ಜಗನ್ ಮೋಹನ್ ರೆಡ್ಡಿಯನ್ನು ಸೋಲಿಸಿದ ತಿರುಪತಿ ತಿಮ್ಮಪ್ಪ ಸ್ವಾಮಿ;
ಕರ್ನಾಟಕ ನೆರೆರಾಷ್ಟ್ರ ಆಂಧ್ರಪ್ರದೇಶದ ರಾಜಕೀಯಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬರೋಬ್ಬರಿ 5 ವರ್ಷಗಳ ಬಳಿಕ ಜನಸೇನಾ, ಟಿಡಿಪಿ ಮತ್ತು ಜನಸೇನಾ ಮೈತ್ರಿಗೆ ಗೆಲುವಾಗಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ಗೆ ಹೀನಾಯ ಸೋಲಾಗಿದೆ. ಆಂಧ್ರಪ್ರದೇಶದಲ್ಲಿ ಲೋಕಸಭಾ ಜೊತೆಗೆ ವಿಧಾನಸಭಾ ಚುನಾವಣೆ ಕೂಡ ನಡೆದಿದೆ. 175 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಜನಸೇನಾ, ಟಿಡಿಪಿ ಮತ್ತು ಜನಸೇನಾ ಮೈತ್ರಿಗೆ ಭರ್ಜರಿ ಜಯ ಸಿಕ್ಕಿದೆ.
ಟಿಡಿಪಿ ಬರೋಬ್ಬರಿ 130 ಕ್ಷೇತ್ರಗಳಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ 20 ಮತ್ತು ಬಿಜೆಪಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವತ್ತ ಹೆಜ್ಜೆ ಹಾಕಿದೆ. ವೈಎಸ್ಆರ್ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ.ಜೂನ್ 9ನೇ ತಾರೀಕಿನಂದು ಆಂಧ್ರಪ್ರದೇಶದ ನೂತನ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ನಟ ಪವನ್ ಕಲ್ಯಾಣ್ ಡಿಸಿಎಂ ಆಗಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಕ್ಕಿ ಹೈರಾಣಗೊಂಡಿರುವ ವೈ.ಎಸ್. ಜಗನ್‌ಮೋಹನ ರೆಡ್ಡಿ ನಿಶ್ಚಿತ ಸಿಬಿಐ ಬಂಧನದಿಂದ ಪಾರಾಗಲು ತಿರುಪತಿ ತಿಮ್ಮಪ್ಪನ ಮೊರೆಹೋಗಿದ್ದಾರೆ. ಆದರೆ ಮೂಲತಃ ಜಗನ್ ಅವರ ತಂದೆ ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬುದು ಗಮನಾರ್ಹ ಸಂಗತಿ. ಅದಾಗಿ ಕೂಡಾ ತಿರುಪತಿಯ ತಿಮ್ಮಪ್ಪನ ಟ್ರಸ್ಟಿ ಆಗಿದ್ದರು.
ಅಷ್ಟೇ ಅಲ್ಲದೆ ಇಡೀ ತಿರುಪತಿ ತಿಮ್ಮಪ್ಪನ ದೇಗುಲದ ಆಡಳಿತವನ್ನ ಕ್ರೈಸ್ತ ಧರ್ಮದ ಜನರಿಗೆ ವಹಿಸಿಕೊಡುವ ಹುನ್ನಾರ ನಡೆಸಿದ್ದರು. ಅದೇ ಕಾರಣದಿಂದ ಜಗನ್ ಕೂಡಾ ತಿಮ್ಮಪನ ಶಾಪಕ್ಕೆ ಒಳಗಾಗಿದ್ದಾರೆ ಎನ್ನುವ ಭಾವನೆ ಎಲ್ಲರಲ್ಲೂ ಮೂಡಿದೆ. ಅಲ್ಲದೇ ಈ ಹಿಂದೆ ಚಂದ್ರಬಾಬು ನಾಯ್ಡು ಬಂಧಿಸಿ ಚಂದ್ರಬಾಬು ನಾಯ್ಡು ಅವರ ಬಂಧನ ಮನೆಯೊಳಗಿದ್ದ ಮಹಿಳೆಯರನ್ನೂ ಕೂಡ ಬೀದಿಗಿಳಿಯುವಂತೆ ಮಾಡಿತ್ತು.
ವೈಎಸ್ಆರ್ಸಿಪಿ ಸರ್ಕಾರದ ನಿರಂಕುಶಾಧಿಕಾರದ ವಿರುದ್ಧ ಪ್ರತಿಭಟಿಸುವಂತೆ ಮಾಡಿತ್ತು. ವಿಜಯವಾಡದ ಬೆಂಜ್ ಸರ್ಕಲ್ ಮತ್ತು ಗುಂಟೂರಿನ ಬೃಂದಾವನ ಗಾರ್ಡನ್ಗಳಲ್ಲಿ ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿದ್ದರು. ಗುಜ್ಜನಗುಂಡ್ಲದಿಂದ ಲಾಡ್ಜ್ ಸೆಂಟರ್ವರೆಗೆ ಹಲವು ಕಿಲೋಮೀಟರ್ ಮೆರವಣಿಗೆ ನಡೆಸಿ, ಪ್ರತಿಭಟಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.