ದಳಪತಿ ವಿಜಯ್ ಬಂಗಲೆಯಲ್ಲಿ ತ್ರಿಷಾ ಓಡಾಟ, ಗಂಡನ ಹಾದಿ ತಪ್ಪುತ್ತಿದೆ ಎಂದ ವಿಜಯ್ ಧರ್ಮಪತ್ನಿ
Dec 15, 2024, 13:14 IST
|

ತಮಿಳು ಚಿತ್ರರಂಗದ ಹೆಸರಾಂತ ನಟಿ ತ್ರಿಷಾ ಇದೀಗ ದಳಪತಿ ವಿಜಯ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಮುದ್ದಾದ ಹೆಂಡತಿ ಇದ್ದರೂ ಕೂಡ ಮತ್ತೊಂದು ಹೂವಿಗೆ ಆಸೆ ಪಟ್ಟ ವಿಜಯ್ ಎಂಬ ಗಾಳಿ ಸುದ್ದಿ ಎಬ್ಬಿದೆ. ಹೌದು, ದಳಪತಿ ವಿಜಯ್ ಅವರು ಹಲವಾರು ಸಿನಿಮಾದಲ್ಲಿ ನಟಿಸಿ ಕೋಟ್ಯಾಂತರ ಜನರ ಹೃದಯ ಗೆದ್ದ ನಟ. ಈ ನಟನಿಗೆ ಇವತ್ತು ರಾಜಕಾರಣಿ ಆಗಬೇಕು ಎಂಬ ಮಹಾದಾಸೆಯಿದೆಯಂತೆ.
https://youtube.com/shorts/jXWfrypkITc?si=JFbpFClbjQ3f2SSZ
ಹೌದು, ಇತ್ತಿಚೆಗೆ ರಾಜಕೀಯ ಕ್ಷೇತ್ರಕ್ಕೆ ಬರವುದಾಗಿ ನಟ ವಿಜಯ ಅವರು ತಮಿಳುನಾಡಿನಲ್ಲಿ ಬೃಹತ್ ಸಾರ್ವಜನಿಕ ಸಭೆ ಹಮ್ಮಿಕೊಂಡಿದ್ದರು. ಈ ಸಭೆ ಬಳಿಕ ವಿಜಯ್ ಅವರು ತಮಿಳುನಾಡಿನಲ್ಲಿ ಹೊಸ ಗದ್ದಲವನ್ನೇ ಸೃಷ್ಟಿ ಮಾಡಿದ್ದರು.
ಇದಾದ ಬಳಿಕ ಇದೀಗ ತ್ರಿಷಾ ಜೊತೆ ವಿಜಯ್ ಅವರು ಒಡನಾಟ ಇಟ್ಟುಕೊಂಡಿದ್ದಾರೆ ಎಂಬ ಗಾಸಿಪ್ ಎದ್ದಿದೆ. ಇನ್ನೂ ಮದುವೆಯಾಗದ ತ್ರಿಷಾ ಅವರು ತಮಿಳು ಚಿತ್ರರಂಗದ ಹಾಟ್ ಬ್ಯೂಟಿ. ಈ ಬ್ಯೂಟಿ ಹಿಂದೆ ಬಿದ್ದ ನಟರೆಷ್ಟು ಅನ್ನೊದು ಈ ಮೊದಲೇ ತಿಳಿದ ವಿಚಾರ. ಆದರೆ ಇದೀಗ ದಳಪತಿ ವಿಜಯ್ ಹಾಗೂ ತ್ರಿಷಾ ನಡುವೆ ಬೇರೆಯೇ ಸಂಬಂಧ ಇದೆ ಎಂಬ ಬಿಸಿಬಿಸಿ ಸುದ್ದಿ ಎಬ್ಬಿದೆ