾಜಕೀಯ ಜೀವನ ನಡೆಸುತ್ತಲೇ ಜಯಮಾಲಾ ಅವರು ಪಿಹೆಚ್‌ಡಿ ಪದವಿ ಕೂಡ ಪಡೆದಿದ್ದು ಅವರ ಹೆಚ್ಚುಗಾರಿಕೆ. ಇಂಥ ಖ್ಯಾತ ನಟಿ ಜಯಮಾಲಾಗೆ ಈಗ 65 ವರ್ಷ ವಯಸ್ಸು. ಆದರೆ ಇಂದಿಗೂ ಕೂಡ ಅವರದು ಬತ್ತದ ಸಲೆಯ ವ್ಯಕ್ತಿತ್ವ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.