ಒಂದು ರಾತ್ರಿಗೆ 25 ಲಕ್ಷ ಡಿಮಾಂಡ್ , ತ್ರಿಶಾ ಹೊಸ ವಿವಾದ

 | 
Hss

ಇತ್ತೀಚೆಗೆ ವಜಾಗೊಂಡಿರುವ ಎಐಎಡಿಎಂಕೆಯ ಸೇಲಂ ವೆಸ್ಟ್ ಯೂನಿಯನ್ ಕಾರ್ಯದರ್ಶಿ ಎವಿ ರಾಜು ಅವರು ನಟಿಯರ ಬಗ್ಗೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನು ತಮಿಳು ನಟಿ ತ್ರಿಷಾ ಖಂಡಿಸಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ನಟಿ ತ್ರಿಶಾ ಕೃಷ್ಣನ್ ವಿರುದ್ಧ ಮತ್ತೊಬ್ಬರು ಮಾನಹಾನಿ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ವಜಾಗೊಂಡಿರುವ ಎಐಎಡಿಎಂಕೆಯ ಸೇಲಂ ವೆಸ್ಟ್ ಯೂನಿಯನ್ ಕಾರ್ಯದರ್ಶಿ ಎವಿ ರಾಜು ಅವರು ನಟಿಯರ ಹೆಸರನ್ನು ರಾಜಕೀಯ ನಾಯಕರೊಂದಿಗೆ ಸೇರಿಸಿ ಮಾತಾಡಿದ್ರು. 2017 ರಲ್ಲಿ, ಎವಿ ರಾಜು ಅವರು ಎಐಎಡಿಎಂಕೆಯಲ್ಲಿನ ಅಧಿಕಾರಕ್ಕಾಗಿ ಹೋರಾಟದ ಸಮಯದಲ್ಲಿ ಶಾಸಕರನ್ನು ಕೌಯಂತ್ತೂರಿನ ರೆಸಾರ್ಟ್ನಲ್ಲಿ ಇರಿಸಿದಾಗ ಈ ಘಟನೆ ಸಂಭವಿಸಿದೆ. ಈ ವೇಳೆ ನಿಂದನಾತ್ಮಕ ಹೇಳಿಕೆ ನೀಡಿದ್ದರು.

ಜಯಲಲಿತಾ ಅವರ ಸಾವಿನ ನಂತರ ಅಧಿಕಾರಕ್ಕೆ ಬಂದ ವಿಕೆ ಶಶಿಕಲಾ ನೇತೃತ್ವದ ಎಐಎಡಿಎಂಕೆ ನಾಯಕತ್ವವು ಬಂಡಾಯ ನಾಯಕ ಓ ಪನ್ನೀರಸೆಲ್ವಂ ಅವರೊಂದಿಗೆ ಶಾಸಕರು ಹೋಗದಂತೆ ಹಲವಾರು ಪ್ಲಾನ್ ಮಾಡಿದ್ರು ಎಂದು ಎವಿ ರಾಜು ಆರೋಪಿಸಿದರು. ಚೆನ್ನೈನ ಕೌಯಂತ್ತೂರಿನ ಬೀಚ್ ಸೈಡ್ ರೆಸಾರ್ಟ್ನಲ್ಲಿ ಎಐಎಡಿಎಂಕೆ ತನ್ನ ಶಾಸಕರನ್ನು ಒಟ್ಟಿಗೆ ಇರಿಸುವ ಪ್ರಯತ್ನಕ್ಕಾಗಿ ಶಾಸಕರೊಬ್ಬರ ಕೋರಿಕೆಯ ಮೇರೆಗೆ ನಟಿ ತ್ರಿಷಾ ಅವರನ್ನು ರೆಸಾರ್ಟ್​ಗೆ ಕರೆತರಲಾಗಿದೆ ಎಂದು ಎವಿ ರಾಜು ಹೇಳಿದ್ದಾರೆ.

ಈ ಘಟನೆ ಚರ್ಚೆಯಾದ ಬೆನ್ನಲ್ಲೇ ನಟಿ ತ್ರಿಷಾ ರಾಜಕೀಯ ನಾಯಕನ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಚಾರಗಿಟ್ಟಿಸಿಕೊಳ್ಳಲು ಹಾಗೂ ಎಲ್ಲರ ಗಮನ ಸೆಳೆಯಲು ಜನ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ. ಇದನ್ನು ಪದೇ ಪದೇ ನೋಡುವುದು ಅಸಹ್ಯಕರವಾಗಿದೆ. ಇವರ ಹೇಳಿಕೆ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಟಿ ತ್ರಿಶಾ ಬರೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.