ತ್ರಿಷಾ ವಿಜಯ್ ಕುಚುಕುಚು, ಇಬ್ಬರ ವಿಚಾರದಲ್ಲಿ ಗರಂ ಆದ ಅಣ್ಣಮಲೈ
Dec 21, 2024, 08:49 IST
|
ತಮಿಳುನಾಡಿನ ಸೂಪರ್ ಸ್ಟಾರ್ ವಿಜಯ್ ಅವರು ಹಾಗೂ ತ್ರಿಷಾ ಇದೀಗ Dating ಮಾಡುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಇತ್ತಿಚೆಗೆ ಈ ಇಬ್ಬರು ಜೊತೆಯಾಗಿ ಸುತ್ತಾಡುವ ವಿಡಿಯೋ ಕೂಡ ವೈರಲ್ ಆಗಿತ್ತು. ಏರ್ಪೋರ್ಟ್ ನಲ್ಲಿ ಈ ಇಬ್ಬರು ಕಾಣಿಸಿಕೊಂಡಿದ್ದರು.
ಇನ್ನು ತ್ರಿಷಾ ಅವರು ವಿಜಯ್ ಅವರ ಜೊತೆ ಇರುವುದು ದೊಡ್ಡ ವಿಚಾರವಲ್ಲ. ಯಾಕೆಂದರೆ ಈ ಇಬ್ಬರು ಹಳೆ ಪ್ರೇಮಿಗಳು ಎಂಬುವುದು ಎಲ್ಲರಿಗೂ ತಿಳಿದೆ. ಆದರೆ ಇದೀಗ ಈ ವಿಚಾರಕ್ಕೆ ಅಣ್ಣಮಲೈ ತುಪ್ಪ ಸುರಿದಿದ್ದಾರೆ.
ಹೌದು, ಈ ಇಬ್ಬರು ಏರ್ಪೋರ್ಟ್ ನಲ್ಲಿ ಇದ್ದಾಗ ಇವರ ವಿಡಿಯೋ ಮಾಡಿದ್ದು ಯಾರು, ನಮ್ಮ ಗುಪ್ತಚರ ಇಲಾಖೆ ಇಂತಹ ಕೆಲಸ ಮಾಡುವುದಕ್ಕೆ ಅನುಮತಿ ಇಲ್ಲ. ಆದರೂ ಕೂಡ ಇದು ಹೇಗೆ ಲೀಕ್ ಆಯ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಏರ್ಪೋರ್ಟ್ ಒಳಗಡೆ ಇಂತಹ ಕೆಲಸ ಮಾಡಲು ಯಾರಿಗೂ ಅವಕಾಶ ಇಲ್ಲ ಎಂದಿದ್ದಾರೆ. ಅದರಲ್ಲೂ ಒಬ್ಬ ನಟ ಹಾಗೂ ಇನ್ನೇನು ಚುನಾವಣೆಗೆ ಬರಲಿರುವ ಒಬ್ಬ ವ್ಯಕ್ತಿ ಬಗ್ಗೆ ಈ ರೀತಿ ವಿಡಿಯೋ ಮಾಡುವುದು ಸರಿಯಲ್ಲ ಎಂದು ತಮಿಳುನಾಡಿನ ಸರ್ಕಾರದಕ್ಕೆ ಅಣ್ಣ ಮಲೈ ಪ್ರಶ್ನೆ ಮಾಡಿದ್ದಾರೆ.